ಕರ್ನಾಟಕ

karnataka

ETV Bharat / state

ಕಲಿಯುಗ್​ 2.0 ವರ್ಣಚಿತ್ರ ಪ್ರದರ್ಶನ : ಪರಿಸರ ಕಾಳಜಿಯುಳ್ಳ ಯುವ ಪ್ರತಿಭೆಗಳ ಪೇಟಿಂಗ್​ಗಳ ಅನಾವರಣ - ಅಕ್ಷಯ ಪಾತ್ರ ಫೌಂಡೇಶನ್‌

ಪ್ರತಿಭಾವಂತರಿಗೆ ಅವಕಾಶ ಸಿಗಬೇಕು. ಚಿತ್ರಕಲೆಯಲ್ಲಿ ಯುವ ಪ್ರತಿಭೆಗಳಾದ ರಿಷಿಕೇಶ್ ಮತ್ತು ಮಾನಸ ತಮ್ಮ ಸಮಯವನ್ನು ಸಮಾಜದ ಒಳಿತಿಗಾಗಿ ಚಿಕ್ಕ ವಯಸ್ಸಿನಲ್ಲಿ ಶ್ರಮವಹಿಸುತ್ತಿದ್ದಾರೆ. ಕಲೆಗೆ ಹೃದಯಕ್ಕೆ ಹತ್ತಿರದ ಸಂಬಂಧ ಇರುತ್ತದೆ. ಯುವ ಪ್ರತಿಭೆಗಳು ರಚಿಸಿದ ಚಿತ್ರಕಲೆ ಸಮಾಜದ ಮೇಲೆ ಬೆಳಕು ಚೆಲ್ಲುತ್ತಿದೆ..

kaliyug painting exhibition in bengaluru
ಕಲಿಯುಗ್​ 2.0 ವರ್ಣಚಿತ್ರ ಪ್ರದರ್ಶನ

By

Published : Oct 27, 2021, 10:54 PM IST

ಬೆಂಗಳೂರು :ನಗರದಲ್ಲಿಂದು ಪರಿಸರ ಸಂರಕ್ಷಣೆಯ ವಿಷಯವನ್ನು ಅನ್ವೇಷಿಸುವ ಪ್ರದರ್ಶನ ಮತ್ತು ಚಿತ್ರ ಕಲೆಯ ಮಾರಾಟ ಹಾಗೂ ಮಾರಾಟದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಅಕ್ಷಯ ಪಾತ್ರ ಫೌಂಡೇಶನ್‌ಗೆ ನೀಡುವ ಕಾರ್ಯಕ್ರಮ ನಡೆಯಿತು.

ಕಲಿಯುಗ್​ 2.0 ವರ್ಣಚಿತ್ರ ಪ್ರದರ್ಶನ

ಕರ್ನಾಟಕ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಬುಧವಾರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಕನ್ನಡದ ಖ್ಯಾತ ನಟ,ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಕಲ್ಯಾಣ್ ಜ್ಯುವೆಲ್ಲರ್ಸ್ ಎಂಡಿ ರಾಜೇಶ್ ಕಲ್ಯಾಣ್ ರಾಮನ್, ರಿಷಿಕೇಶ್ ಕಲ್ಯಾಣ್ ಮತ್ತು ಮಾನಸ ಕಲ್ಯಾಣ್ ಹಿರಿಯ ವರ್ಣ ಚಿತ್ರ ಕಲಾವಿದ ಡಾ.ರೋಶನ್ ಬಾಬಿರವರು ಪ್ರದರ್ಶನದ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ನಟ ಶಿವರಾಜ್​ಕುಮಾರ್​ ಭಾಗಿ

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಯುವ ಕಲಾವಿದರಾದ ರಿಷಿಕೇಶ್ ಕಲ್ಯಾಣ್ ಮತ್ತು ಮಾನಸ ಕಲ್ಯಾಣ್ ಅವರು ಯುವ ಪ್ರತಿಭಾವಂತ ಚಿತ್ರಕಾರರು ಮತ್ತು ಸಾಮಾಜಿಕ ಕಳಕಳಿ ಇರುವ ಯುವ ಪ್ರತಿಭೆಗಳು.

ವರ್ಣ ಚಿತ್ರಕಲೆಯಲ್ಲಿ ಯುವ ಪ್ರತಿಭೆಗಳಾದ ರಿಷಿಕೇಶ್ ಮಾನಸ ಚಿತ್ರಕಲೆ ಇನ್ನು ಬೆಳಗಲಿ ನಾಡಿಗೆ ಕೀರ್ತಿ ಎಂದು ಹಾರೈಸುತ್ತೇನೆ ಎಂದು ಹೇಳಿದರು. ಕಲಾವಿದರಾದ ಋಷಿಕೇಷ್ ಮತ್ತು ಮಾನಸ ಕಲ್ಯಾಣ್ ಅವರ ಆಧುನಿಕ ಪ್ರಪಂಚದ ವ್ಯಾಖ್ಯಾನ ಕಲಿಯುಗ್ 2.0 ಆಗಿದೆ ಎಂದರು.

