ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ ಶಾಸಕರ ಜತೆ ಆಗಮಿಸಿ ಡಿಕೆಶಿ ಭೇಟಿಯಾದ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ - ಈಟಿವಿ ಭಾರತ ಕನ್ನಡ

ದೊಡ್ಡಬಳ್ಳಾಪುರ ಶಾಸಕರ ಜೊತೆ ಡಿಕೆಶಿ ಭೇಟಿಯಾದ ಮಾಜಿ ಶಾಸಕ - ಕಾಂಗ್ರೆಸ್​ ಸೇರುತ್ತಾರಾ ಜೆ ನರಸಿಂಹಸ್ವಾಮಿ?; ಕುತೂಹಲ ಕೆರಳಿಸಿದ ಮಾಜಿ ಶಾಸಕರ ನಡೆ

congress
ಮಾಜಿ ಶಾಸಕ ಜೆ ನರಸಿಂಹಸ್ವಾಮಿ

By

Published : Feb 28, 2023, 3:53 PM IST

ಬೆಂಗಳೂರು: ರಾಜಕೀಯ ನೆಲೆ ಕಂಡುಕೊಳ್ಳುವ ವಿಚಾರದಲ್ಲಿ ಪ್ರತಿಪಕ್ಷ ನಾಯಕರ ಸಂಪರ್ಕದಲ್ಲಿರುವ ಮಾಜಿ ಶಾಸಕ ಜೆ ನರಸಿಂಹಸ್ವಾಮಿ ಇದೀಗ ಕೆಪಿಸಿಸಿ ಅಧ್ಯಕ್ಷರ ಮನೆಗೆ ಭೇಟಿ ಕೊಟ್ಟಿದ್ದಾರೆ. ದೊಡ್ಡಬಳ್ಳಾಪುರ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ ಜೊತೆ ಡಿ ಕೆ ಶಿವಕುಮಾರ್ ಭೇಟಿಗೆ ಆಗಮಿಸಿದ್ದ ಆರ್​ ಎಲ್ ಜಾಲಪ್ಪ ಪುತ್ರ ಜೆ ನರಸಿಂಹಸ್ವಾಮಿ ಕಾಂಗ್ರೆಸ್ ಸೇರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿವೆ.

ಆದರೆ ಈ ಬಗ್ಗೆ ಮಾತನಾಡಿರುವ ದೊಡ್ಡಬಳ್ಳಾಪುರ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ, ಇದೊಂದು ಸೌಹಾರ್ದ ಭೇಟಿ. ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಬೇಕಿತ್ತು. ನಮ್ಮ ಕ್ಷೇತ್ರದ ಮಾಜಿ ಶಾಸಕರಾದ ಜೆ. ನರಸಿಂಹಸ್ವಾಮಿ ಸಹ ಬಂದಿದ್ದರು. ಇದೊಂದು ರಾಜಕೀಯ ಭೇಟಿ ಅಲ್ಲ. ನರಸಿಂಹಸ್ವಾಮಿ ಈ ಹಿಂದೆ ಶಾಸಕರಾಗಿದ್ದವರು. ಇವರು ಬಂದರೆ ದೊಡ್ಡಬಳ್ಳಾಪುರದಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬರುತ್ತದೆ. ಅವರು ಮರಳುವುದಾದರೆ ಸ್ವಾಗತ. ಆದರೆ ಪ್ರವಾಸಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಕಾರಣ ಇಂದು ಡಿ.ಕೆ. ಶಿವಕುಮಾರ್ ಅವರ ಜೊತೆ ಯಾವುದೇ ರಾಜಕೀಯ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಭದ್ರಾ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ನೀರು ಬಿಟ್ಟರೇ ಜೋಕೆ: ಸರ್ಕಾರಕ್ಕೆ ಎಚ್ಚರಿಸಲು ಹೋರಾಟಕ್ಕಿಳಿದ ದಾವಣಗೆರೆ ರೈತರು

ಅಂದಹಾಗೆ ಇವರು ಕಾಂಗ್ರೆಸ್​ ಪಕ್ಷದ ಬಳಿ ಬರುವ ಮುನ್ನ ಕಳೆದ ಎರಡು ತಿಂಗಳಿನಿಂದ ಜೆಡಿಎಸ್ ಜತೆ ಸಂಪರ್ಕದಲ್ಲಿದ್ದರು ಎಂಬ ಮಾತುಗಳು ಇವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಲು ಆಗಮಿಸಿದ್ದ ಶಾಸಕ ವೆಂಕಟರಮಣಯ್ಯ ಜೊತೆ ಆಗಮಿಸಿರುವ ಮಾಜಿ ಶಾಸಕ ನರಸಿಂಹಸ್ವಾಮಿ ಕಾಂಗ್ರೆಸ್ ಸೇರ್ಪಡೆ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಳಿವೆ. ಆದರೆ, ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಶಾಸಕ ವೆಂಕಟರಮಣಯ್ಯ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ರಾಜಮೌಳಿ ಹಾಗು ಕೀರವಾಣಿ ಅವರಿಂದ ಮೆಚ್ಚುಗೆ ಪಡೆದ ಚಿತ್ರಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ: ಶತಕದ ಖುಷಿ

