ಕರ್ನಾಟಕ

karnataka

By

Published : Sep 19, 2020, 8:40 PM IST

ETV Bharat / state

ಸ್ಯಾಂಡಲ್​ವುಡ್​ ಡ್ರಗ್ಸ್​ ವಿವಾದ: ಅಕುಲ್​, ಸಂತೋಷ್​, ಯುವರಾಜ್​​ಗೆ ಮುಳುವಾದನಾ ವೈಭವ್​ ಜೈನ್​?

ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ತುಪ್ಪದ ಬೆಡಗಿ ರಾಗಿಣಿ, ಸಂಜನಾ ಹಚ್ಚಿದ್ದ ಡ್ರಗ್ ಎಂಬ ಕಿಡಿ ಆ್ಯಂಕರ್ ಅಕುಲ್ ಬಾಲಾಜಿ, ನಟ ಸಂತೋಷ್ ವರೆಗೆ ವ್ಯಾಪಿಸಿ, ಯುವ ಕೈ ಮುಖಂಡ ಆರ್.ವಿ.ಯುವರಾಜ್ ಕೂಡ ಬೆಂದು ಹೋಗುವಂತೆ ಮಾಡಿದೆ.

CCB office
ಸಿಸಿಬಿ ಕಚೇರಿ

ಬೆಂಗಳೂರು: ಚಂದನವನದಲ್ಲಿ ಈಗ ಡ್ರಗ್ ಎಂಬ ದುರ್ವಾಸನೆ ಘಾಟು ಹೆಚ್ಚಾಗಿದೆ. ಅಲ್ಲಿ ಸಿಕ್ಕಿ ಬೀಳ್ತಿರೋ ಒಬ್ಬೊಬ್ಬರನ್ನೇ ಸಿಸಿಬಿ ಬೆಂಡತ್ತುತ್ತಿದೆ. ಇವತ್ತು ತ್ರಿಮೂರ್ತಿಗಳ ವಿಚಾರಣೆ ನಡೆಸಿದ ಸಿಸಿಬಿ ಸರಿಯಾದ ಶಾಕ್ ಕೊಟ್ಟಿದೆ. ಯಾರು ಆ ತ್ರಿಮೂರ್ತಿಗಳು ಡ್ರಗ್ ಪ್ರಕರಣದಲ್ಲಿ ಇಂದು ನಡೆದ ಬೆಳವಣಿಗೆ ಬಗೆಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಘಟಾನುಘಟಿ ಸ್ಟಾರ್ಸ್ ಬೆವರಿಳಿಸಿದ ಸಿಸಿಬಿ..!

ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ತುಪ್ಪದ ಬೆಡಗಿ ರಾಗಿಣಿ, ಸಂಜನಾ ಹಚ್ಚಿದ್ದ ಡ್ರಗ್ ಎಂಬ ಕಿಡಿ ಆ್ಯಂಕರ್ ಅಕುಲ್ ಬಾಲಾಜಿ, ನಟ ಸಂತೋಷ್ ವರೆಗೆ ವ್ಯಾಪಿಸಿ, ಯುವ ಕಾಂಗ್ರೆಸ್​ ಮುಖಂಡ ಆರ್.ವಿ.ಯುವರಾಜ್ ಕೂಡ ಬೆಂದು ಹೋಗುವಂತೆ ಮಾಡಿದೆ. ಸಿಸಿಬಿ ಕೋಟೆಯಲ್ಲಿ ಲಾಕ್ ಆದ ಮೂವರು ಸ್ಫೋಟಕ ವಿಷಯವನ್ನ ತನಿಖಾಧಿಕಾರಿ ಎದುರು ಬಾಯ್ಬಿಟ್ಟಿದ್ದಾರೆ.

ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆ ಮಾಜಿ ಕಾರ್ಪೊರೇಟರ್ ಪ್ರಭಾವಿ ಕೈ ನಾಯಕ ಆರ್.ವಿ ದೇವರಾಜ್ ಪುತ್ರ ಆರ್.ವಿ ಯುವರಾಜ್ ಹೇಳಿದ ಸಮಯಕ್ಕಿಂತ ಮೊದಲೇ ಸಿಸಿಬಿ ಕಚೇರಿ ಬಾಗಿಲು ತಟ್ಟಿದ್ದರು. ಅತ್ತ ಸಂತೋಷ್ ಹಾಗೂ ಅಕುಲ್ ಬಾಲಾಜಿ ತಡವಾಗಿದ್ದಕ್ಕೆ ತಡಬಡಾಯಿಸಿಕೊಂಡು 10.20 ಕ್ಕೆ ಬಂದಿದ್ದೆ ತಡ ನಮ್ಮದೇನು ತಪ್ಪಿಲ್ಲ. ಈ ಡ್ರಗ್ ಕೇಸ್​ಗೂ ನಮಗೂ ಸಂಬಂಧವೇ ಇಲ್ಲ ಅಂತ ಮಾಧ್ಯಮದೆದುರು ಮಾಹಿತಿ ನೀಡಿದರು.

ಬಳಿಕ ವಿಚಾರಣೆ ಆರಂಭಿಸಿದ ತನಿಖಾಧಿಕಾರಿಗಳು ಡ್ರಗ್ ಪ್ರಕರಣದ ಬಗ್ಗೆ ನಿಮಗೇನು ಗೊತ್ತು ಹೇಳಿ ಅಂತಾ ಕೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ದಂಧೆ ಇದೆ. ಆದ್ರೆ ಅದಕ್ಕೂ ನಮಗೂ ಸಂಬಂಧವೇ ಇಲ್ಲ. ಈ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ವೈಭವ್ ಜೈನ್ ಈ ಮೂವರಿಗೆ ಮುಳುವಾಗಿಬಿಟ್ನಾ?

ಹೌದು, ಈಗಾಗಲೇ ಸಿಸಿಬಿಯ ಬಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ವೈಭವ್ ಜೈನ್ ಈ ಮೂವರ ಹೆಸರನ್ನು ತನಿಖಾಧಿಕಾರಿಗಳ‌ ಮುಂದೆ ಕಕ್ಕಿದ್ದಾನೆ ಎನ್ನಲಾಗ್ತಿದೆ.‌‌ ಅದೇ ಕಾರಣಕ್ಕೆ ಅಕುಲ್, ಸಂತೋಷ್, ಯುವರಾಜ್ ಸಿಸಿಬಿ ಎದುರು ಹಾಜರಾಗುವಂತೆ ಮಾಡಿದೆ. ಆದ್ರೆ ವಿಚಾರಣೆ ವೇಳೆ ವೈಭವ್ ಜೈನ್ ನಮ್ಮ ಸ್ನೇಹಿತನಷ್ಟೇ ಆದ್ರೆ ಆತನ ಡ್ರಗ್ ಪಾರ್ಟಿ ಬಗ್ಗೆ ನಮಗೇನು ಗೊತ್ತೇ ಇಲ್ಲ ಎಂದಾಗ ಸಿಸಿಬಿ ಅಧಿಕಾರಿಗಳು ಒಂದಷ್ಟು ಟೆಕ್ನಿಕಲ್ ಎವಿಡೆನ್ಸ್ ಮುಂದಿಟ್ಟಿದ್ದಾರೆ.

ಸತತ 7 ಗಂಟೆ ವಿಚಾರಣೆ ನಡೆಸಿದ ಸಿಸಿಬಿ ಯಾವುದೊ ಒಂದು ಮೂಲೆಯಿಂದ ಡ್ರಗ್ ದಂಧೆಯಲ್ಲಿ ಇವರ ಪಾತ್ರ ಇರುವ ಬಗ್ಗೆ ವಾಸನೆ ಬಂದಿದೆ. ಸದ್ಯ ಇವರ ಹೇಳಿಕೆ ದಾಖಲಿಸಿಕೊಂಡಿರುವ ಸಿಸಿಬಿ ನೀವು ಹೊರಡಿ ಮತ್ತೆ ನೋಟಿಸ್ ಕೊಟ್ಟಾಗ ಬನ್ನಿ ಅಂತಾ ಹೇಳಿ ಕಳಿಸಿ ಅವರ ಮೊಬೈಲ್​ಗಳನ್ನು ಜಪ್ತಿ ಮಾಡಿದೆ.

ABOUT THE AUTHOR

...view details