ಕರ್ನಾಟಕ

karnataka

ETV Bharat / state

ಸಿಸಿಬಿಯಿಂದ ಇಂದ್ರಜಿತ್​​​ಗೆ​ ಸುದೀರ್ಘ ಪ್ರಶ್ನೆ: ವಿಚಾರಣೆಗೆ ಆಗಮಿಸಿದ ಸಂದೀಪ್ ಪಾಟೀಲ್​​

ಸ್ಯಾಂಡಲ್​​ವುಡ್​ ಡ್ರಗ್ಸ್ ಲಿಂಕ್​ ಕುರಿತಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್​​ಗೆ ಸಿಸಿಬಿ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಹಲವು ದಾಖಲೆ ಪಡೆದಿರುವ ಸಿಸಿಬಿ ವಿಚಾರಣೆ ಮುಕ್ತಾಯದ ಹಂತ ತಲುಪಿದೆ.

Indrajith lankesh  inquiry on drug link statement
ಸಿಸಿಬಿಯಿಂದ ಇಂದ್ರಜಿತ್​​​ಗೆ​ ಸುದೀರ್ಘ ಪ್ರಶ್ನೆ: ವಿಚಾರಣೆಗೆ ಆಗಮಿಸಿದ ಸಂದೀಪ್ ಪಾಟೀಲ್​​

By

Published : Aug 31, 2020, 3:50 PM IST

ಬೆಂಗಳೂರು:ಸ್ಯಾಂಡಲ್​​ವುಡ್ ಡ್ರಗ್ಸ್ ದಂಧೆ ಬಗ್ಗೆ ನಿರ್ದೇಶಕ ಇಂದ್ರಜಿತ್ ವಿಚಾರಣೆಯನ್ನು ಸಿಸಿಬಿ ಪೊಲೀಸರು ಕಳೆದ ಕೆಲ‌ ಗಂಟೆಗಳಿಂದ ನಡೆಸುತ್ತಿದ್ದಾರೆ. ಸದ್ಯ ಸಿಸಿಬಿಯ ಹೆಚ್ಚುವರಿ ಪೊಲೀಸ್​ ಆಯುಕ್ತ ಸಂದೀಪ್ ಪಾಟೀಲ್ ಅವರು ಕೂಡ ಸಿಸಿಬಿ ‌ಕಚೇರಿಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.

ಈಗಾಗಲೇ ಇಂದ್ರಜಿತ್ ಲಂಕೇಶ್ ಅವರ ವಿಚಾರಣೆಯನ್ನು ಎಸಿಪಿ ಗೌತಮ್ ಹಾಗೂ ಇನ್ಸ್​ಪೆಕ್ಟರ್​​ ಬೋಳೆತ್ತಿನ್ ನಡೆಸುತ್ತಿದ್ದು, ಪ್ರಾಥಮಿಕವಾಗಿ ಇಂದ್ರಜಿತ್​ ಲಂಕೇಶ್ ಬಳಿ ಇರುವ ಕೆಲ ದಾಖಲೆಗಳನ್ನು ಸಂದೀಪ್ ಪಾಟೀಲ್​​​ ಪಡೆಯುವ ಸಾಧ್ಯತೆಯಿದೆ.

ಹಾಗೆ ನಗರದ ಐಷಾರಾಮಿ ಅಪಾರ್ಟ್​ಮೆಂಟ್​​ವೊಂದರಲ್ಲಿ ನಟ ನಟಿಯರು ಭಾಗಿಯಾಗುತ್ತಿದ್ದ ಬಗ್ಗೆ ಪ್ರಾಥಮಿಕವಾಗಿ ಇಂದ್ರಜಿತ್​ ಮಾಹಿತಿ ನೀಡಿದ್ದು, ಸದ್ಯ ಅದರ ಆಧಾರದ ಮೇರೆಗೆ ತನಿಖೆ ಮುಂದುವರೆದಿದೆ‌.

ಲಂಕೇಶ್ ವಿಚಾರಣೆ ಬಹುತೇಕ ಮುಕ್ತಾಯ ಹಂತಕ್ಕೆ

ಬೆಳಗ್ಗೆಯಿಂದ ಇನ್ಸ್‌ಪೆಕ್ಟರ್ ಹಾಗೂ ಎಸಿಪಿ ಅವರು ಇಂದ್ರಜಿತ್​​ ಅವರಿಂದ ಪಡೆದಿರುವ ಮಾಹಿತಿಯನ್ನು ಸಂದೀಪ್ ಪಾಟೀಲ್​​ಗೆ ವಿವರಿಸಿದ್ದಾರೆ. ವಿಚಾರಣೆ ಮುಗಿಯುವ ಹಂತ ತಲುಪಿದ್ದು, ಮುಂದಿನ ಕ್ರಮದ ಬಗ್ಗೆ ಸಂದೀಪ್ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಈಗಾಗಲೇ ಇಂದ್ರಜಿತ್ ಹೇಳಿಕೆಯ ದಾಖಲೆಗಳಿಗೆ ಸಿಸಿಬಿ ಪೊಲೀಸರು ಸಹಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details