ಕರ್ನಾಟಕ

karnataka

ETV Bharat / state

ಉಚಿತ ಸೆಟ್ ಟಾಪ್ ಬಾಕ್ಸ್ ವಿವಾದ: ಕಾಂಗ್ರೆಸ್ ದೂರು ನೀಡಿದರೆ ನಾನೂ ದೂರು ನೀಡುತ್ತೇನೆ - ಮುನಿರತ್ನ ಟಾಂಗ್​​

ಉಚಿತ ಸೆಟ್ ಟಾಪ್ ಬಾಕ್ಸ್ ವಿರುದ್ಧ ದೂರು ಕೊಡುವುದಾಗಿ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನವರು ದೂರು ಕೊಟ್ರೆ ನಾನೂ ಕೊಡುತ್ತೇನೆ, ನಾನು ಕಾನೂನು ಬದ್ಧ ವ್ಯಾಪಾರ ಮಾಡುತ್ತಿದ್ದೇನೆ. ಅದೇ ವಿರೋಧ ಅಂದರೆ ಹೇಗೆ ? ಕೇಬಲ್ ನಡೆಸಲು ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಜಿಯೋ, ಡೆನ್, ರಿಲಯನ್ಸ್, ಏರ್​​ಟೆಲ್​, ಟಾಟಾ ಸ್ಕೈ ಇವರೆಲ್ಲರಿಗೂ ಕೇಂದ್ರವೇ ಅನುಮತಿ‌ ಕೊಟ್ಟಿದೆ. ಇವರದ್ದೆಲ್ಲ ತಪ್ಪಾ‌ ಹಾಗಾದರೆ? ಎಂದು ಆರೋಪ ಕುರಿತು ಸ್ಪಷ್ಟೀಕರಣ ನೀಡಿದರು.

By

Published : Oct 26, 2020, 10:21 PM IST

munirathna
ಮುನಿರತ್ನ

ಬೆಂಗಳೂರು:ಉಚಿತ ಸೆಟ್ ಟಾಪ್ ಬಾಕ್ಸ್ ವಿರುದ್ಧ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ದೂರು ಕೊಟ್ಟರೆ ನಾನೂ ದೂರು ಕೊಡುತ್ತೇನೆ, ಇಬ್ಬರೂ ದೂರುಗಳನ್ನು ಕೊಡೋಣ, ಕಾನೂನಿನಡಿ ಯಾರಿಗೆ ಶಿಕ್ಷೆ ಆಗುತ್ತದೆಯೋ ಆಗಲಿ ಎಂದು ಕಾಂಗ್ರೆಸ್​ಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿರುಗೇಟು ನೀಡಿದ್ದಾರೆ.

ಆರ್​ಆರ್ ನಗರ‌ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಬಿರುಸಿನ ಪ್ರಚಾರ ನಡೆಸಿದರು. ಜಾಲಹಳ್ಳಿ ವಾರ್ಡ್​ನ ಸಿದ್ಧಾರ್ಥನಗರದಲ್ಲಿ ಕಾಲ್ನಡಿಗೆ ಮೂಲಕ‌ ಪ್ರಚಾರ ನಡೆಸಿದರು. ಈ ವೇಳೆ, ಮಾತನಾಡಿದ ಮುನಿರತ್ನ, ಕೇಬಲ್ ನೆಟವರ್ಕ್ ನನ್ನ ವೃತ್ತಿ ಅವರೂ ಸಹ ವ್ಯಾಪಾರಸ್ಥರು ಅವರೂ ಕೂಡ ಕೇಬಲ್ ವ್ಯಾಪಾರ ಮಾಡ್ತಾರೆ. ನನಗೆ ಅನ್ವಯಿಸುವ ಕಾನೂನು ಅವರಿಗೂ ಅನ್ವಯವಾಗತ್ತದೆ. ರಾಜಕೀಯ ದ್ವೇಷ ಅಸೂಯೆಗಳಿಗೆ ನಾನು ಉತ್ತರ ಕೊಡುವುದಿಲ್ಲ, ನಾನು ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ತೀರಾ ಅಂದರೆ ತೀರಾ ಸಣ್ಣವನು ಎಂದು ಡಿಕೆ ಶಿವಕುಮಾರ್ ಆರೋಪಕ್ಕೆ ಟಾಂಗ್ ನೀಡಿದರು.

ಉಚಿತ ಸೆಟ್ ಟಾಪ್ ಬಾಕ್ಸ್ ವಿರುದ್ಧ ದೂರು ಕೊಡುವುದಾಗಿ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​​​ನವರು ದೂರು ಕೊಟ್ರೆ ನಾನೂ ಕೊಡುತ್ತೇನೆ, ನಾನು ಕಾನೂನುಬದ್ಧ ವ್ಯಾಪಾರ ಮಾಡುತ್ತಿದ್ದೇನೆ, ಅದೇ ವಿರೋಧ ಅಂದರೆ ಹೇಗೆ ? ಕೇಬಲ್ ನಡೆಸಲು ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಜಿಯೋ, ಡೆನ್, ರಿಲಯನ್ಸ್, ಏರ್​​​ಟೆಲ್​​, ಟಾಟಾ ಸ್ಕೈ ಇವರೆಲ್ಲರಿಗೂ ಕೇಂದ್ರವೇ ಅನುಮತಿ‌ ಕೊಟ್ಟಿದೆ. ಇವರದ್ದೆಲ್ಲ ತಪ್ಪಾ‌ ಹಾಗಿದ್ದರೆ ? ಎಂದು ಆರೋಪ ಕುರಿತು ಸ್ಪಷ್ಟೀಕರಣ ನೀಡಿದರು.

ಪ್ರತಿ ಚುನಾವಣೆಯಲ್ಲೂ ಆರ್​ಆರ್ ನಗರ ಜನ ಕೈ ಹಿಡಿದಿದ್ದಾರೆ ನಾನು ಅವರಿಗೆಲ್ಲ ಋಣಿಯಾಗಿದ್ದೇನೆ. ಇದು ಶಾಂತಿಯುತ ಕ್ಷೇತ್ರ, ಶಾಂತಿ ಕದಡುವ ಕೆಲಸ ಯಾರೂ ಮಾಡಬಾರದು, ಅ.31 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಮುನಿರತ್ನ ಕೆಲಸ ಮಾಡುತ್ತಾನೆ, ಕಾಂಗ್ರೆಸ್ ಪಕ್ಷದ ಶಾಸಕರಿಗೆ ಕೆಲಸ ಇಲ್ಲ. ಸರ್ಕಾರ ಇರುವಾಗ ಮುನಿರತ್ನಗೆ ಕೆಲಸ ಮಾಡುವುದಕ್ಕೆ ಅವಕಾಶ ಕೊಡೋಣ ಅಂತ ಜನ ಹೇಳುತ್ತಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರ ಸಾಥ್:

ಇನ್ನು ಆರ್.ಆರ್.ನಗರದ ವಿವಿಧ ಪ್ರದೇಶದಲ್ಲಿ ಸಚಿವರಾದ ಗೋಪಾಲಯ್ಯ ಮತ್ತು ನಾರಾಯಣಗೌಡ ಪ್ರಚಾರ ನಡೆಸಿದರು. ಮುನಿರತ್ನ ಪರ ಮತ ಯಾಚಿಸಿದರು. ಮನೆ ಮನೆ ಪ್ರಚಾರ, ವೇದಿಕೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮುನಿರತ್ನ ಚುನಾವಣಾ ಪ್ರಚಾರಕ್ಕೆ ಸಾಥ್ ನೀಡಿದರು.

ABOUT THE AUTHOR

...view details