ಕರ್ನಾಟಕ

karnataka

ETV Bharat / state

ಮಾಸ್ಕ್​​ ಹೆಸರಿನಲ್ಲಿ ವೈದ್ಯನಿಗೆ ₹98.39 ಲಕ್ಷ ಟೋಪಿ ಹಾಕಿದ ವಂಚಕ..!

ಗುಣಮಟ್ಟದ ಮಾಸ್ಕ್ ಒದಗಿಸುವುದಾಗಿ ನಂಬಿಸಿ ವೈದ್ಯನಿಗೆ 98.39 ಲಕ್ಷ ರೂಪಾಯಿ ಟೋಪಿ ಹಾಕಿ ವಂಚಿಸಲಾಗಿದ್ದು, ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

By

Published : Jul 27, 2020, 6:53 PM IST

Updated : Jul 27, 2020, 7:08 PM IST

Fraud in Mask & Sanitizer Purchase
ಮಾಸ್ಕ್​​ ಹೆಸರಿನಲ್ಲಿ ವೈದ್ಯರಿಗೆ ₹98.39 ಲಕ್ಷ ಟೋಪಿ ಹಾಕಿದ ವಂಚಕ

ಬೆಂಗಳೂರು:‌ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹೆಸರಿನಲ್ಲಿ ವಂಚಿಸುವವರ ಸಂಖ್ಯೆ ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ. ಗುಣಮಟ್ಟದ ಮಾಸ್ಕ್ ಒದಗಿಸುವುದಾಗಿ ನಂಬಿಸಿ ವೈದ್ಯನಿಗೆ 98.39 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಡಾ‌.ರೋಹಿತ್ ಎಂಬುವರು ಹಣ ಕಳೆದುಕೊಂಡಿದ್ದು,‌ ವೃತ್ತಿಯಲ್ಲಿ ಇವರು ವೈದ್ಯರಾಗಿದ್ದಾರೆ. ಚರ್ಚ್‌ ಸ್ಟ್ರೀಟ್ ಬಳಿ ಕಚೇರಿ ಇಟ್ಟುಕೊಂಡಿದ್ದಾರೆ. ಕೋವಿಡ್​ಗೆ ಸಂಬಂಧಿಸಿದ ತುರ್ತು ಮೆಡಿಕಲ್‌ ಕಿಟ್​ಗಳನ್ನು‌ ಖರೀದಿಸಲು, ಕೊಯಮತ್ತೂರು ಮೂಲದ ವಿನೂಜ್ ಮೊಹಮ್ಮದ್ ಮೂಲಕ ಗುಜರಾತ್​ನ ಕಂಪನಿಯೊಂದರಲ್ಲಿ‌ ಗುಣಮಟ್ಟದ ಮಾಸ್ಕ್ ಖರೀದಿಸಲು ರೋಹಿತ್ ಮುಂದಾಗಿದ್ದರು‌.

ಇದಕ್ಕೆ‌ ಪ್ರತಿಯಾಗಿ ವಿನೂಜ್​ಗೆ 10 ಲಕ್ಷ ಮಾಸ್ಕ್ ಖರೀದಿಗೆ ಆರ್ಡರ್ ಮಾಡಿ ಹಣ ಸಂದಾಯ ಮಾಡಿದ್ದರು. ಕೆಲ‌ ದಿನಗಳ ಬಳಿಕ 10 ಲಕ್ಷ ಮಾಸ್ಕ್ ಬದಲಿಗೆ ವಿನೂಜ್ 2.9 ಲಕ್ಷ ಮಾತ್ರ ಮಾಸ್ಕ್ ಸರಬರಾಜು ಮಾಡಿದ್ದ. ಒಂದು ಬಾಕ್ಸ್​​ನಲ್ಲಿ‌ 100 ಮಾಸ್ಕ್ ಇರುವ ಜಾಗದಲ್ಲಿ 50 ರಿಂದ 60 ಮಾಸ್ಕ್​ಗಳು ಇದ್ದವು. ಅಲ್ಲದೆ ಅವು ತೀರಾ ಕಳಪೆ ಮಟ್ಟದ ಮಾಸ್ಕ್​ ಆಗಿದ್ದವು. ಇನ್ನುಳಿದ ಮಾಸ್ಕ್ ಬಗ್ಗೆ ಪ್ರಶ್ನಿಸಿದರೆ ಮುಂದಿನ ದಿನಗಳಲ್ಲಿ ಸರಬರಾಜು ಮಾಡುವುದಾಗಿ ಆರೋಪಿ ನಂಬಿಸಿದ್ದ.‌

ವಂಚಕನ‌ ಮಾತನ್ನು ನಂಬಿ‌ ಮತ್ತೆ 20 ಲಕ್ಷ ಮಾಸ್ಕ್ ಸರಬರಾಜು ಮಾಡುವಂತೆ ಆರೋಪಿಗೆ, ಆರ್ಡರ್ ಕೊಟ್ಟು 72.91 ಲಕ್ಷ ರೂ.ಹಣವನ್ನು‌ ವೈದ್ಯರು ನೀಡಿದ್ದಾರೆ. ಮಾಸ್ಕ್​ಗಾಗಿ ₹ 98.39 ಲಕ್ಷ ನೀಡಿ ಹಲವು ದಿನಗಳಾದರೂ ಮಾಸ್ಕ್ ಸರಬರಾಜು‌‌ ಮಾಡದೆ‌‌, ಹಣ‌ವು ನೀಡದೆ ಸತಾಯಿಸಿ ವಂಚಕ ತಲೆ‌ಮರೆಸಿಕೊಂಡಿದ್ದಾನೆ. ವಂಚನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Last Updated : Jul 27, 2020, 7:08 PM IST

ABOUT THE AUTHOR

...view details