ಬೆಂಗಳೂರು : ಟೆಸ್ಟ್ ಡ್ರೈವ್ ಗೆ ತೆರಳಿದ್ದ ಕಾರು ನಿಯಂತ್ರಣ ಸಿಗದೆ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ನಗರದ ನೈಸ್ ರಸ್ತೆಯ ನಾಯಂಡಳ್ಳಿ ಟೋಲ್‌ಬಳಿ ನಡೆದಿದೆ.
ಟೆಸ್ಟ್ ಡ್ರೈವ್ ಗೆ ತೆರಳಿದ್ದ ಕಾರು ಪಲ್ಟಿಯಾಗಿ ಚಾಲಕ ಸಾವು - ಭೇಟಿ ನೀಡಿ
ಟೆಸ್ಟ್ ಡ್ರೈವ್ಗೆ ತೆರಳಿದ್ದ ಕಾರು ನಿಯಂತ್ರಣ ಸಿಗದೆ ಪಲ್ಟಿಯಾದ ಬೆಂಗಳೂರಿನಲ್ಲಿ ಘಟನೆ ನಡೆದಿದೆ.
ಟೆಸ್ಟ್ ಡ್ರೈವ್ ಗೆ ತೆರಳಿದ್ದ ಕಾರು ಪಲ್ಟಿಯಾಗಿ ಚಾಲಕ ಸಾವು
ಗೌತಮ್ ಎಂಬುವವರು ಕುಟುಂಬ ಸಮೇತವಾಗಿ ರೂಪೇನ್ ಅಗ್ರಹಾರದಿಂದ ನಾಯಂಡಳ್ಳಿ ಬಳಿ ಟೆಸ್ಟ್ ಡ್ರೈವ್ ಗೆ ಬಂದಾಗ ಘಟನೆ ಸಂಭವಿಸಿದೆ. ಗೌತಮ್ ಸ್ನೇಹಿತ ಸಾಗರ್ ಎಂಬುವವರು ಕಾರ್ ಚಲಾಯಿಸುತ್ತಿದ್ದರು. ಏಕಾಏಕಿ ಕಾರು ನಿಯಂತ್ರಣ ಸಿಗದೆ ಪಲ್ಟಿಯಾದ ಪರಿಣಾಮ ಚಾಲಕ ಸಾಗರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಂಪನಿ ಸಿಬ್ಬಂದಿ ಕಾರ್ ನಿಂದ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯಲ್ಲಿ ಗೌತಮ್ ಮತ್ತು ಮಡದಿ, ಮಗುವಿಗೆ ಗಂಭೀರ ಗಾಯವಾಗಿದ್ದು ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated : Mar 29, 2019, 1:54 PM IST