ಕರ್ನಾಟಕ

karnataka

ಏ.14ರಂದು ಎಲ್ಲೇ ಇದ್ರೂ ಸಂವಿಧಾನ ಮುನ್ನುಡಿ ಓದಿ ಗೌರವಿಸಿ... ಕಾರ್ಯಕರ್ತರು, ನಾಗರಿಕರಿಗೆ ಡಿಕೆಶಿ ಕರೆ

By

Published : Apr 10, 2020, 7:57 AM IST

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ಸರಳವಾಗಿ ಅಂಬೇಡ್ಕರ್​ ಜಯಂತಿಯನ್ನು ಆಚರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಂವಿಧಾನದ ಮುನ್ನುಡಿಯನ್ನುಎಲ್ಲೇ ಇದ್ದರೂ ಓದುವಂತೆ ಕರೆ ನೀಡಿದ್ದಾರೆ.

DKS appeals to simply celebrate Ambedkar Jayanti
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ರಾಷ್ಟ್ರ ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಗಣಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಗರಿಕರಿಗೆ ಮನವಿ ಮಾಸಡುತ್ತೇನೆ.

ಈ ಸಂದರ್ಭ ನಾನು ಮಾಡಿಕೊಳ್ಳುವ ಏಕೈಕ ವಿನಂತಿಯೇನೆಂದರೆ ನಮ್ಮ ಸಂವಿಧಾನದ ಮುನ್ನುಡಿಯನ್ನು ಅಂಬೇಡ್ಕರ್ ಅವರ ಹುಟ್ಟು ಹಬ್ಬದ ದಿನವಾದ ಏಪ್ರಿಲ್ 14 ರಂದು ಬೆಳಗ್ಗೆ 10 ಗಂಟೆಗೆ ಓದಲು ಆಹ್ವಾನಿಸುತ್ತಿದ್ದೇನೆ.

ಅಂದು ನೀವು ಮನೆಯಲ್ಲಿ ಅಥವಾ ಕೆಲಸದಲ್ಲಿ ಎಲ್ಲಿಯೇ ಇದ್ದರೂ ಸರಿ, ನೀವು ಸಂವಿಧಾನದ ಮುನ್ನುಡಿಯನ್ನು ಓದಬಹುದು. ದಯವಿಟ್ಟು ಬಾಬಾಸಾಹೇಬನ ಗೌರವಾರ್ಥವಾಗಿ ಓದುವಾಗ ನಿಂತು ನಮ್ಮ ಸಂವಿಧಾನದ ಮಾರ್ಗದರ್ಶಿ ಸೂತ್ರಗಳಲ್ಲಿ ನಮ್ಮಲ್ಲಿರುವ ನಂಬಿಕೆಯನ್ನು ಪುನರುಚ್ಚರಿಸಿ. ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ. ದಯವಿಟ್ಟು ಸಂದೇಶವನ್ನು ಇತರರಿಗೂ ತಲುಪಿಸಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details