ಕರ್ನಾಟಕ

karnataka

ETV Bharat / state

ಲೋಕೋಪಯೋಗಿ ಇಲಾಖೆಯಿಂದ ಎರಡು ಇಲಾಖೆ ‌ಬೇರ್ಪಡಿಸುವ ಬಗ್ಗೆ ಚರ್ಚೆ

ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆ ಮತ್ತು ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳನ್ನು ಬೇರ್ಪಡಿಸುವ ಕುರಿತು ಮೂವರು ಸಚಿವರು ಸುದೀರ್ಘ ಚರ್ಚೆ ನಡೆಸಿದರು. ಇಂಜಿನಿಯರ್​ಗಳ ಬಡ್ತಿ ಸಮಸ್ಯೆ ವಿಚಾರವಾಗಿಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ.

By

Published : Jun 22, 2020, 1:41 PM IST

ಲೋಕೊಪಯೋಗಿ ಇಲಾಖೆಯಿಂದ ಎರಡು ಇಲಾಖೆ ‌ಬೇರ್ಪಡಿಸುವ ಬಗ್ಗೆ ಚರ್ಚೆ
ಲೋಕೊಪಯೋಗಿ ಇಲಾಖೆಯಿಂದ ಎರಡು ಇಲಾಖೆ ‌ಬೇರ್ಪಡಿಸುವ ಬಗ್ಗೆ ಚರ್ಚೆ

ಬೆಂಗಳೂರು: ಲೋಕೊಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳನ್ನು ಬೇರ್ಪಡಿಸುವ ಕುರಿತು ಹಾಗೂ ಸದರಿ ಪ್ರಕ್ರಿಯೆ ಕುರಿತು ಮತ್ತು ಇತರೆ ಸೇವಾ ವಿಷಯಗಳ ಬಗ್ಗೆ ಇಂದು ಸಭೆ ನಡೆದಿದೆ.

ಡಿಸಿಎಂ ಗೋವಿಂದ್ ಎಂ. ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆ

ವಿಧಾನಸೌಧದಲ್ಲಿ ಇಂದು ಡಿಸಿಎಂ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ್ ಎಂ. ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಓದಿ:ಆಗಸ್ಟ್ ವೇಳೆಗೆ 25,000 ಗಡಿ ದಾಟಲಿದೆಯಂತೆ ಕೊರೊನಾ ಸೋಂಕಿತರ ಸಂಖ್ಯೆ!

ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳನ್ನು ಬೇರ್ಪಡಿಸುವ ಕುರಿತು ಮೂವರು ಸಚಿವರು ಸುದೀರ್ಘ ಚರ್ಚೆ ನಡೆಸಿದರು. ಇಂಜಿನಿಯರ್ ಗಳ ಬಡ್ತಿ ಸಮಸ್ಯೆ ವಿಚಾರವಾಗಿಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಒಂದು ಬಾರಿ ಇಲಾಖೆ ವಿಭಜಿಸುವವರೆಗೂ ಬಡ್ತಿ ಪ್ರಕ್ರಿಯೆ ತಡೆ ಹಿಡಿಯುವುದು ಮತ್ತು ಗೊಂದಲಗಳನ್ನು ಪರಿಹರಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details