ಕರ್ನಾಟಕ

karnataka

ETV Bharat / state

ಇಂದು ಡಿಕೆಶಿ ಪುತ್ರಿ ಐಶ್ವರ್ಯ - ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರ ಅಮರ್ತ್ಯ ನಿಶ್ಚಿತಾರ್ಥ

ಡಿಕೆ ಶಿವಕುಮಾರ್ ಪುತ್ರಿ ಹಾಗೂ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಪುತ್ರನ ವಿವಾಹ ದಿನಾಂಕ ಬಹುತೇಕ ನಿಗದಿಯಾಗಿದೆ. 2021ರ ಫೆಬ್ರವರಿಯಲ್ಲಿ ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಹಸೆಮಣೆ ಏರಲಿದ್ದು, ಇಂದು ಇವರ ನಿಶ್ಚಿತಾರ್ಥ ನೆರವೇರಲಿದೆ.

DK Shivakumar's Daughter Engagement
ವಿವಾಹ ನಿಶ್ಚಿತಾರ್ಥದಲ್ಲಿ ಐಶ್ವರ್ಯ ಮತ್ತು ಅಮಾರ್ತ್ಯ ಹೆಗ್ಡೆ

By

Published : Nov 18, 2020, 11:18 PM IST

Updated : Nov 19, 2020, 9:32 AM IST

ಬೆಂಗಳೂರು: ಕಳೆದ ಜೂನ್ ತಿಂಗಳಲ್ಲಿ ನಿಶ್ಚಯವಾಗಿದ್ದ ಡಿಕೆಶಿ ಪುತ್ರಿ ಹಾಗೂ ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಪುತ್ರನ ವಿವಾಹ ನಿಶ್ಚಿತಾರ್ಥ ಇಂದು ನಗರದ ಹೊರವಲಯದಲ್ಲಿ ನಡೆಯಲಿದೆ. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಖಾಸಗಿ ತಾರಾ ಹೋಟೆಲ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ವಿವಾಹ ನಿಶ್ಚಿತಾರ್ಥ ನೆರವೇರಲಿದೆ.

ಅಮರ್ತ್ಯ, ಐಶ್ಚರ್ಯಗೆ ಇಂದು ನಿಶ್ಚಿತಾರ್ಥ

ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರ ಮೊಮ್ಮಗ ಕೂಡ ಆಗಿರುವ ಅಮರ್ತ್ಯ ಹೆಗ್ಡೆ ತಮ್ಮ ತಾಯಿ ಮಾಳವಿಕ ಅವರೊಂದಿಗೆ ಸೇರಿಕೊಂಡು ಕಾಫಿಡೇ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. 26 ವರ್ಷದ ಇವರು ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದಾರೆ. ಎಂಜಿನಿಯರಿಂಗ್‌ ಪದವೀಧರೆಯಾದ 22 ವರ್ಷದ ಐಶ್ವರ್ಯ ಅವರು ತಂದೆ ಡಿ.ಕೆ. ಶಿವಕುಮಾರ್‌ ಸ್ಥಾಪಿಸಿರುವ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಅಮರ್ತ್ಯ, ಐಶ್ಚರ್ಯಗೆ ಇಂದು ನಿಶ್ಚಿತಾರ್ಥ

ಸಿದ್ದಾರ್ಥ್ ಹೆಗ್ಡೆ ಜೀವಂತವಾಗಿದ್ದ ಸಂದರ್ಭದಲ್ಲಿ ವಿವಾಹ ಸಂಬಂಧ ಬೆಸೆಯಲು ಎರಡು ಕುಟುಂಬಗಳು ತೀರ್ಮಾನಿಸಿದ್ದವು. ಆದರೆ, ಸಿದ್ಧಾರ್ಥ ಅಕಾಲಿನ ನಿಧನದ ಹಿನ್ನೆಲೆ ವಿವಾಹ ಸಮಾರಂಭ ಹಮ್ಮಿಕೊಳ್ಳುವುದು ವಿಳಂಬವಾಗಿತ್ತು. ಕಳೆದ ಜೂನ್ 12 ರಂದು ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಆಗಮಿಸಿದ್ದ ಎಸ್​ಎಂ ಕೃಷ್ಣ ಕುಟುಂಬದ ಸದಸ್ಯರು, ತಾಂಬೂಲ ಬದಲಾಯಿಸಿಕೊಂಡು ಮದುವೆಯನ್ನು ನಿಶ್ಚಯ ಮಾಡಿದ್ದರು. 2021ರ ಫೆಬ್ರವರಿಯಲ್ಲಿ ಇವರಿಬ್ಬರ ವಿವಾಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಅಮರ್ತ್ಯ, ಐಶ್ಚರ್ಯಗೆ ಇಂದು ನಿಶ್ಚಿತಾರ್ಥ

ಡಿಕೆ ಶಿವಕುಮಾರ್ ಹಾಗೂ ಸಿದ್ಧಾರ್ಥ್ ಹೆಗಡೆ ಆತ್ಮೀಯ ಸ್ನೇಹಿತರಾಗಿದ್ದರು. ಅಲ್ಲದೆ ಎಸ್​ಎಂ ಕೃಷ್ಣ ಅವರು ಡಿಕೆಶಿಗೆ ರಾಜಕೀಯ ಗುರುವಾಗಿದ್ದಾರೆ. ಎರಡು ಕುಟುಂಬಗಳ ನಡುವೆ ಮೊದಲಿನಿಂದಲೂ ಸಾಕಷ್ಟು ಆತ್ಮೀಯತೆ ಇತ್ತು. ಸಿದ್ಧಾರ್ಥ್ ನಿಧನದ ಸಂದರ್ಭದಲ್ಲಿಯೂ ಡಿಕೆಶಿ ನಿರಂತರವಾಗಿ ಎಸ್ಎಂ ಕೃಷ್ಣ ಕುಟುಂಬದ ಜೊತೆಗಿದ್ದು ಧೈರ್ಯ ತುಂಬಿದ್ದರು. ಸ್ನೇಹವನ್ನ ಸಂಬಂಧವಾಗಿಸುವ ಮಾತುಕತೆ ಮಾತ್ರ ನಡೆದಿತ್ತು. ಅದು ಈಗ ಕೃತಿರೂಪ ಪಡೆಯುತ್ತಿದೆ.

ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿರುವ ಹಿನ್ನೆಲೆ ಇಂದು ಅತ್ಯಂತ ಕಡಿಮೆ ಸಂಖ್ಯೆಯ ಸಂಬಂಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 2021ರ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ವಿವಾಹ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿವೆ. ಯಾವುದೇ ಕಾರಣಕ್ಕೂ ಇಂದು ಕುಟುಂಬ ಸದಸ್ಯರು ಹೊರತುಪಡಿಸಿ ಬೇರೆಯವರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಮಾಧ್ಯಮಗಳನ್ನೂ ವಿವಾಹ ನಿಶ್ಚಿತಾರ್ಥ ಸಮಾರಂಭದಿಂದ ದೂರ ಇಡಲಾಗಿದೆ.

Last Updated : Nov 19, 2020, 9:32 AM IST

ABOUT THE AUTHOR

...view details