ಕರ್ನಾಟಕ

karnataka

ETV Bharat / state

Lunar eclipse: ನಾಳೆ ಚಂದ್ರಗ್ರಹಣ.. ಏನ್​ ಮಾಡಬೇಕು, ಏನ್​ ಮಾಡಬಾರದು?

ನಾಳೆ ಸಂಭವಿಸುತ್ತಿರುವ ಚಂದ್ರಗ್ರಹಣವು ದೇಶದ ಪೂರ್ವ ಭಾಗಗಳಲ್ಲಿ ಮಾತ್ರ ಸಂಪೂರ್ಣವಾಗಿ ಗೋಚರಿಸುತ್ತದೆ. ಇತರೆ ಸ್ಥಳಗಳಲ್ಲಿ ಭಾಗಶಃ ಗ್ರಹಣ ಇರುತ್ತದೆ. ಗ್ರಹಣದ ವೇಳೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ.

lunar eclipse
ಚಂದ್ರಗ್ರಹಣ

By

Published : Nov 7, 2022, 1:05 PM IST

ಬೆಂಗಳೂರು: ನಾಳೆ ರಾಹುಗ್ರಸ್ತ ಗ್ರಸ್ತೋದಯ ಚಂದ್ರಗ್ರಹಣ ಸಂಭವಿಸಲಿದೆ. ಭಾರತದ ಎಲ್ಲೆಡೆ ಭಾಗಶಃ ಗ್ರಹಣ ಗೋಚರಿಸಲಿದ್ದು, ಈ ವೇಳೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ..

20 ನಿಮಿಷ ಮಾತ್ರ ಗೋಚರ.. ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2.38 ಕ್ಕೆ, ಮಧ್ಯ ಕಾಲ 4.29 ಹಾಗೂ ಮೋಕ್ಷ ಕಾಲ 6.19 ಆಗಿದೆ. ಚಂದ್ರೋದಯ ಆಗುವುದು ಸಂಜೆ 5.59 ಕ್ಕೆ, ಈ ಹಿನ್ನೆಲೆ ಗ್ರಹಣ ಸ್ಪರ್ಶ ಹಾಗೂ ಮಧ್ಯಕಾಲದ ದರ್ಶನ ಸಿಗುವುದಿಲ್ಲ. ಮೋಕ್ಷ ಕಾಲ ಸಂಜೆ 6.19 ಆಗಿರುವುದರಿಂದ ಗ್ರಹಣದ ಕಡೆಯ 20 ನಿಮಿಷ ವೀಕ್ಷಣೆಗೆ ಸಿಗುತ್ತದೆ. ಗ್ರಹಣ ಹಿಡಿದ ಸ್ಥಿತಿಯಲ್ಲೇ ಚಂದ್ರೋದಯವಾಗಲಿದೆ. ಹಾಗೂ ಕೆಲ ನಿಮಿಷದಲ್ಲಿ ಮುಗಿಯಲಿದೆ. ಒಟ್ಟಾರೆ ಗ್ರಹಣದ ಅವಧಿ 3 ಗಂಟೆ 40 ನಿಮಿಷವಾಗಿದ್ದು, ಕಣ್ಣಿಗೆ ಕಾಣುವುದು ಕೇವಲ 20 ನಿಮಿಷ ಮಾತ್ರ.

