ಕರ್ನಾಟಕ

karnataka

ETV Bharat / state

ಡೆತ್ ನೋಟ್ ಎಫ್ಎಸ್ಎಲ್​ಗೆ ರವಾನೆ: ರಮೇಶ್​ ಮರಣೋತ್ತರ ವರದಿ ಬಳಿಕ ತನಿಖೆ

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ(ಪಿಎ) ರಮೇಶ್​ ಆತ್ಮಹತ್ಯೆ ಬಳಿಕ ದೊರೆತಿರುವ ಡೆತ್​ನೋಟ್​ ಅನ್ನು ಎಫ್​ಎಸ್​​ಎಲ್​ ತನಿಖೆಗೆ ನೀಡಲಾಗಿದೆ. ಮತ್ತೊಂದೆಡೆ ಐಟಿ ಅಧಿಕಾರಿಗಳ ವಿರುದ್ಧ ರಮೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

By

Published : Oct 13, 2019, 8:02 AM IST

ರಮೇಶ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​

ಬೆಂಗಳೂರು: ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​ ಅನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದೆ. ಡೆತ್​ ನೋಟ್​ನಲ್ಲಿನ ಕೈಬರಹ ರಮೇಶ್​ ಅವರೇ ಬರೆದಿದ್ದಾ ಎಂಬುದರ ಕುರಿತು ತನಿಖೆ ನಡೆಯಲಿದೆ.

ರಮೇಶ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​

ಐಟಿ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಮೇಶ್​ ಕುಟುಂಬಸ್ಥರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಘಟನಾ ಸ್ಥಳ ಪರಿಶೀಲಿಸಿರುವ ಪೊಲೀಸರು, ವೈದ್ಯರ ಮೌಖಿಕ ವರದಿ ಹಾಗೂ ಕುಟುಂಬದವರ ದೂರಿನ ಸಾರಾಂಶ ಆಧರಿಸಿ ಅಸಹಜ ಸಾವು ಎಂದು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಸದ್ಯಕ್ಕೆ ಜಿ. ಪರಮೇಶ್ವರ್ ಅವರ ಸಂಸ್ಥೆಗಳ ಮೇಲಿನ ಐಟಿ ದಾಳಿಯನ್ನು ಮೊಟಕುಗೊಳಿಸಲಾಗಿದೆ.

ABOUT THE AUTHOR

...view details