ಕರ್ನಾಟಕ

karnataka

ETV Bharat / state

ಬಿಗ್​ ಬಾಸ್​ ಮನೆಯಿಂದಲೇ ವರ್ತೂರು​ ಸಂತೋಷ್​ ಅರೆಸ್ಟ್​​.. ಕಾರಣವೇನು? - ಈಟಿವಿ ಭಾರತ ಕನ್ನಡ

ಕನ್ನಡದ ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿ ವರ್ತೂರು​ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ವರ್ತೂರು​ ಸಂತೋಷ್
ವರ್ತೂರು​ ಸಂತೋಷ್

By ETV Bharat Karnataka Team

Published : Oct 23, 2023, 10:51 AM IST

Updated : Oct 24, 2023, 2:55 PM IST

ಬೆಂಗಳೂರು:ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿ ವರ್ತೂರು​ ಸಂತೋಷ್​ ಅವರನ್ನು ಬಿಗ್​ ಬಾಸ್​ ಮನೆಯಿಂದಲೇ ವಶಕ್ಕೆ ಪಡೆಯಲಾಗಿದೆ. ಹುಲಿ ಉಗುರಿನ ಡಾಲರ್​ ಧರಿಸಿದ್ದ ಆರೋಪದ ಮೇಲೆ ಅವರನ್ನು ಅರಣ್ಯಾಧಿಕಾರಿಗಳು ತಡರಾತ್ರಿ ಅರೆಸ್ಟ್​ ಮಾಡಿದ್ದಾರೆ. ಭಾನುವಾರ ರಾತ್ರಿ ಸಂತೋಷ್​ ಅವರನ್ನು ವಶಕ್ಕೆ ಪಡೆದಿದ್ದು, ಸದ್ಯ ಅವರು ಅರಣ್ಯಾಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಇಂದು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧನ: ಹುಲಿಯ ಉಗುರಿನ ಡಾಲರ್ ಅನ್ನು ಕೊರಳಿಗೆ ಧರಿಸಿರುವ ಸಂತೋಷ್ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಡಾಲರ್ ಜಪ್ತಿ ಮಾಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಡಾಲರ್​ನಲ್ಲಿ ಬಳಸಿರುವುದು ಹುಲಿ ಉಗುರು ಎಂಬುದು ಸಾಬೀತಾಗಿದೆ ಎಂದು ತಿಳಿದು ಬಂದಿದೆ.

ವರ್ತೂರು ಸಂತೋಷ್ ಯಾರು?: ವರ್ತೂರಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ಸಂತೋಷ್‌, ‘ರೈತ ಅಂದರೆ ಸಗಣಿಯನ್ನೇ ಎತ್ತಬೇಕು ಎಂದೇನಿಲ್ಲ; ಶೋಕಿನೂ ಮಾಡಬಹುದು’ ಎಂದು ದಿಟ್ಟವಾಗಿ ಹೇಳುತ್ತಾರೆ. ಹಳ್ಳಿಕಾರ್ ತಳಿಯ ಎತ್ತುಗಳನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತಾರೆ. ಎತ್ತುಗಳ ಓಟದ ಸ್ಪರ್ಧೆಯಲ್ಲಿಯೂ ಇವರು ಖ್ಯಾತರಾದವರು. ಸದ್ಯ ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:Bigg Boss Kannada : ಬಿಗ್​ ಬಾಸ್​ ಅಸಲಿ ಆಟ ಶುರು.. ಇಲ್ಲಿದೆ ಸ್ಪರ್ಧಿಗಳ ಮಾಹಿತಿ

ಬಿಗ್​ ಬಾಸ್​ ಸೀಸನ್​ 10 ಕನ್ನಡ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಅಕ್ಟೋಬರ್ 8 ರಿಂದ ಪ್ರಾರಂಭವಾದ ಶೋ, ಇಂದಿನಿಂದ ಮೂರನೇ ವಾರಕ್ಕೆ ಕಾಲಿಟ್ಟಿದೆ. ತಮ್ಮ ತಮ್ಮ ಮೆಚ್ಚಿನ ಸ್ಪರ್ಧಿಗಳ ಪರ ಬಿಗ್​ ಬಾಸ್​ ಅಭಿಮಾನಿಗಳು ಬ್ಯಾಟಿಂಗ್​ ಮಾಡುತ್ತಿದ್ದಾರೆ. ಸ್ಪರ್ಧಿಗಳ ವೀಕ್ನೆಸ್ - ಸ್ಟ್ರೆಂತ್ ಬಗ್ಗೆ ಆನ್​​ಲೈನ್​ನಲ್ಲಿ ಚರ್ಚೆ ಆಗುತ್ತಿದೆ. ವರ್ತೂರು​ ಸಂತೋಷ್​ ಅವರು ಶೋ ಮೂಲಕ ಒಂದೊಳ್ಳೆ ಫ್ಯಾನ್ಸ್ ಫಾಲೋವಿಂಗ್ ಸಂಪಾದಿಸಿದ್ದಾರೆ. ಎರಡನೇ ವಾರ ಅವರು ನಾಮಿನೇಟ್​ ಆಗಿದ್ರೂ ಕೂಡ, ಜನರ ವೋಟ್ ಅವರನ್ನು ಮನೆಯಲ್ಲೇ ಉಳಿಯುವಂತೆ ಮಾಡಿದೆ.

ತುಕಾಲಿ ಸಂತೋಷ್​ ಮತ್ತು ಬುಲೆಟ್​ ರಕ್ಷಕ್​ ಜೊತೆ ಸೇರಿಕೊಂಡು ಪಂಚಾಯತಿ ಮಾಡುವ ಇವರು ಮನೆ ಮಂದಿಯ ಕಾಲೆಳೆಯುತ್ತಿರುತ್ತಾರೆ. ಇಂದಿನ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಬಾಯಲ್ಲಿ ಸ್ಪರ್ಧಿಗಳ ಭವಿಷ್ಯವಾಣಿ ಕೇಳಿಬಂದಿದೆ. ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಬಿಗ್​ ಬಾಸ್​ ಮನೆಯಿಂದ ಹೊರ ಹೋದ ನಂತರ ತುಕಾಲಿ ಸಂತೋಷ್​ ಅವರನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂದೆಲ್ಲಾ ಕಾಮಿಡಿಯಾಗಿ ವರ್ತೂರು ಸಂತೋಷ್​ ಹೇಳಿರುವುದು ಮನೆ ಮಂದಿಯನ್ನು ನಗೆಗಡಲಿನಲ್ಲಿ ತೇಲಿಸಿದೆ. ​

ಇದನ್ನೂ ಓದಿ:ಬಿಗ್​ ಬಾಸ್: ವೇದಿಕೆಯಲ್ಲೇ ಕಿಚ್ಚನ ಕಿಚ್ಚು - ಮುಖ್ಯದ್ವಾರ ತೆರೆದ ಸುದೀಪ್​; ಹೋಗೋರ‍್ಯಾರು?

Last Updated : Oct 24, 2023, 2:55 PM IST

ABOUT THE AUTHOR

...view details