ಸೌಹಾರ್ದಯುತ ಭೇಟಿ:ಇಂದು ಕೆಪಿಸಿಸಿ ಅಧ್ಯಕ್ಷರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರ ಕುರಿತು ಮಾತನಾಡಿರುವ ದೊಡ್ಡಬಳ್ಳಾಪುರ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ, ’’ಇದೊಂದು ಸೌಹಾರ್ದ ಭೇಟಿ. ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಬೇಕಿತ್ತು. ನಮ್ಮ ಕ್ಷೇತ್ರದ ಮಾಜಿ ಶಾಸಕರಾದ ಜೆ. ನರಸಿಂಹಸ್ವಾಮಿ ಸಹ ಬಂದಿದ್ದರು. ಇದೊಂದು ರಾಜಕೀಯ ಭೇಟಿ ಅಲ್ಲ. ನರಸಿಂಹಸ್ವಾಮಿ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿದ್ದವರು. ಅವರ ತಂದೆ ಆರ್​.ಎಲ್​. ಜಾಲಪ್ಪ ಹಿರಿಯ ಕಾಂಗ್ರೆಸ್​ ನಾಯಕರು. ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಜೆ. ನರಸಿಂಹಸ್ವಾಮಿ ಕುಟುಂಬಕ್ಕೆ ಕಾಂಗ್ರೆಸ್ ನಂಟು ಇದೆ. ಒಂದು ದುರ್ಬಲ ಸಂದರ್ಭದಲ್ಲಿ ಅವರು ಬಿಜೆಪಿಗೆ ಹೋಗಿದ್ದಾರೆ. ಅವರ ಮನಸ್ಥಿತಿ ಹೇಗಿದೆ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಸೇರಿದರೆ ಸ್ವಾಗತ. ಪಕ್ಷ ಬಿಟ್ಟವರನ್ನು ಮರಳಿ ಸೇರಿಸಿಕೊಳ್ಳುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ. ನರಸಿಂಹಸ್ವಾಮಿ ಪಕ್ಷದ ಶಾಸಕರಾಗಿದ್ದವರು. ಇವರು ಬಂದರೆ ದೊಡ್ಡಬಳ್ಳಾಪುರದಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬರುತ್ತದೆ. ಅವರು ಮರಳುವುದಾದರೆ ಸ್ವಾಗತ. ಆದರೆ, ಪ್ರವಾಸಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಕಾರಣ ಇಂದು ಡಿ.ಕೆ. ಶಿವಕುಮಾರ್ ಅವರ ಜೊತೆ ಯಾವುದೇ ರಾಜಕೀಯ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ನರಸಿಂಹಸ್ವಾಮಿ ರಾಜಕೀಯ ಪಯಣ:2008 ರಲ್ಲಿ ಕಾಂಗ್ರೆಸ್ ಶಾಸಕರಾಗಿ ದೊಡ್ಡಬಳ್ಳಾಪುರದಿಂದ ಆಯ್ಕೆಯಾಗಿದ್ದ ನರಸಿಂಹಸ್ವಾಮಿ 2013 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಹುತೇಕ ಕಾಂಗ್ರೆಸ್​ ಬಲ ಹೆಚ್ಚಿರುವ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರಬಲ ಪೈಪೋಟಿ ನೀಡುತ್ತಾ ಬಂದಿದ್ದು, ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್​ನ ವೆಂಕಟರಮಣಯ್ಯ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ನರಸಿಂಹಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ದೊಡ್ಡಬಳ್ಳಾಪುರದಿಂದ 2013 ಮತ್ತು 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ನಾಲ್ಕು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಕಾಂಗ್ರೆಸ್​ ಪಕ್ಷದಲ್ಲಿ ಶಾಸಕರಾಗಿದ್ದ ವರ್ಷ(2008)ದಲ್ಲಿ ಶೇ.52ರಷ್ಟು ಮತ ಅಂದರೆ 51,724 ಮತ ಗಳಿಸಿ ಅಂದಿನ ಜೆಡಿಎಸ್ ಅಭ್ಯರ್ಥಿ ಸಿ.ಚೆನ್ನಿಗಪ್ಪ ವಿರುದ್ಧ 3,754 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿ 2013 ರಲ್ಲಿ 32,753 ಮತ್ತು 2018ರಲ್ಲಿ 27,612 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ಆರ್ ಎಲ್ ಜಾಲಪ್ಪ ಅತ್ಯಂತ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಗುರುತಿಸಿಕೊಂಡಿದ್ದರು. ಆದರೆ, ಅವರ ಪುತ್ರರಾಗಿರುವ ಜೆ ನರಸಿಂಹಸ್ವಾಮಿ ಅವರು ಬಿಜೆಪಿ ಬಲೆಗೆ ಬಿದ್ದು ರಾಜಕೀಯ ಭವಿಷ್ಯ ಮಂಕಾಗಿಸಿಕೊಂಡಿದ್ದು, ತಮ್ಮನ್ನು ಶಾಸಕರನ್ನಾಗಿ ಮಾಡಿದ್ದ ಕಾಂಗ್ರೆಸ್​ನತ್ತ ಮತ್ತೆ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details