ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ ಜೆಪಿ ಭವನದಲ್ಲಿ ಎಷ್ಟು ಅತ್ತಿದ್ದಾರೆಂಬುದು ನನಗೆ ಗೊತ್ತು: ದೇವೇಗೌಡ

ಕುಮಾರಸ್ವಾಮಿ ಸಿಎಂ ಆಗಿ ಎಷ್ಟು ನೋವು ತಿಂದಿದ್ದಾರೆ ಮತ್ತು ಜೆಪಿ ಭವನದಲ್ಲಿ 15 ನಿಮಿಷ ಅತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾರ್ಮಿಕವಾಗಿ ನುಡಿದಿದ್ದಾರೆ.

ಕುಮಾರಸ್ವಾಮಿ ಎಷ್ಟು ಅತ್ತಿದ್ದಾರೆ ನನಗೆ ಗೊತ್ತಿದೆ ದೇವೇಗೌಡ

By

Published : Jul 27, 2019, 8:02 PM IST

ಬೆಂಗಳೂರು:ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಎಷ್ಟು ನೋವು ತಿಂದಿದ್ದಾರೆ ಮತ್ತು ಜೆಪಿ ಭವನದಲ್ಲಿ 15 ನಿಮಿಷ ಅತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾರ್ಮಿಕವಾಗಿ ನುಡಿದಿದ್ದಾರೆ.

ಜೆಪಿ ಭವನದ ರಾಜರಾಜೇಶ್ವರಿನಗರ ಹಾಗೂ ಕೆ.ಆರ್. ಪುರ ಕ್ಷೇತ್ರಗಳ ಮುಖಂಡರ ಮತ್ತು ಪದಾಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಗೌಡರು, ಸರ್ಕಾರ ಹೋಗಿದೆ. ಏನು ಮಾಡುವುದಕ್ಕೆ ಆಗೋದಿಲ್ಲ. ಯಾರು ಏನೇ ಮಾಡಿದರೂ ಈ ಜೆಡಿಎಸ್​ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಸರ್ಕಾರ ಹೋದರೂ ನಮಗೆ ತೊಂದರೆ ಇಲ್ಲ. ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇನೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರನ್ನು ತಿವಿದಿದ್ದಾರೆ. ಶಾಸಕ ಕೆ.ಗೋಪಾಲಯ್ಯ ಅವರು ನಮ್ಮ ಮೇಲೆ ಅನೇಕ ತಪ್ಪು ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿ ಮುಂಬೈಗೆ ಹೋಗಿದ್ದಾರೆ ಎಂದ ಗೌಡರು, ಸ್ಪೀಕರ್ ಈ ವಾರದಲ್ಲಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ನಂತರ ಚುನಾವಣೆ ಇರುತ್ತದೆಯೋ, ಇಲ್ಲವೋ ಗೊತ್ತಿಲ್ಲ ಎಂದರು.

ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ದೇವೇಗೌಡ

ನಾನು ಲೋಕಸಭಾ ಚುನಾವಣೆಯಲ್ಲಿ ಸೋತ ದಿನದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ರಾಜ್ಯದ 30 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ. ಕುಮಾರಸ್ವಾಮಿ ಅವರಿಗೆ ಶೇ. 20ರಷ್ಟು ವೋಟು ಕೊಟ್ಟಿರುವ ಮತದಾರರು ಇದ್ದಾರೆ. ಆಗಸ್ಟ್ 2ನೇ ವಾರದಲ್ಲಿ ಮಹಿಳಾ ಸಮಾವೇಶ ಹಾಗೂ ಆಗಸ್ಟ್ 7ರಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ಉದ್ದೇಶಿಸಿದ್ದೇನೆ ಎಂದರು.


ನಾವು ಪರಿಣಾಮಕಾರಿಯಾಗಿ ವಿರೋಧ ಪಕ್ಷದ ಕೆಲಸ ಮಾಡಲು ನಾನು ಸೂಚನೆ ನೀಡಿದ್ದೇನೆ. ಯಾವುದೇ ದ್ವೇಷ ಇಲ್ಲದೆ ಕೆಲಸ ಮಾಡುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದು, ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ರಾಜ್ಯಕ್ಕೆ ಒಳ್ಳೆಯದು ಮಾಡಿದರೆ ನಮ್ಮ ಸಹಕಾರ ಇರುತ್ತದೆ ಎಂದರು.

ನಾವು ರಚನಾತ್ಮಕವಾಗಿ ಕೆಲಸ ಮಾಡುತ್ತೇವೆಂದು ಹೇಳಿದ್ದೇನೆ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್​ನ ಹಣಕಾಸು ವಿಧೇಯಕ ಮಂಡನೆ ಮಾಡಲಿ. ಎಲ್ಲಾ ವಿಷಯಕ್ಕೂ ಸುಮ್ಮನೆ ವಿರೋಧ ಮಾಡುವುದಿಲ್ಲ. ಹಣಕಾಸು ವಿಧೇಯಕ ಎಲ್ಲರೂ ಸರ್ವಾನುಮತದಿಂದ ಒಪ್ಪಿದರೆ ನಮ್ಮ ಬೆಂಬಲವೂ ಇರುತ್ತದೆ ಎಂದ ದೇವೇಗೌಡರು, ಜಿ.ಟಿ.ದೇವೇಗೌಡರು ಹೇಳಿದ ವಿಚಾರ ದೊಡ್ಡ ವಿಷಯವೇ ಅಲ್ಲ. 14 ತಿಂಗಳಿಗೆ ಮನೆಗೆ ಹೊಗಬೇಕಲ್ಲ ಎಂಬ ನೋವು ಕಾಂಗ್ರೆಸ್​ ಮತ್ತು ಜೆಡಿಎಸ್​ನವರಿಗೆ ಇದೆ. ಹೀಗಾಗಿ ಜಿ.ಟಿ.ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು. ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಆ ಬಗ್ಗೆ ಈಗಲೇ ಚರ್ಚೆ ಯಾಕೆ, ಮುಂದೆ ನೋಡೋಣ ಎಂದರು. ಪ್ರಾದೇಶಿಕ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details