ಬೆಂಗಳೂರು: ಕನ್ನಡದ ಜನಪ್ರಿಯ ಹಾಸ್ಯನಟ ವೈಜನಾಥ ಬಸಪ್ಪ ಬಿರಾದಾರ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.
ನಟ ವೈಜನಾಥ ಬಿರಾದಾರಗೆ ಶುಭಾಶಯ ತಿಳಿಸಿದ ಈಶ್ವರ್ ಖಂಡ್ರೆ - ಬೆಂಗಳೂರು ಸುದ್ದಿ
ಹಾಸ್ಯ ನಟ ವೈಜನಾಥ್ ಬಿರಾದಾರ್‌ಗೆ ಸ್ಪೇನ್‌ನ ಮ್ಯಾಡ್ರಿಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಇದಕ್ಕೆ ಈಶ್ವರ್ ಖಂಡ್ರೆ ನಟ ವೈಜನಾಥ ಬಿರಾದಾರಗೆ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ನಮ್ಮದೇ ಭಾಲ್ಕಿ ಕ್ಷೇತ್ರದ ತೆಗಮಪುರ ಗ್ರಾಮದ ಹೆಮ್ಮೆಯ ಕಲಾವಿದ ವೈಜನಾಥ ಬಸಪ್ಪ ಬಿರಾದಾರ ಅವರಿಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆ ಏರಿ ಸಿನಿಮಾದಲ್ಲಿನ ನಟನೆಗೆ ಸ್ಪೇನ್ ದೇಶದ ಮ್ಯಾಡ್ರಿಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಬಂದಿದೆ. ಶ್ರೀ ವೈಜನಾಥ ಬಿರಾದಾರ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.
ಹಾಸ್ಯನಟ ವೈಜನಾಥ್ ಬಿರಾದಾರ್‌ಗೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ‘ಕನಸೆಂಬ ಕುದುರೆ ಏರಿ’ ಸಿನಿಮಾ ನಟನೆಗಾಗಿ ಸ್ಪೇನ್‌ನ ಮ್ಯಾಡ್ರಿಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ವಿಷಯ ತಿಳಿದ ಬಾಲಿವುಡ್ ಜನಪ್ರಿಯ ನಟ ಅಮಿತಾಬ್ ಬಚ್ಚನ್ ಕೂಡ ಬಿರಾದಾರ್‌ಗೆ ಕರೆ ಮಾಡಿ ‘ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ’ ಎಂದು ಸಂತಸ ವ್ಯಕ್ತಪಡಿಸಿದ್ದನ್ನು ನೆನೆಯಬಹುದಾಗಿದೆ.