ಬೆಂಗಳೂರು: ರಸ್ತೆಯಲ್ಲಿ ಮುಸುಕಿನ ಜೋಳ ವ್ಯಾಪಾರ ಮಾಡುವ ವ್ಯಾಪಾರಿಯಾಗಿದ್ದುಕೊಂಡು, ಬೆಂಗಳೂರು ಪಶ್ಚಿಮ ವಿಭಾಗದ ವಿವಿಧೆಡೆ ಮನೆಗಳ್ಳತನ ಮಾಡುತ್ತಿದ್ದ ಮಂಜುನಾಥ್ ಅಲಿಯಾಸ್ ಮೂರ್ತಿ ಎಂಬಾತನನ್ನು ಮಾಗಡಿ ರೋಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಳ್ಳುವ ಗಾಡಿಯಲ್ಲಿ ಜೋಳ ಮಾರಾಟ ಮಾಡುತ್ತಿದ್ದ ಆರೋಪಿ ವ್ಯಾಪಾರ ಅಂದುಕೊಂಡಂತೆ ಆಗುತ್ತಿಲ್ಲ ಎಂದೆನಿಸಿದರೆ ಕಳ್ಳತನಕ್ಕಿಳಿಯುತ್ತಿದ್ದ. ಐದಾರು ಕಿಲೋಮೀಟರ್ ನಡೆದು ಮನೆಗಳನ್ನು ಹುಡುಕಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ. ಬಳಿಕ ಮನೆ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ, ಹಣ ದೋಚಿ ಸದ್ದಿಲ್ಲದೇ ಪರಾರಿಯಾಗುತ್ತಿದ್ದ.