ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ ಉದ್ಘಾಟನೆ..!

ಸಿಲಿಕಾನ್​ ಸಿಟಿಯಲ್ಲಿ ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ (ಇಂಟರಾಕ್ಟಿವ್‌ ಮ್ಯೂಸಿಕ್‌ ಮ್ಯೂಸಿಯಂ) ಉದ್ಘಾಟನೆಗೊಂಡಿದೆ.

ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ ಉದ್ಘಾಟನೆ

By

Published : Jul 28, 2019, 4:09 AM IST

ಬೆಂಗಳೂರು :ಸಿಲಿಕಾನ್ ಸಿಟಿಯ ಜೆ.ಪಿ. ನಗರದ 7ನೇ ಫೇಸ್​ನಲ್ಲಿನ ಬ್ರಿಗೇಡ್ ಮಿಲೇನಿಯಂ ಎನ್​ಕ್ಲೇವ್​ನಲ್ಲಿ 'ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ'ವೊಂದು (ಇಂಡಿಯನ್ ಮ್ಯೂಸಿಕ್ ಎಕ್ಸ್​ಪೀರಿಯನ್ಸ್​​) ಉದ್ಘಾಟನೆಗೊಂಡಿತು.

ಇಂಡಿಯನ್ ಮ್ಯೂಸಿಕ್ ಎಕ್ಸ್​ಪೀರಿಯನ್ಸ್​​ (ಐಎಂಇ) ಅನ್ನೋದು ಭಾರತದ ಮೊದಲ ಸಂವಾದಿ ಸಂಗೀತ ವಸ್ತು ಸಂಗ್ರಹಾಲಯ. ಬ್ರಿಗೇಡ್ ಗ್ರೂಪ್ ಸಂಸ್ಕೃತಿ ಸಚಿವಾಲಯ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ಹಲವು ಕಾರ್ಪೋರೇಟ್​ ಹಾಗೂ ಲೋಕೋಪಕಾರಿಗಳ ಸಹಕಾರದಿಂದ ಈ ಲಾಭರಹಿತ ಇಂಡಿಯನ್ ಮ್ಯೂಸಿಕ್ ಎಕ್ಸ್​ಪೀರಿಯನ್ಸ್​ ಟ್ರಸ್ಟ್​ ಸ್ಥಾಪನೆಗೊಂಡಿದೆ.

ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ ಉದ್ಘಾಟನೆ

ಇನ್ನು ಈ ಐಎಂಇಯು ಹೌಸ್ ಸ್ಟೇಟ್ ಆಫ್ ದಿ ಆರ್ಟ್ ಇಂಟರ್ ಆ್ಯಕ್ಟಿವ್ ಎಕ್ಸಿಬಿಟ್ ಎರಿಯಾ, ಸೌಂಡ್ ಗಾರ್ಡನ್, ಲರ್ನಿಂಗ್ ಸೆಂಟ್ ಎಂಬ ಮೂರು ವಿಭಾಗಗಳನ್ನು ಹೊಂದಿದೆ. ಎಕ್ಸಿಬಿಟ್​​ ಎರಿಯಾದ 8 ವಿಷಯಾಧರಿತ ಗ್ಯಾಲರಿಗಳು ಭಾರತೀಯ ಸಂಗೀತದ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ. ಇನ್ನು ಇನ್​ಸ್ಟ್ರುಮೆಂಟ್​​ ಗ್ಯಾಲರಿಯಲ್ಲಿ 100ಕ್ಕೂ ಹೆಚ್ಚು ಸಂಗೀತ ಉಪಕರಣಗಳ, ಮೂರು ಮಿನಿ ಥಿಯೇಟರ್ ಹಾಗೂ ಅನೇಕ ಕಂಪ್ಯೂಟರ್​​ ಆಧರಿತ ಸಂವಾದಾತ್ಮಕ ಅಳವಡಿಕೆಗಳು ಭೇಟಿ ನೀಡುವವರಿಗೆ ಸಂಗೀತದ ಪ್ರಕ್ರಿಯೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಲಾಸ್ ಏಂಜಲೀಸ್​ನ ಗ್ರ್ಯಾಮಿ ಮ್ಯೂಸಿಯಂ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕರೂ ಆದ ರಾಬರ್ಟ್ ಸ್ಯಾಂಟೆಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ABOUT THE AUTHOR

...view details