ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಲೇ ಇದ್ದು, ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ವೈದ್ಯರು- ದ್ಯಕೀಯ ಸಿಬ್ಬಂದಿಗೆ ಭಾರತೀಯ ವಾಯುಪಡೆ ಯೋಧರಿಂದ ನಾಳೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸುವ ಮೂಲಕ ವಿಶೇಷ ಗೌರವ ವಂದನೆ ಸಲ್ಲಿಸಲಾಗುತ್ತಿದೆ.
ಕೊರೊನಾ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮೇಲೆ ಸೇನಾ ಹೆಲಿಕಾಪ್ಟರ್ನಿಂದ ನಾಳೆ ಹೂಮಳೆ!
ಕೊರೊನಾ ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ನಾಳೆ ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸುವ ಮೂಲಕ ವಿಶೇಷವಾಗಿ ಗೌರವ ಅರ್ಪಿಸಲಿದೆ.
ಸೇನಾ ಹೆಲಿಕಾಪ್ಟರ್
ಸೇನಾ ಹೆಲಿಕಾಪ್ಟರ್ ಮೊದಲಿಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ, ನಂತರ ಕಮಾಂಡ್ ಆಸ್ಪತ್ರೆಯ ಕೊರೊನಾ ವಾರಿಯರ್ಸ್ಗೆ ಹೂಮಳೆ ಸುರಿಸಿ ಸಲ್ಯೂಟ್ ಮಾಡಲಾಗುತ್ತದೆ. ನಾಳೆ ಬೆಳಗ್ಗೆ 10:30ರಿಂದ 10:45ರ ನಡುವೆ ವಾಯುಪಡೆ ಯೋಧರು ಹೂಮಳೆ ಸುರಿಸಲಿದ್ದಾರೆ.
ನಂತರ ಮಧ್ಯಾಹ್ನ 3-45ಕ್ಕೆ ವಿಧಾನಸೌಧದ ಮೇಲೂ ಹೂಮಳೆ ಸುರಿಸಲಿದ್ದಾರೆ.