ಕರ್ನಾಟಕ

karnataka

ವಿಶ್ವದ 11ನೇ ಬಾಡಿ ಬಿಲ್ಡಿಂಗ್ ಸ್ಪರ್ಧೆ: ಭಾರತೀಯ ಸೇನೆಯ ಹವಿಲ್ದಾರ್ ಅನುಜ್ ಕುಮಾರ್ ಪ್ರಥಮ

ಸೋಮವಾರ ದಕ್ಷಿಣ ಕೋರಿಯಾದ ಜೆಜು ದ್ವೀಪದಲ್ಲಿ ನಡೆದ ವಿಶ್ವದ 11ನೇ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರ್ ಕಂಪನಿಯ ಹವಿಲ್ದಾರ್ ಅನುಜ್ ಕುಮಾರ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

By

Published : Nov 12, 2019, 3:37 PM IST

Published : Nov 12, 2019, 3:37 PM IST

ಹವಿಲ್ದಾರ್ ಅನುಜ್ ಕುಮಾರ್

ಬೆಂಗಳೂರು:ಕಳೆದ 8 ವರ್ಷಗಳಿಂದ ಸತತ ಅಭ್ಯಾಸ ನಡೆಸುತ್ತಿದ್ದ ಭಾರತೀಯ ಸೇನೆಯ ಹವಿಲ್ದಾರ್​ ಅನುಜ್​ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ದಕ್ಷಿಣ ಕೋರಿಯಾದ ಜೆಜು ದ್ವೀಪದಲ್ಲಿ ನಡೆದ ವಿಶ್ವದ 11ನೇ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹವಿಲ್ದಾರ್ ಅನುಜ್ ಕುಮಾರ್ ಗೆದ್ದಿದ್ದಾರೆ.

ಹವಿಲ್ದಾರ್ ಅನುಜ್ ಕುಮಾರ್ ತಾಲಿಯಾನ್ ಎಂಇಜಿ ಗೆ 2010 ರಲ್ಲಿ ಸೇರ್ಪಡೆಯಾಗಿದ್ದು, 8 ವರ್ಷದಿಂದ ಕಠಿಣ ತಾಲೀಮು ನಡೆಸಿದ್ದರು. 2018ರಲ್ಲಿ ಮೊದಲ ಚಿನ್ನದ ಪದಕವನ್ನು ರಾಷ್ಟ್ರೀಯ ಸೇವಾ ಸ್ಪರ್ಧೆಯಲ್ಲಿ ಗೆದ್ದಿದ್ದರು. ತದನಂತರ ಪುಣೆಯಲ್ಲಿ ನಡೆದಿದ್ದ 100 ಕೆಜಿ+ ಸ್ಪರ್ಧೆಯಲ್ಲೂ 2018 ರಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಅಲ್ಲಿಂದ ಇವರ ಚಿನ್ನದ ಪದಕ ಬೇಟೆ ಶುರುವಾಗಿದ್ದು, ನಂತರ ಚೆನ್ನೈನಲ್ಲೂ ಸ್ವರ್ಣಪದಕ ಗೆದ್ದುಕೊಂಡರು.

ಪ್ರಸ್ತುತವಾಗಿ ಇವರು ದಕ್ಷಿಣ ಕೊರಿಯಾದ ಜಿಜೋ ದ್ವೀಪದಲ್ಲಿ ನವೆಂಬರ್ 5 ರಿಂದ 11ನೇ ದಿನಾಂಕದವರೆಗೂ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 100 ಕೆಜಿ+ ತೂಕದ ವರ್ಗದಲ್ಲಿ ಚಿನ್ನದ ಪದಕವನ್ನು ಗಳಿಸಿ ಜಯಿಸಿದ್ದಾರೆ.

ABOUT THE AUTHOR

...view details