ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡಿ.ಕೆ.ಶಿವಕುಮಾರ್ಗೆ ತೀವ್ರ ಜ್ವರ: ಅಪೋಲೋ ಆಸ್ಪತ್ರೆಗೆ ದಾಖಲು
ಕಳೆದ ವಾರವಷ್ಟೇ ಕೊರೊನಾದಿಂದ ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ನಿನ್ನೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಇಂದು ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀವ್ರ ಜ್ವರ ಹಿನ್ನೆಲೆ ಅಪೋಲೋ ಆಸ್ಪತ್ರೆಗೆ ದಾಖಲಾದ ಡಿ. ಕೆ. ಶಿವಕುಮಾರ್
ಕಳೆದ ವಾರವಷ್ಟೇ ಕೊರೊನಾದಿಂದ ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ನಿನ್ನೆ ಮತ್ತೆ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಸುಗುಣ ಆಸ್ಪತ್ರೆಗೆ ದಾಖಲಾಗಿ 7 ದಿನ ಚಿಕಿತ್ಸೆ ಪಡೆದು ಕೊರೊನಾ ನೆಗೆಟಿವ್ ಒಂದು ಹಿನ್ನೆಲೆ ಮನೆಗೆ ವಾಪಸಾಗಿದ್ದರು. ಆದರೆ, ಕೋವಿಡ್ ಚೇತರಿಕೆ ನಂತರದ ವಿಶ್ರಾಂತಿ ಸಂದರ್ಭದಲ್ಲಿ ಅವರಿಗೆ ಜ್ವರ ಕಾಣಿಸಿದ್ದು, ಈಗ ಮತ್ತೊಮ್ಮೆ ಆಸ್ಪತ್ರೆ ಸೇರುವಂತಾಗಿದೆ.