ಗ್ರಹಣವು ಮೇಷ ರಾಶಿಯಲ್ಲಿ ಆಗುತ್ತಿದೆ. ಇದರಿಂದ ಕುಂಭ, ವೃಶ್ಚಿಕ, ಕರ್ಕಾಟಕ, ಮಿಥುನ ರಾಶಿಯರಿಗೆ ಶುಭ ಫಲ. ಮೇಷ, ಮಕರ, ಕನ್ಯಾ ಹಾಗೂ ವೃಷಭ ರಾಶಿಯವರಿಗೆ ಅಶುಭ ಫಲ. ಮೀನ, ಧನುಸ್ಸು, ತುಲಾ ಹಾಗೂ ಸಿಂಹ ರಾಶಿಯವರಿಗೆ ಮಿಶ್ರ ಫಲ ಇರುತ್ತದೆ. ಈ ಸಾರಿಯ ಚಂದ್ರಗ್ರಹಣವು ದೇಶದ ಪೂರ್ವ ಭಾಗಗಳಲ್ಲಿ ಮಾತ್ರ ಸಂಪೂರ್ಣವಾಗಿ ಗೋಚರಿಸುತ್ತದೆ. ಇತರೆ ಸ್ಥಳಗಳಲ್ಲಿ ಭಾಗಶಃ ಗ್ರಹಣ ಇರುತ್ತದೆ. ಈ ಗ್ರಹಣವನ್ನು ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ ಮತ್ತು ಗುವಾಹಟಿ ನಗರಗಳಿಂದ ನೋಡಬಹುದಾಗಿದೆ.

ಗ್ರಹಣ ಸಂದರ್ಭದಲ್ಲಿ ದಾನ ಮಾಡುವುದು ಶ್ರೇಷ್ಠ ಎನ್ನುವ ನಂಬಿಕೆ ಇದೆ. ದಾನವನ್ನು ಬ್ರಾಹ್ಮಣರಿಗೆ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ದಾನ ನೀಡುವವರು ತಮ್ಮ ಆಯ್ಕೆಯ ವಿಚಾರದಲ್ಲಿ ಸ್ವತಂತ್ರರು. ಈ ಬಾರಿ ರಾಹುಗ್ರಸ್ತ ಚಂದ್ರಗ್ರಹಣ ಇರುವ ಹಿನ್ನೆಲೆ ಉದ್ದಿನ ಬೇಳೆ, ಭತ್ತ ಅಥವಾ ಅಕ್ಕಿ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ದಕ್ಷಿಣೆ ಸಹಿತವಾಗಿ ದಾನ ನೀಡಬೇಕು.

ಇದನ್ನೂ ಓದಿ:ಚಂದ್ರ ಗ್ರಹಣ : ಮಂಗಳವಾರ ಚಾಮುಂಡೇಶ್ವರಿ ತಾಯಿ ದರ್ಶನವಿಲ್ಲ

ಗ್ರಹಣದ ವೇಳೆ ಏನು ಮಾಡಬೇಕು?: ಈ ಸಮಯದಲ್ಲಿ ಮಲಗುವುದು, ತಿನ್ನುವುದು ಮತ್ತು ಇತರೆ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ದೇವ ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಈ ಸಾರಿ ಇದೇ ದಿನ ಗ್ರಹಣ ಸಹ ಬಂದಿದೆ. ಪುರಾಣದಲ್ಲಿ ದೇವರು ಮತ್ತು ದೇವತೆಗಳು ಭೂಮಿಗೆ ಬಂದು ದೀಪಾವಳಿಯನ್ನು ಆಚರಿಸುತ್ತಾರೆ ಎಂದು ನಂಬಲಾಗಿದೆ. ಹೀಗಾಗಿ, ಈ ಸಮಯವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಪೂರ್ಣಿಮೆಯಂದು ಲಕ್ಷಗಟ್ಟಲೇ ಭಕ್ತರು ಗಂಗೆಯಲ್ಲಿ ಸ್ನಾನ ಮಾಡಿ ದೀಪವನ್ನು ದಾನ ಮಾಡುತ್ತಾರೆ. ಈ ಬಾರಿ ಚಂದ್ರಗ್ರಹಣ ಹಾಗೂ ದೇವ ದೀಪಾವಳಿ ಒಂದೇ ದಿನ ಇರುವುದರಿಂದ ಕಾರ್ತಿಕ ಪೂರ್ಣಿಮೆಯಂದು ಪವಿತ್ರ ಸ್ನಾನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:ನಾಳೆ ವರ್ಷದ ಕೊನೆಯ ಚಂದ್ರಗ್ರಹಣ: ಎಲ್ಲೆಲ್ಲಿ ಗೋಚರ ಗೊತ್ತಾ?

