ಬೆಂಗಳೂರು:ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ 31,33,800 ಲಕ್ಷ ರೂ. ದೇಣಿಗೆ ನೀಡಲಾಯಿತು.
ಮುಖ್ಯಮಂತ್ರಿಗಳ ಕೋವಿಡ್ -19 ನಿಧಿಗೆ ಜಯದೇವ ಸಂಸ್ಥೆಯಿಂದ 31.33 ಲಕ್ಷ ರೂ. ದೇಣಿಗೆ - ಡಾ.ಕೆ ಸುಧಾಕರ್
ಜಯದೇವ ಸಂಸ್ಥೆಯ ನಿರ್ದೇಶಕ ಡಾ ಸಿ. ಎನ್. ಮಂಜುನಾಥ್ ಅವರು 31.33 ಲಕ್ಷ ರೂ. ಚೆಕ್ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.
Covid 19 relief fund
ಸಂಸ್ಥೆಯ ನಿರ್ದೇಶಕ ಡಾ ಸಿ. ಎನ್. ಮಂಜುನಾಥ್ ಅವರು ಚೆಕ್ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.
ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದ ಡಾ.ಮಂಜುನಾಥ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಸಮ್ಮುಖದಲ್ಲಿ ಸಂಸ್ಥೆಯ ಪರವಾಗಿ ಚೆಕ್ ನೀಡಿದರು.