ಕರ್ನಾಟಕ

karnataka

ETV Bharat / state

ಮಾನವ ಕಳ್ಳಸಾಗಾಣಿಕೆ.. ಮಾಹಿತಿ ನೀಡುವಂತೆ ಗೃಹ ಇಲಾಖೆಗೆ ಸರ್ಕಾರದ ಚಾಟಿ

ಕೆಲ ಶಾಲೆಗಳಿಂದಲೂ ಮಕ್ಕಳನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ಬಗ್ಗೆ ಈವರೆಗೂ ಪೊಲೀಸ್ ಇಲಾಖೆಯಲ್ಲಿ ಎಫ್ಐಆರ್ ದಾಖಲು ಮಾಡಿಲ್ಲ. ಪ್ರಕರಣ ಸಂಬಂಧ ಚಾರ್ಜ್​ಶೀಟ್ ಅಥವಾ ಫೈಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಈ ಬಗ್ಗೆ ವರದಿ ನೀಡಿ ಎಂದು ಗೃಹ ಇಲಾಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ..

By

Published : Sep 1, 2020, 5:28 PM IST

ಮಾನವ ಕಳ್ಳ ಸಾಗಾಣೆ ಸಂಬಂಧ ನಡೆಸಿದ ಸಭೆಯ ಕುರಿತು ಮಾಹಿತಿ
ಮಾನವ ಕಳ್ಳ ಸಾಗಾಣೆ ಸಂಬಂಧ ನಡೆಸಿದ ಸಭೆಯ ಕುರಿತು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಅಪರಾಧ ಪ್ರಕರಣ ನಡೆಯುತ್ತಿವೆ. ಇದೀಗ ಈ ಪಟ್ಟಿಗೆ ಮಾನವ ಕಳ್ಳ ಸಾಗಣೆ ಕೂಡ ಸೇರಿದೆ. ಈ ಬಗ್ಗೆ ಸರ್ಕಾರ ಪೊಲೀಸರಿಂದ ಮಾಹಿತಿ ಕೇಳಿದೆ. ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಣೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಈಗಾಗಲೇ ಹೇಳಿದೆ. ಆದರೆ, ವಿಮಾನ ನಿಲ್ದಾಣದ ಮೂಲಕ ಮಹಿಳೆಯರನ್ನು ಮತ್ತು ಮಕ್ಕಳನ್ನು ಕಳ್ಳಸಾಗಾಣೆ ಮಾಡಲಾಗುತ್ತಿದೆ ಎಂಬ ವಿಷಯ ಬಹಿರಂಗವಾಗಿದೆ. ಈ ವಿಚಾರ ವಿಮಾನ ನಿಲ್ದಾಣದ ಪೊಲೀಸರ ಅರಿವಿಗೆ ಬಂದಿಲ್ಲ ಎಂಬುವುದು ಆಶ್ಚರ್ಯಕರ ಸಂಗತಿ.

ಮಾನವ ಕಳ್ಳ ಸಾಗಣೆ ಸಂಬಂಧ ನಡೆಸಿದ ಸಭೆಯ ಕುರಿತು ಮಾಹಿತಿ

ಕೆಲ ಶಾಲೆಗಳಿಂದಲೂ ಮಕ್ಕಳನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ಬಗ್ಗೆ ಈವರೆಗೂ ಪೊಲೀಸ್ ಇಲಾಖೆಯಲ್ಲಿ ಎಫ್ಐಆರ್ ದಾಖಲು ಮಾಡಿಲ್ಲ. ಪ್ರಕರಣ ಸಂಬಂಧ ಚಾರ್ಜ್​ಶೀಟ್ ಅಥವಾ ಫೈಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಈ ಬಗ್ಗೆ ವರದಿ ನೀಡಿ ಎಂದು ಗೃಹ ಇಲಾಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ಜನವರಿ 1ರಂದು ಎಲ್ಲಾ ಇಲಾಖೆಯ ಜೊತೆ ಸಭೆ ನಡೆಸಿದ್ದ ಸಿಎಂ, ಈ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದರು.

ಆದರೆ, ಸಭೆ ನಡೆದು 8 ತಿಂಗಳಾದರೂ ಸಂಕ್ಷಿಪ್ತ ವರದಿ ನೀಡಿಲ್ಲ.‌ ಸದ್ಯ ಈ ಬಗ್ಗೆ ಮತ್ತೆ ಮನವರಿಕೆ ಮಾಡಿರುವ ಸರ್ಕಾರ ಈವರೆಗೆ ದಾಖಲಿಸಲಾದ ಕೇಸ್ ಸ್ಟಡಿ ಬಗ್ಗೆ ಮಾಹಿತಿ ಕೊಡುವಂತೆ ನೋಟಿಸ್ ಮೂಲಕ ಚಾಟಿ ಬೀಸಿದೆ. ಸದ್ಯ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಮಾನವ ಕಳ್ಳ ಸಾಗಣೆ ನಡೆಯುತ್ತಿದೆ.

ABOUT THE AUTHOR

...view details