ಈ ವರ್ಷದ ಕೊನೆಯ ಮತ್ತು ಎರಡನೇ ಚಂದ್ರಗ್ರಹಣವು ಭಾರತ ಸೇರಿದಂತೆ ದಕ್ಷಿಣ/ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ.

ಗ್ರಹಣದ ಪ್ರಭಾವವು ಶಾಸ್ತ್ರಗಳ ಪ್ರಕಾರ, 9 ಗಂಟೆ ಮುನ್ನ ಆರಂಭವಾಗುತ್ತದೆ. ಈ ಬಾರಿಯ ಚಂದ್ರಗ್ರಹಣ ಭಾರತದಲ್ಲೂ ಗೋಚರಿಸುತ್ತಿದೆ. ಹೀಗಾಗಿ, ಭಾರತದಲ್ಲಿ ಚಂದ್ರಗ್ರಹಣದ ಸೂತಕವು ಬೆಳಗ್ಗೆ 08:10 ಕ್ಕೆ ಆರಂಭವಾಗುತ್ತದೆ. ಭಾರತದಲ್ಲಿ, ಸೂತಕ ಅವಧಿಯು ಸಂಜೆ 06:20ಕ್ಕೆ ಕೊನೆಗೊಳ್ಳುತ್ತದೆ. ಆದರೆ, ಚಂದ್ರಗ್ರಹಣದ ಸಂಪೂರ್ಣ ಮೋಕ್ಷ ಅವಧಿಯು ಸಂಜೆ 07.27ಕ್ಕೆ ಆಗಿದೆ. ಹೀಗಾಗಿ, ಸೂತಕ ಅವಧಿಯು 07.27 ನಿಮಿಷಗಳ ನಂತರ ಅಂತ್ಯಗೊಳ್ಳುತ್ತದೆ. ಇದಾದ ಬಳಿಕ ಸ್ನಾನ ಮಾಡಿ ಆಹಾರ ಸಿದ್ಧಪಡಿಸಿಕೊಂಡು ಸೇವಿಸುವುದು ಒಳಿತು. ಗ್ರಹಣ ಸಂದರ್ಭದಲ್ಲಿ ಜಪ, ತಪ, ಧ್ಯಾನ, ಪ್ರಾರ್ಥನೆ, ಹೋಮ, ಪೂಜೆ ಇತ್ಯಾದಿನಗಳನ್ನು ಮಾಡುವುದು ವಾಡಿಕೆ.

ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ, ಚಂದ್ರಗ್ರಹಣದ ಮೊದಲು ಸ್ನಾನ ಮಾಡಬೇಕು. ಶಕ್ತ್ಯಾನುಸಾರ ಭಗವಂತನನ್ನು ಆರಾಧಿಸಬೇಕು. ಚಂದ್ರಗ್ರಹಣ ಹಿಡಿಯುವ ಮುನ್ನ ತುಳಸಿಯನ್ನು ಆಹಾರದಲ್ಲಿ ಇಡಿ. ಮನೆಯಲ್ಲಿ ಸಾಧ್ಯವಾದಷ್ಟು ಶಾಂತಿ ಕಾಪಾಡಿಕೊಳ್ಳಿ. ಗರ್ಭಿಣಿಯರು ಚಂದ್ರಗ್ರಹಣದ ಅವಧಿಯಲ್ಲಿ ತೆಂಗಿನಕಾಯಿ ಉಂಡೆಗಳನ್ನು ತಿನ್ನಬಹುದು. ಉಳಿದವರು ಚಂದ್ರಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು ಅಥವಾ ಅಡುಗೆ ಮಾಡಬಾರದು. ಮಲಗಬೇಡಿ ಮತ್ತು ಚೂಪಾದ ವಸ್ತುವನ್ನು ಮುಟ್ಟಬೇಡಿ ಎಂದು ಹೇಳಲಾಗುತ್ತದೆ.

ABOUT THE AUTHOR

...view details