ಕರ್ನಾಟಕ

karnataka

ETV Bharat / state

ಹಸಿರು ಪಟಾಕಿ ನಿಯಮ ಉಲ್ಲಂಘನೆ.. 110 ಮಳಿಗೆಗಳಿಗೆ ದಂಡ ವಿಧಿಸಿದ ಬಿಬಿಎಂಪಿ - ಹಸಿರು ಪಟಾಕಿ ನಿಯಮ ಉಲ್ಲಂಘನೆ

ಲೈಸೆನ್ಸ್ ಹೊಂದಿದ್ದ ಅಂಗಡಿಗಳು ಮಾತ್ರ ಪಟಾಕಿ ಮಾರಾಟ ಮಾಡಿದ್ದರು. ಆದರೆ, ಸಾಮಾಜಿಕ ಅಂತರ ಕಾಪಾಡುವಲ್ಲಿ ನಿಯಮ ಪಾಲನೆಯಾಗಿಲ್ಲ. ನಿಯಮ ಉಲ್ಲಂಘಿಸಿದ 110 ಮಳಿಗೆಗಳ ಮಾಲೀಕರಿಗೆ 37,050 ರೂ. ದಂಡ ವಿಧಿಸಲಾಗಿದೆ..

green-fireworks-rule-bbmp-fined-110-stores
ಹಸಿರು ಪಟಾಕಿ ನಿಯಮ ಉಲ್ಲಂಘನೆ

By

Published : Nov 24, 2020, 8:50 PM IST

ಬೆಂಗಳೂರು: ದೀಪಾವಳಿ ಹಬ್ಬದಂದು ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿತ್ತು. ಈ ಹಿನ್ನೆಲೆ ಪಟಾಕಿ ಮಾರಾಟಗಾರರಿಗೂ ನಿಯಮಗಳನ್ನು ರೂಪಿಸಲಾಗಿತ್ತು. ಆದರೆ, ನಿಯಮ ಬಾಹಿರವಾಗಿ ಪಟಾಕಿ ಮಾರಾಟ ಮಾಡಿದ ವ್ಯಾಪಾರಿಗಳಿಗೆ ಬಿಬಿಎಂಪಿ ದಂಡ ವಿಧಿಸಿದೆ.

ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಂಡ ವರದಿಯನ್ನು ಹೈಕೋರ್ಟ್ ಕೇಳಿತ್ತು. ಬಿಬಿಎಂಪಿ ನೀಡಿರುವ ಈ ವರದಿಯ ಪ್ರತಿ ಈಟಿವಿ ಭಾರತ್‌ಗೆ ಲಭ್ಯವಾಗಿದೆ. ಪ್ರತಿ ಎಂಟು ವಲಯಗಳ ಪಟಾಕಿ ಮಾರಾಟ ಮಳಿಗೆಗಳಿಗೂ ಮಾರ್ಷಲ್ಸ್ ತೆರಳಿ ಪರಿಶೀಲಿಸಿದ್ದಾರೆ. ಕಾನೂನು ಪಾಲನೆ ಮಾಡದವರಿಗೆ ಫೈನ್ ಹಾಕಲಾಗಿದೆ. ಅದರಲ್ಲೂ ನವೆಂಬರ್ 14 ಹಾಗೂ 15ರಂದು ಮಳಿಗೆಗಳಲ್ಲಿ ಜನ ತುಂಬಿದ್ದರು.

ಲೈಸೆನ್ಸ್ ಹೊಂದಿದ್ದ ಅಂಗಡಿಗಳು ಮಾತ್ರ ಪಟಾಕಿ ಮಾರಾಟ ಮಾಡಿದ್ದರು. ಆದರೆ, ಸಾಮಾಜಿಕ ಅಂತರ ಕಾಪಾಡುವಲ್ಲಿ ನಿಯಮ ಪಾಲನೆಯಾಗಿಲ್ಲ. ನಿಯಮ ಉಲ್ಲಂಘಿಸಿದ 110 ಮಳಿಗೆಗಳ ಮಾಲೀಕರಿಗೆ 37,050 ರೂ. ದಂಡ ವಿಧಿಸಲಾಗಿದೆ.

ಪಟಾಕಿ ಮಾರಾಟಗಾರರಿಗೆ ವಿಧಿಸಿದ ವಲಯವಾರು ದಂಡದ ವಿವರ :

ವಲಯ ಪ್ರಕರಣ ಮೊತ್ತ
ಪೂರ್ವ 19 7000
ಪಶ್ಚಿಮ 09 2250
ದಕ್ಷಿಣ 25 12000
ಮಹದೇವಪುರ 15 3800
ಯಲಹಂಕ 13 3250
ದಾಸರಹಳ್ಳಿ 10 2500
ಆರ್​​ಆರ್ ನಗರ 13 4750
ಬೊಮ್ಮನಹಳ್ಳಿ 06 1500

ಒಟ್ಟಿನಲ್ಲಿ ಈ ಫೋಟೋ ಸಹಿತ ಈ ದಂಡದ ವಿವರವನ್ನು ಹೈಕೋರ್ಟ್‌ಗೆ ಬಿಬಿಎಂಪಿ ವರದಿ ಸಲ್ಲಿಸಿದೆ.

ಪಾಲಿಸಬೇಕಾಗಿದ್ದ ನಿಯಮಗಳು:

1) ಪಟಾಕಿ ಮಾರಾಟ ಮಳಿಗೆಗಳು ಲೈಸೆನ್ಸ್ ಹೊಂದಿರಬೇಕು, ಅದನ್ನು ಮಳಿಗೆಯಲ್ಲಿ ಪ್ರದರ್ಶಿಸಿರಬೇಕು
2) ಹಸಿರು ಪಟಾಕಿ ಮಾತ್ರ ಮಾರಾಟ
3) ಪ್ರತಿ ಮಳಿಗೆ ನಡುವೆ ಆರು ಮೀಟರ್ ಅಂತರ ಇರಬೇಕು
4) ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಮಾರಾಟ
5) ಮಳಿಗೆಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ
6) ಜನರಿಗೆ ಪಟಾಕಿ ಕುರಿತು ಜನಜಾಗೃತಿ ಮೂಡಿಸಬೇಕು

ಎಂಬ ನಿಯಮಗಳನ್ನು ಹಾಕಲಾಗಿದ್ದರೂ, ನಿಯಮ ಉಲ್ಲಂಘಿಸಿದ ಚಿಲ್ಲರೆ ಪಟಾಕಿ ವ್ಯಾಪಾರಿಗಳಿಗೆ ಬಿಬಿಎಂಪಿ ದಂಡ ವಿಧಿಸಿದ್ದು, ವರದಿಯನ್ನು ಉಚ್ಛ ನ್ಯಾಯಾಲಯಕ್ಕೆ ನೀಡಿದೆ.

ಇದನ್ನು ಓದಿ:ಮತ್ತೆ ಬಾಲ್ಯ ವಿವಾಹ ಪರ್ವ.. ಒಂದೇ ದಿನ ನಾಲ್ಕು ಮದುವೆಗೆ ಬ್ರೇಕ್!

ABOUT THE AUTHOR

...view details