ಕರ್ನಾಟಕ

karnataka

ರಾಜ್ಯಪಾಲರಿಗೆ ರೈತರ ಪತ್ರ: 'ಲಿಖಿತ ಪತ್ರದ ಮೂಲಕ ಭೇಟಿ ಮಾಡಲ್ಲ ಎಂದು ಹೇಳಿ'

By

Published : Oct 19, 2019, 11:35 AM IST

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ವಿಳಂಬ ಹಿನ್ನೆಲೆ ಉತ್ತರ ಕರ್ನಾಟಕದಿಂದ ಬಂದ ನೂರಾರು ರೈತರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಧರಣಿ ನಡೆಸುತ್ತಿದ್ದಾರೆ. ರಾಜ್ಯಪಾಲರ ಭೇಟಿಗೆ ಕಾದು ಬಳಲಿರುವ ರೈತರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಾಲರಿಗೆ ರೈತರ ಪತ್ರ

ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ವಿಳಂಬ ಹಿನ್ನೆಲೆ ಉತ್ತರ ಕರ್ನಾಟಕದಿಂದ ಬಂದ ನೂರಾರು ರೈತರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಧರಣಿ ನಡೆಸುತ್ತಿದ್ದಾರೆ. ರಾಜ್ಯಪಾಲರ ಭೇಟಿಗೆ ಕಾದು ದಣಿದಿರುವ ರೈತರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಾಲರಿಗೆ ರೈತರ ಪತ್ರ

ರಾಜ್ಯಪಾಲರ ಭೇಟಿಗೆ ಈ ಮೊದಲೇ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದ್ದೆವು. ಆದರೆ ನಾವು ಧರಣಿ ಕುಳಿತು 3 ದಿನ ಕಳೆದರೂ, ಇನ್ನೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಕ್ಕಿಲ್ಲ. ರೈತರ ಭೇಟಿಗೆ ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದು ಲಿಖಿತವಾಗಿ ತಿಳಿಸಲು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ರಾಜ್ಯಪಾಲರಿಂದ ಲಿಖಿತ ಪತ್ರ ಬಂದರೆ, ರೈತರನ್ನು ರಾಜ್ಯಪಾಲರು ಭೇಟಿಯಾಗುವುದಿಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಾಗಲಿದೆ. ಆದ್ದರಿಂದ ರಾಜ್ಯಪಾಲರು ನಮ್ಮನ್ನು ಭೇಟಿಯಾಗುವುದಲ್ಲ ಎಂದು ಲಿಖಿತ ಪತ್ರದ ಮೂಲಕ ತಿಳಿಸಲಿ ಎಂದು ವೀರೇಶ್ ಸೊಬರದಮಠ ತಿಳಿಸಿದರು.

ABOUT THE AUTHOR

...view details