ಕರ್ನಾಟಕ

karnataka

ETV Bharat / state

ಡ್ಯಾನ್ಸ್​ ಮಾಡಲು ಎನರ್ಜಿಗಾಗಿ ಡ್ರಗ್ಸ್​ ಸೇವಿಸುತ್ತಿದ್ದ ಕಿಶೋರ್​ ಶೆಟ್ಟಿ, ಸಪ್ಲೈ ಮಾಡ್ತಿದ್ನಂತೆ ಪ್ರತೀಕ್​ ಶೆಟ್ಟಿ! - ಕಿಶೋರ್ ಶೆಟ್ಟಿ

ಕಿಶೋರ್ ಶೆಟ್ಟಿ ಹಿಂದಿಯ "ಎಬಿಸಿಡಿ" ಚಿತ್ರದಲ್ಲಿ ಡ್ಯಾನ್ಸರ್ ಆಗಿ ನಟಿಸಿದ್ದು, ಡ್ಯಾನ್ಸ್​ ವೇಳೆ ಎನರ್ಜಿಗಾಗಿ ಡ್ರಗ್ಸ್ ಬಳಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಕಿಶೋರ್ ಶೆಟ್ಟಿಗೆ ಪ್ರತೀಕ್ ಶೆಟ್ಟಿ ಡ್ರಗ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ.

Pratik Shetty and Kishore Shetty
ಪ್ರತೀಕ್ ಶೆಟ್ಟಿ ಹಾಗೂ ಕಿಶೋರ್ ಶೆಟ್ಟಿ

By

Published : Sep 19, 2020, 3:42 PM IST

ಬೆಂಗಳೂರು:ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಕಿಶೋರ್​ ಶೆಟ್ಟಿ ಹಾಗೂ ಪ್ರತೀಕ್​ ಶೆಟ್ಟಿಯನ್ನು ಇಂದು ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ನಟಿರಾಗಿಣಿಯ ಆಪ್ತನಾಗಿ ಗುರುತಿಸಿಕೊಂಡಿರುವ ಪ್ರತೀಕ್ ಶೆಟ್ಟಿಯನ್ನ ಸಿಸಿಬಿ ಪೊಲೀಸರು ಮೊದಲು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಡ್ರಗ್ಸ್​ ಜಾಲದಲ್ಲಿ ಮಂಗಳೂರಿನ ಹೆಸರಾಂತ ಡ್ಯಾನ್ಸರ್​ ಆಗಿರುವ ಕಿಶೋರ್​​ ಕೂಡ ಇರುವುದಾಗಿ ಮಾಹಿತಿ ನೀಡಿದ್ದ ಹಿನ್ನಲೆ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಿಶೋರ್ ಶೆಟ್ಟಿ ಹಿಂದಿಯ "ಎಬಿಸಿಡಿ" ಚಿತ್ರದಲ್ಲಿ ಡ್ಯಾನ್ಸರ್ ಆಗಿ ನಟಿಸಿದ್ದು, ಡ್ಯಾನ್ಸ್​ ವೇಳೆ ಎನರ್ಜಿಗಾಗಿ ಡ್ರಗ್ಸ್ ಬಳಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಕಿಶೋರ್ ಶೆಟ್ಟಿಗೆ ಪ್ರತೀಕ್ ಶೆಟ್ಟಿ ಡ್ರಗ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬೆಂಗಳೂರು ಸಿಸಿಬಿ ಪೊಲೀಸರು, ಮಂಗಳೂರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿ ಸದ್ಯ ಅವರಿಬ್ಬರನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಬಂಧಿಸಿರುವ ಕಿಶೋರ್​ನನ್ನು ಬೆಂಗಳೂರು ಸಿಸಿಬಿ ಕಚೇರಿಗೆ ಕರೆತರುವ ಸಾಧ್ಯತೆ ಇದೆ.

ಪ್ರತೀಕ್ ಶೆಟ್ಟಿ ಮಂಗಳೂರಿನಲ್ಲಿ ದೊಡ್ಡ ಗ್ಯಾಂಗನ್ನೇ ಹೊಂದಿದ್ದು, ನಿರೂಪಕರು, ಸೀರಿಯಲ್ ನಟಿಯರು, ಡ್ಯಾನ್ಸರ್​ಗಳು, ಮಾಡೆಲ್​ಗಳು ಆತನ ಗ್ಯಾಂಗ್​ನಲ್ಲಿ ಇದ್ದು, ಸದ್ಯ ಸಿಸಿಬಿ ಪೊಲೀಸರು ತನಖೆ ನಡೆಸಿ ಹಲವಾರು ಮಾಹಿತಿ ಕಲೆ‌ ಹಾಕಲು ಮುಂದಾಗಿದ್ದಾರೆ.

ABOUT THE AUTHOR

...view details