ಬೆಂಗಳೂರು :2020 ಕೊರೊನಾ ಸಂಕಷ್ಟದಿಂದ ನಲುಗಿದ ವರ್ಷ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹೊಸ ವರ್ಷಕ್ಕೆ ಶುಭಾಶಯ ಕೋರಿದ ಹೆಚ್ಡಿಕೆ - Happy New Year 2021
ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಮನುಕುಲ ಬಸವಳಿದ ಈ ದಿನಗಳು ಇಂದಿಗೆ ಕೊನೆಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಸಿಎಂ ಹೆಚ್ಡಿ ಕುಮಾರಸ್ವಾಮಿ
ಈ ಕುರಿತು ಟ್ವೀಟ್ ಮಾಡಿರುವ ಅವರು, ಮನುಕುಲ ಬಸವಳಿದ ಈ ದಿನಗಳು ಇಂದಿಗೆ ಕೊನೆಗೊಳ್ಳಲಿ ಎಂದು ಧೀಶಕ್ತಿಯೇ ಆಗಿರುವ ಪ್ರಕೃತಿಯಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. 2021ರ ಹೊಸ ವರ್ಷವು ಎಲ್ಲರ ಬದುಕಿನಲ್ಲಿ ಕಷ್ಟಗಳ ಕಳೆದು ಹೊಸತನವ ತರಲಿ. ಎಲ್ಲರ ಆರೋಗ್ಯ ಚೇತನಮಯವಾಗಲಿ. Happy New Year 2021 ಎಂದು ಮಾಜಿ ಸಿಎಂ ಶುಭಾಶಯ ಕೋರಿದ್ದಾರೆ.