ನಟ ಶಿವರಾಜ್ ಕುಮಾರ್ ಮಾತನಾಡಿ, ಪ್ರತಿಭಾವಂತರಿಗೆ ಅವಕಾಶ ಸಿಗಬೇಕು. ಚಿತ್ರಕಲೆಯಲ್ಲಿ ಯುವ ಪ್ರತಿಭೆಗಳಾದ ರಿಷಿಕೇಶ್ ಮತ್ತು ಮಾನಸ ತಮ್ಮ ಸಮಯವನ್ನು ಸಮಾಜದ ಒಳಿತಿಗಾಗಿ ಚಿಕ್ಕ ವಯಸ್ಸಿನಲ್ಲಿ ಶ್ರಮವಹಿಸುತ್ತಿದ್ದಾರೆ. ಕಲೆಗೆ ಹೃದಯಕ್ಕೆ ಹತ್ತಿರದ ಸಂಬಂಧ ಇರುತ್ತದೆ. ಯುವ ಪ್ರತಿಭೆಗಳು ರಚಿಸಿದ ಚಿತ್ರಕಲೆ ಸಮಾಜದ ಮೇಲೆ ಬೆಳಕು ಚೆಲ್ಲುತ್ತಿದೆ ಎಂದು ಹೇಳಿದರು.

ಕಲಿಯುಗ್ ಸರಣಿಯ ಯುವ ವರ್ಣಚಿತ್ರಕಾರ ಮಾಸ್ಟರ್ ಋಷಿಕೇಷ್ ಕಲ್ಯಾಣ್ ಮಾತನಾಡಿ, ಮನುಕುಲವು ಹಲವಾರು ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆಯ ಬಿಕ್ಕಟ್ಟು ತಕ್ಷಣದ ಬೆದರಿಕೆಯಾಗಿ ಹೊರಹೊಮ್ಮಿದ್ದು ವಿಶ್ವದಾದ್ಯಂತ ಜೀವ ಮತ್ತು ಆಸ್ತಿಯನ್ನು ನಾಶಪಡಿಸುತ್ತಿದೆ.

ಹವಾಮಾನ ಬದಲಾವಣೆಯ ಪರಿಸ್ಥಿತಿಯು ಹದಗೆಡುತ್ತಿದಂತೆ, ಹವಾಮಾನದ ಮಾದರಿಗಳಲ್ಲಿನ ದೀರ್ಘಾವಧಿಯ ಬದಲಾವಣೆಗಳು ಸಸ್ಯ ಮತ್ತು ಪ್ರಾಣಿಗಳ ಮೇಲೆ ಮಾತ್ರವಲ್ಲದೆ ಸಮುದಾಯಗಳು ಮತ್ತು ಜೀವನೋಪಾಯಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿದೆ.

ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅಥವಾ ಅದರ ತೀವ್ರತೆ ಹಿಮ್ಮೆಟ್ಟಿಸಲು, ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಕೆಲಸ ಮಾಡುವ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆಯೆಂದು ನಾವು ಬಲವಾಗಿ ನಂಬುತ್ತೇವೆ ಎಂದು ಹೇಳಿದರು.

ನಮ್ಮ ಚಿತ್ರ ಕಲಾಕೃತಿಗಳ ಮೂಲಕ, ನಾವು ಇರುವ ಸದ್ಯದ ಕಲಿಯುಗದ ಅಪಾಯಗಳನ್ನು ಪ್ರದರ್ಶಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ನಮ್ಮ ಸುತ್ತಮುತ್ತಲಿನ ಸಮುದಾಯಗಳು ಮತ್ತು ಸಮಾಜಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವತ್ತ ಸಣ್ಣ ಹೆಜ್ಜೆಗಳನ್ನು ಇಡಲು ಈ ಪ್ರದರ್ಶನವು ವೀಕ್ಷಕರನ್ನು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

ಚಿತ್ರಪ್ರದರ್ಶನ ವೀಕ್ಷಿಸಿದ ಉಪ ಪೊಲೀಸ್ ಆಯುಕ್ತ ಮುರುಗನ್

ಕಲಿಯುಗ್ 2.0 ವಾಸ್ತವಕ್ಕೆ ತೀರ ಹತ್ತಿರವಾದ ಅನುಭವದ ಮೂಲಕ ತಲೆಮಾರುಗಳವರೆಗೆ ಪ್ರಕೃತಿಯ ವರ್ಣ ವೈಭವವನ್ನು ಸಂರಕ್ಷಿಸುವ ಉದ್ದೇಶವನ್ನು ಈ ಪ್ರದರ್ಶನವು ಹೊಂದಿದೆ. ಕಲಾ ಪ್ರದರ್ಶನ ಮತ್ತು ಮಾರಾಟದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಅಕ್ಷಯ ಪಾತ್ರ ಫೌಂಡೇಷನ್‌ಗೆ ದೇಣಿಗೆ ನೀಡಲಾಗುವುದು ಎಂದು ಹೇಳಿದರು. ಚಿತ್ರಪ್ರದರ್ಶನವನ್ನು ಉಪ ಪೊಲೀಸ್ ಆಯುಕ್ತ ಮುರುಗನ್ ವೀಕ್ಷಿಸಿ ಕಲಾವಿದರನ್ನು ಶ್ಲಾಘಿಸಿದರು.

ABOUT THE AUTHOR

...view details