ಕರ್ನಾಟಕ

karnataka

ETV Bharat / state

IFS ಅಧಿಕಾರಿ ಸಾವು: ಬೆನ್ನು ನೋವು, ಸಕ್ಕರೆ ಖಾಯಿಲೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ್ರಾ?

ಐಎಫ್ಎಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾವಿಗೆ ಕಾರಣಗಳನ್ನು ಹುಡುಕಲಾಗುತ್ತಿದೆ.

By

Published : Sep 8, 2019, 8:01 PM IST

ಅವತಾರ್ ಸಿಂಗ್

ಬೆಂಗಳೂರು: ಐಎಫ್‌ಎಸ್ ಅಧಿಕಾರಿ ಅವತಾರ್ ಸಿಂಗ್‌ ಸಕ್ಕರೆ ಖಾಯಿಲೆ ಹಾಗೂ ಬೆನ್ನು ನೋವಿನಿಂದ ಖಿನ್ನತೆಗೊಳಗಾಗಿ ಸಾವಿಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಐಎಫ್​ಎಸ್ ಅಧಿಕಾರಿ ಸಾವು: ಬೆನ್ನು ನೋವು, ಸಕ್ಕರೆ ಖಾಯಿಲೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ್ರಾ.?

ಹರಿಯಾಣ ಮೂಲದ ಅವತಾರ್ ಸಿಂಗ್ 1990ರಲ್ಲಿ ಭಾರತೀಯ ಅರಣ್ಯ ಇಲಾಖೆಯ ಸೇವೆ ಸೇರಿದ್ದು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಮಡಿಕೇರಿ, ಚಿಕ್ಕಮಗಳೂರು, ಕೊಲಾರ ಸೇರಿದಂತೆ ವಿವಿಧ ಅರಣ್ಯ ಇಲಾಖೆಯ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ತಿಂಗಳ ಹಿಂದಷ್ಟೇ ನಗರಕ್ಕೆ ವರ್ಗವಣೆಯಾಗಿದ್ದರು. ಸದ್ಯರಾಜ್ಯದ ಕೇಂದ್ರ ಅರಣ್ಯ ಭವನದಲ್ಲಿ ಕೆಲಸ ಮಾಡುತ್ತಿದ್ದರು.

ಯಲಹಂಕ ನ್ಯೂಟೌನ್​ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದ ಅಧಿಕಾರಿ ಎಂದಿನಂತೆ ಇಂದು ಬೆಳಿಗ್ಗೆ ಎದ್ದು ವಾಕಿಂಗ್​ಗೆ ತೆರಳಿದ್ದಾರೆ. ನಂತರ ಮನೆಗೆ ಮರಳಿ ತಮ್ಮ ರೂಂನ ಬಾಗಿಲು ಹಾಕಿ ಏಕಾಏಕಿ ನೇಣಿಗೆ ಶರಣಾಗಿದ್ದಾರೆ. ಅಸಲಿಗೆ ಇದಕ್ಕೆ ಅವರ ಅನಾರೋಗ್ಯ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ನ್ಯೂಟೌನ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details