ಕರ್ನಾಟಕ

karnataka

ETV Bharat / state

Canara Bank Recruitment: ಪ್ರೊಬೆಷನರಿ ಸೇರಿದಂತೆ 500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - ಕೆನರಾ ಬ್ಯಾಂಕ್​ನಲ್ಲಿ ಒಟ್ಟು 500 ಹುದ್ದೆ

ಐಬಿಪಿಎಸ್​ನಿಂದ ಒಟ್ಟು 4451 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ 500 ಹುದ್ದೆಗಳ ನೇಮಕಾತಿ ಕೆನರಾ ಬ್ಯಾಂಕ್​ಗೆ ನಡೆಯಲಿದೆ.

IBPS Recruitment for Canara Bank probationary officer
IBPS Recruitment for Canara Bank probationary officer

By

Published : Aug 22, 2023, 1:37 PM IST

ಕೆನರಾ ಬ್ಯಾಂಕ್​, ಬ್ಯಾಂಕ್​ ಆಫ್​ ಇಂಡಿಯಾ, ಬ್ಯಾಂಕ್​​ ಆಫ್​​ ಇಂಡಿಯಾ, ಬ್ಯಾಂಕ್​​ ಆಫ್​ ಮಹಾರಾಷ್ಟ್ರ, ಬ್ಯಾಂಕ್​ ಆಫ್​ ಬರೋಡಾ, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಇಂಡಿಯನ್​ ಬ್ಯಾಂಕ್​ ಸೇರಿದಂತೆ ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಕ್ಲರ್ಕ್​ ಹುದ್ದೆ ನೇಮಕಾತಿಗೆ ಇನ್ಸ್​ಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್ (IBPS) ಒಟ್ಟು 4451 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ಕೆನರಾ ಬ್ಯಾಂಕ್​ನಲ್ಲಿ ಒಟ್ಟು 500 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಇದೀಗ ವಿಸ್ತರಣೆ ಮಾಡಿ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ. ಅದರ ಅನುಸಾರ ಈ ಹುದ್ದೆಗಳಿಗೆ ಆಗಸ್ಟ್​ 28ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ

ಹುದ್ದೆ ವಿವರ: ಕೆನರಾ ಬ್ಯಾಂಕ್​, ಬ್ಯಾಂಕ್​ ಆಫ್​ ಇಂಡಿಯಾ, ಬ್ಯಾಂಕ್​​ ಆಫ್​​ ಇಂಡಿಯಾ, ಬ್ಯಾಂಕ್​​ ಆಫ್​ ಮಹಾರಾಷ್ಟ್ರ, ಬ್ಯಾಂಕ್​ ಆಫ್​ ಬರೋಡಾ, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಇಂಡಿಯನ್​ ಬ್ಯಾಂಕ್​, ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​, ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಪಂಜಾಬ್​ ಮತ್ತು ಸಿಂದ್​​ ಬ್ಯಾಂಕ್, ಯುಕೊ ಬ್ಯಾಂಕ್​, ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅಧಿಕೃತ ಮಂಡಳಿ ಅಥವಾ ವಿಶ್ವವಿದ್ಯಾಲದಿಂದ ಪದವಿಯನ್ನು ಪಡೆದಿರಬೇಕು.

ವಯೋಮಿತಿ:ಅಭ್ಯರ್ಥಿಗಳು ಕನಿಷ್ಠ 20 ರಿಂದ ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿ 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ₹ 175, ಇತರೆ ಅಭ್ಯರ್ಥಿಗಳು ₹ 850 ಅರ್ಜಿ ಶುಲ್ಕ ಪಾವತಿಸಬೇಕಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೂರು ಹಂತದಲ್ಲಿ ಆಯ್ಕೆ ಮಾಡಲಾಗುವುದು. ಮೊದಲ ಹಂತ ಪ್ರಿಲಿಮನರಿ ಪರೀಕ್ಷೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಮತ್ತು ಅಂತಿಮವಾಗಿ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸರಿಯಾಗಿ ಪರಿಶೀಲಿಸಿ ಮುಂದುವರೆಯ ತಕ್ಕದ್ದು. ಸಂಪೂರ್ಣ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಆಗಸ್ಟ್​​ 1 ರಿಂದ ಆರಂಭವಾಗಿದ್ದು, ಈ ಹಿಂದೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 21 ಎಂದು ಪ್ರಕಟಣೆ ಹೊರಡಿಸಲಾಗಿತ್ತು. ಇದೀಗ ಈ ಅವಧಿಯನ್ನು ಆಗಸ್ಟ್​ 28ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆ ವೀಕ್ಷೆಗೆ ಅಭ್ಯರ್ಥಿಗಳು ibps.in ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಿದೆ. ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು https://ibpsonline.ibps.in/crpcl13jun23/ ಈ ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: Jobs in Davanagere: ದಾವಣಗೆರೆ ಜಿಲ್ಲಾ ಪಂಚಾಯತ್​ನಲ್ಲಿವೆ ವಿವಿಧ ಹುದ್ದೆ.. ಬೇಗ ಅರ್ಜಿ ಸಲ್ಲಿಸಿ

ABOUT THE AUTHOR

...view details