ಕರ್ನಾಟಕ

karnataka

ನನ್‌ ಪ್ರಕಾರ ಸಿಎಂ ಬದಲಾಣೆ ಆಗಲ್ಲ, ಹೈಕಮಾಂಡ್ ರಾಜೀನಾಮೆ ಕೊಡಿ ಎಂದಿಲ್ಲ.. ಸಂಸದ ಜಿ ಎಂ ಸಿದ್ದೇಶ್ವರ್

ಈಗಾಗಲೇ ಕಟೀಲ್ ಅವರು ನನ್ನ ಆಡಿಯೋ ಅಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ವಿರೋಧಿಗಳು ಈ ಕೆಲಸ ಮಾಡಿದ್ದಾರೆ.ನಿರಾಣಿ ಬಳಿ 500 ಸಿಡಿ ಇವೆ ಅಂತಾರೆ. ಇವೆಲ್ಲ ವಿರೋಧಿಗಳ ಕುತಂತ್ರ..

By

Published : Jul 21, 2021, 5:25 PM IST

Published : Jul 21, 2021, 5:25 PM IST

mp-g-siddheshwar
ಸಂಸದ ಜಿ. ಎಂ. ಸಿದ್ದೇಶ್ವರ

ಬೆಂಗಳೂರು :ಯಡಿಯೂರಪ್ಪ ಎರಡು ವರ್ಷ ಉತ್ತಮ ಆಡಳಿತ ಕೊಟ್ಟಿದ್ದಾರೆ. ಹೈಕಮಾಂಡ್ ಬದಲಾವಣೆ ಚಿಂತನೆ ಮಾಡಿದೆಯಾ ಎಂಬುದು ಗೊತ್ತಿಲ್ಲ. ಅವರನ್ನು ಬದಲಾವಣೆ ಮಾಡಬಾರದು ಅಂತಾ ಎಲ್ಲಾ ವರ್ಗದ ಸ್ವಾಮೀಜಿಗಳು ಹೇಳ್ತಿದ್ದಾರೆ ಎಂದು ಸಂಸದ ಜಿ ಎಂ ಸಿದ್ದೇಶ್ವರ ಹೇಳಿದರು.

ಸಿಎಂ ಬದಲಾವಣೆ ಚರ್ಚೆ ಕುರಿತಂತೆ ಸಂಸದ ಜಿ ಎಂ ಸಿದ್ದೇಶ್ವರ್ ಪ್ರತಿಕ್ರಿಯೆ..

ಕಾವೇರಿ ನಿವಾಸದ ಬಳಿ ಸಿಎಂ ಬಿಎಸ್​ವೈ ಭೇಟಿ ಮಾಡಿ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಹೈಕಮಾಂಡ್ ರಾಜೀನಾಮೆ ಕೊಡಿ ಅಂತಾ ಹೇಳಿಲ್ಲ. ಯಡಿಯೂರಪ್ಪ ಅವರನ್ನ ಉಳಿದ ಅವಧಿಗೂ ಸಿಎಂ ಆಗಿ ಮುಂದುವರೆಸಬೇಕು. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗಬೇಕು.

ಯಡಿಯೂರಪ್ಪ ಮನೆಗೆ ಕಾಂಗ್ರೆಸ್ ಪಕ್ಷದವರು ಬಂದಿದ್ದರು. ಯಡಿಯೂರಪ್ಪಗೆ 110 ಸ್ಥಾನ ಬಂದಾಗ ಯಾಕೆ ಕಾಂಗ್ರೆಸ್​ನವರು ಬರಲಿಲ್ಲ. ಅವರ ಅಧಿಕಾರವಧಿ ನಂತರ ನಾವು ಲಿಂಗಾಯತರ ಲೀಡರ್ ಆಗಬೇಕು ಎಂದು ಹೀಗೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಶಾಮನೂರು ಅವರಿಗೆ ಅಂದು 110 ಸೀಟು ಬಂದಾಗ ಕರೆದರೂ ಯಾಕೆ ಬರಲಿಲ್ಲ. ಇವತ್ತು ಲಿಂಗಾಯತ ಲೀಡರ್ ಆಗೋಕೆ ಇಂತಹ ಕುತಂತ್ರ ಮಾಡ್ತಿದ್ದಾರೆ. ವಿರೋಧಿ ಪಕ್ಷದವರು ಹೀಗೆಲ್ಲ ಮಾಡ್ತಿದ್ದಾರೆ. ಯಡಿಯೂರಪ್ಪ ಬದಲಾವಣೆ ಆಗೋದಿಲ್ಲ. ಬದಲಾವಣೆ ಮಾಡಬಾರದು. ನಾನು ಕೂಡ ಸೋಮವಾರ ದೆಹಲಿಗೆ ಹೋಗ್ತೀನಿ. ಹೈಕಮಾಂಡ್ ಗಮನಕ್ಕೆ ಎಲ್ಲಾ ವಿಷಯ ತರುತ್ತೇನೆ ಎಂದು ತಿಳಿಸಿದರು.

ಕಟೀಲ್ ಆಡಿಯೋ ಆರೋಪ :ಈಗಾಗಲೇ ಕಟೀಲ್ ಅವರು ನನ್ನ ಆಡಿಯೋ ಅಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ. ವಿರೋಧಿಗಳು ಈ ಕೆಲಸ ಮಾಡಿದ್ದಾರೆ. ನಿರಾಣಿ ಬಳಿ 500 ಸಿಡಿ ಇವೆ ಅಂತಾರೆ. ಇವೆಲ್ಲ ವಿರೋಧಿಗಳ ಕುತಂತ್ರ. ವಿರೋಧ ಪಕ್ಷದಲ್ಲೂ ಕೆಲವರು ಇದ್ದಾರೆ. ನಮ್ಮ ಪಕ್ಷದಲ್ಲೂ ಕೆಲವರು ಇರಬಹುದು. ನನ್ನ ಪ್ರಕಾರ ಯಡಿಯೂರಪ್ಪ ಬದಲಾವಣೆ ಆಗೋದಿಲ್ಲ ಎಂದರು.

ಓದಿ:ಎಲ್ಲರೂ ಬಾಯಿ ಮುಚ್ಚಿಕೊಂಡಿದ್ರೆ ರಾಜ್ಯ ರಾಜಕೀಯ ಗೊಂದಲ ಸರಿಹೋಗುತ್ತದೆ: ಸಚಿವ ಈಶ್ವರಪ್ಪ

ABOUT THE AUTHOR

...view details