ಬೆಂಗಳೂರು: ಹುಬ್ಬಳ್ಳಿ ಹಿಂಸಾಚಾರ ಸಂಬಂಧ ಪ್ರಮುಖ ಆರೋಪಿಗಳನ್ನು ಕಾಟನ್‌ಪೇಟೆ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ನಟೋರಿಯಸ್ ರೌಡಿಶೀಟರ್ ಅಬ್ದುಲ್ ಮಲಿಕ್ ಬೇಪಾರಿ ಹಾಗೂ ತುಫೇಲ್ ಮುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ.
ಕಾಟನ್‌ಪೇಟೆಯಲ್ಲಿ ಅಡಗಿದ್ದ ಹುಬ್ಬಳ್ಳಿ ಗಲಭೆಕೋರರು ಪೊಲೀಸ್ ವಶಕ್ಕೆ - ಹುಬ್ಬಳ್ಳಿ ಗಲಭೆಯ ಪ್ರಮುಖ ಆರೋಪಿಗಳ ಬಂಧನ
ನಿನ್ನೆಯಷ್ಟೇ ಆರೋಪಿಗಳು ಕಾಟನ್‌ಪೇಟೆಯ ಗೌಸಿಯಾ ಸರಾಯ ಲಾಡ್ಜ್‌ನಲ್ಲಿ ಸ್ಟೇ ಆಗಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆದಿದ್ದಾರೆ.
ಕಾಟನ್ ಪೇಟೆಯಲ್ಲಿ ಅಡಗಿದ್ದ ಹುಬ್ಬಳ್ಳಿ ಪ್ರಮುಖ ಗಲಭೆಕೋರರು ಪೊಲೀಸ್ ವಶಕ್ಕೆ
Last Updated : Apr 21, 2022, 8:20 PM IST