ಕರ್ನಾಟಕ

karnataka

ETV Bharat / state

ಡಿವೈಎಸ್​​ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ: FSL ರಿಪೋರ್ಟ್ ನಲ್ಲಿ ಆತ್ಮಹತ್ಯೆ ಎಂದು ಉಲ್ಲೇಖ

ಈಗಾಗಲೇ ಡಿವೈಎಸ್​ಪಿ ಲಕ್ಷ್ಮಿ ಕುಟುಂಬಸ್ಥರು ಆತ್ಮಹತ್ಯೆ ಕೇಸ್ ದಾಖಲಿಸಿದ ಕಾರಣ ಪೋಸ್ಟ್ ಮಾರ್ಟಮ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಸದ್ಯ ಅನುಮಾನದ ಮೇರೆಗೆ ಕೆಲ ಸ್ನೇಹಿತರನ್ನ ವಶಕ್ಕೆ ಪಡೆದಿದ್ದು, ಅವರನ್ನ ಬಿಟ್ಟು ಕಳುಹಿಸಿದ್ದಾರೆ.

By

Published : Dec 22, 2020, 4:16 PM IST

DYS P Laxmi suicide case news
ಡಿವೈಎಸ್​​ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ: FSL ರಿಪೋರ್ಟ್ ನಲ್ಲಿ ಆತ್ಮಹತ್ಯೆ ಎಂದು ಉಲ್ಲೇಖ

ಬೆಂಗಳೂರು:ಡಿವೈಎಸ್​ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಂಟಿಫಿಕ್ ಇನ್ವೆಸ್ಟಿಗೇಷನ್​​​​​ನಲ್ಲಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಎಫ್​​ಎಸ್​​ಎಲ್ ಮಾಹಿತಿ ನೀಡಿದೆ.

ಕೆಲವೊಂದು ಸೈಂಟಿಫಿಕ್ ಇನ್ವೆಸ್ಟಿಗೇಷನ್ ಎಫ್​​ಎಸ್​​ಎಲ್ ನಡೆಸಿದ್ದು, ಮೃತ ದೇಹದಲ್ಲಿ ಕೊಲೆಯಾದಾಗ ಇರುವ ಯಾವುದೇ ಕುರುಹು ಇಲ್ಲ. ಹೀಗಾಗಿ ಇದು ಆತ್ಮಹತ್ಯೆ ಎಂದು FSL ತಂಡ ಪೊಲೀಸರಿಗೆ ರಿಪೋರ್ಟ್ ನೀಡಿದೆ.

ಮತ್ತೊಂದೆಡೆ ಈಗಾಗಲೇ ಡಿವೈಎಸ್​ಪಿ ಲಕ್ಷ್ಮಿ ಕುಟುಂಬಸ್ಥರು ಆತ್ಮಹತ್ಯೆ ಕೇಸ್ ದಾಖಲಿಸಿದ ಕಾರಣ ಪೋಸ್ಟ್ ಮಾರ್ಟಮ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಸದ್ಯ ಅನುಮಾನದ ಮೇರೆಗೆ ಕೆಲ ಸ್ನೇಹಿತರನ್ನ ವಶಕ್ಕೆ ಪಡೆದಿದ್ದು, ಅವರನ್ನ ಬಿಟ್ಟು ಕಳುಹಿಸಿದ್ದಾರೆ. ಯಾಕೆಂದರೆ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುವುದು ಸೂಕ್ತವಲ್ಲ.

ತುಂಬಾ ದಿನಗಳ ಕಾಲ ವಶದಲ್ಲೇ ಇಟ್ಟುಕೊಳ್ಳಲು ಆಗುವುದಿಲ್ಲ. ಅಲ್ಲದೇ, ವಶದಲ್ಲಿ ಇಟ್ಟುಕೊಂಡರೆ ನ್ಯಾಯಾಲಯಕ್ಕೆ ತೋರಿಸಬೇಕು. ಹೀಗಾಗಿ ಮರಣೋತ್ತರ ರಿಪೋರ್ಟ್ ಬಂದ ನಂತರದಲ್ಲಿ ತನಿಖೆ ನಡೆಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

ಸಿಐಡಿ ಡಿವೈಎಸ್​​ಪಿ ಯಾಗಿರುವ ಲಕ್ಷ್ಮಿ ಕಳೆದ ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಹೀಗಾಗಿ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲವೊಬ್ಬರ ‌ಮೇಲೆ ಅನುಮಾನದ ಮೇರೆಗೆ ತನಿಖೆ ನಡೆಸಲಾಗಿತ್ತು.

ABOUT THE AUTHOR

...view details