ಆನೇಕಲ್:ಬನ್ನೇರುಘಟ್ಟದ ಮೂಲಕ ಕೊರಟಗೆರೆದೊಡ್ಡಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಯುವಕನ ಕಾಲಿನ ಮೂಳೆ ಮುರಿದಿದೆ.
ಕೊರಟಗೆರೆದೊಡ್ಡಿಯ ನಿವಾಸಿ ಗಣೇಶ(30) ದಾಳಿಗೊಳಗಾದ ಯುವಕ. ಬನ್ನೇರುಘಟ್ಟ-ಆನೇಕಲ್ ಮುಖ್ಯರಸ್ತೆಯ ರಾಗಿಹಳ್ಳಿ ರಸ್ತೆಯ ಬಳಿಯಿರುವ ಮುತ್ತುರಾಯಸ್ವಾಮಿ ದೇವಾಲಯದ ಬಳಿ ಘಟನೆ ನಡೆದಿದೆ.