ಕರ್ನಾಟಕ

karnataka

By

Published : May 1, 2021, 9:58 PM IST

ETV Bharat / state

ಸಿಡಿ ಪ್ರಕರಣ: ತನಿಖಾಧಿಕಾರಿಗಳನ್ನು ಕರ್ಫ್ಯೂ ಡ್ಯೂಟಿಗೆ ನಿಯೋಜಿಸಿದ ಪೊಲೀಸ್ ಇಲಾಖೆ

ಅಜ್ಞಾತ ಸ್ಥಳದಲ್ಲಿದ್ದ ಯುವತಿ ನೇರವಾಗಿ ನ್ಯಾಯಾಲಯಕ್ಕೆ ತೆರಳಿ ಹೇಳಿಕೆ ದಾಖಲಿಸಿದ್ದಳು. ಹೇಳಿಕೆಯನ್ನು ಆಧರಿಸಿ ತನಿಖೆ ನೆಡೆಸುತ್ತಿದ್ದು ಎಸ್‌ಐಟಿ, ವೈದ್ಯಕೀಯ ಪರೀಕ್ಷೆ ಹಾಗೂ ಮಹಜರು ಪೂರ್ಣಗೊಳಿಸಿತ್ತು.

investigators-of-cd-case-appointed-to-curfew-duty
ನಿಖಾಧಿಕಾರಿಗಳನ್ನು ಕರ್ಫ್ಯೂ ಡ್ಯೂಟಿಗೆ ನಿಯೋಜಿಸಿದ ಪೊಲೀಸ್ ಇಲಾಖೆ

ಬೆಂಗಳೂರು: ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಸೇರಿದ್ದು ಎನ್ನಲಾದ ಸಿಡಿ ಪ್ರಕರಣದ ತನಿಖೆ ಸದ್ಯ ತಟಸ್ಥವಾಗಿದ್ದು, ತನಿಖೆಗೆ ನಿಯೋಜನೆಗೊಂಡಿದ್ದ ಎಸ್‌ಐಟಿಯ ಬಹಳಷ್ಟು ಅಧಿಕಾರಿಗಳನ್ನು ಕರ್ಫ್ಯೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಸಂತ್ರಸ್ತೆ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. 'ಸಿಡಿ ಇಟ್ಟುಕೊಂಡು ಕೆಲವರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ' ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ಕೂಡ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎರಡೂ ಪ್ರಕರಣದ ತನಿಖೆಗೆ ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು.

ಅಜ್ಞಾತ ಸ್ಥಳದಲ್ಲಿದ್ದ ಯುವತಿ ನೇರವಾಗಿ ನ್ಯಾಯಾಲಯಕ್ಕೆ ತೆರಳಿ ಹೇಳಿಕೆ ದಾಖಲಿಸಿದ್ದಳು. ಹೇಳಿಕೆಯನ್ನು ಆಧರಿಸಿ ತನಿಖೆ ನೆಡೆಸುತ್ತಿದ್ದು ಎಸ್‌ಐಟಿ, ವೈದ್ಯಕೀಯ ಪರೀಕ್ಷೆ ಹಾಗೂ ಮಹಜರು ಪೂರ್ಣಗೊಳಿಸಿತ್ತು.

ವಿಚಾರಣೆಗೆ ಹಾಜರಾಗುವಂತೆ ರಮೇಶ್​ ಜಾರಕಿಹೊಳಿಗೂ ನೋಟಿಸ್ ನೀಡಿತ್ತು. ಆದರೆ ಕೊರೊನಾ ಸೋಂಕು ತಗುಲಿದೆ ಎಂದು ಜಾರಕಿಹೊಳಿ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಂಡ ಬಳಿಕ ಎಸ್‌ಐಟಿ ಮತ್ತೆ ನೋಟಿಸ್ ನೀಡಿತ್ತು. ಹೋಂ ಐಸೋಲೇಷನ್ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.

ABOUT THE AUTHOR

...view details