ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯರಂಥ ಮಜಾವಾದಿಗೆ ಆರ್ ಎಸ್ಎಸ್ ಅರ್ಥ ಆಗಲು ಸಾಧ್ಯವಿಲ್ಲ: ಸಿ.ಟಿ.ರವಿ - ಈಟಿವಿ ಭಾರತ ಕನ್ನಡ ನ್ಯೂಸ್

ಆರ್​ಎಸ್​ಎಸ್ ಒಂದು ರಾಷ್ಟ್ರ ಭಕ್ತಿಯ ಸಂಘಟನೆ. ಆರ್​ಎಸ್​ಎಸ್ ಗೆ ಬರುವವರು ಮಜಾವಾದಿಗಳಾಗಿರುವುದಿಲ್ಲ.ಸಿದ್ದರಾಮಯ್ಯರಂಥ ಮಜಾವಾದಿಗೆ ಆರ್ ಎಸ್ಎಸ್ ಅರ್ಥ ಆಗಲು ಸಾಧ್ಯವಿಲ್ಲ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ct-ravi-statement-against-siddaramaiah
ಸಿದ್ದರಾಮಯ್ಯರಂಥ ಮಜಾವಾದಿಗೆ ಆರ್ ಎಸ್ಎಸ್ ಅರ್ಥ ಆಗಲು ಸಾಧ್ಯವಿಲ್ಲ: ಸಿ.ಟಿ.ರವಿ

By

Published : Aug 10, 2022, 7:06 AM IST

ಬೆಂಗಳೂರು : ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಸಿದ್ದರಾಮಯ್ಯರಂಥ ಮಜಾವಾದಿಗೆ ಆರ್‌ಎಸ್ಎಸ್ ಅರ್ಥ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ‌ನಡೆಸಿದ್ದಾರೆ.

ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರ ಸರ್ಕಲ್ ಬಳಿ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ 75ನೇ ವರ್ಷಾಚರಣೆಯನ್ನು ಇತ್ತೀಚಿಗೆ ಮಾಡಿಕೊಂಡರು. ಅವರಿಗೆ ನಮ್ಮ ದೇಶದ ಧ್ವಜದಲ್ಲಿ ಯಾವ ಬಣ್ಣ ಇದೆ ಎಂಬುದೇ ಗೊತ್ತಿಲ್ಲ. ಇಂಥ ಮರೆವು ದುರದೃಷ್ಟಕರ. ಅವರು ನಕ್ಸಲ್ ಬೆಂಬಲಿಗರು. ಅವರು ಅಧಿಕಾರದಲ್ಲಿದ್ದಾಗ ನಕ್ಸಲರಿಗೆ ಬೆಂಬಲ ಕೊಡುತ್ತಿದ್ದರೆಂದು ನಾವೂ ಹೇಳಬಹುದು. ನಕ್ಸಲರು ಸಂವಿಧಾನ ಒಪ್ಪುವರೇ? ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆಯೇ? ಎಂದು ಪ್ರಶ್ನಿಸಿದರು.

ಅಪ್ಪಿತಪ್ಪಿ ಅಧಿಕಾರ ಸಿಕ್ಕಿದ್ದರಿಂದ ಪ್ರಜಾಪ್ರಭುತ್ವವಾದಿಯಾಗಿ ಸಿದ್ದರಾಮಯ್ಯ ಉಳಿದುಕೊಂಡಿದ್ದಾರೆ. ರಾಷ್ಟ್ರಧ್ವಜದಲ್ಲಿ ಬಣ್ಣ ಏನಿದೆ ಎಂದು ಗೊತ್ತಿರದಷ್ಟು ಅವರು ಅಮಾಯಕರೇ?. ಮರೆತು ಹೋಗಿದೆಯೇ?. ದೇಶದ ರಾಷ್ಟ್ರಧ್ವಜದ ಬಣ್ಣದ ವಿಚಾರದಲ್ಲಿ ತಪ್ಪು ಮಾಹಿತಿ ಕೊಟ್ಟಿರುವ ಸಿದ್ದರಾಮಯ್ಯ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯರಂಥ ಮಜಾವಾದಿಗೆ ಆರ್ ಎಸ್ಎಸ್ ಅರ್ಥ ಆಗಲು ಸಾಧ್ಯವಿಲ್ಲ :ಆರ್​ಎಸ್​ಎಸ್ ರಾಷ್ಟ್ರಭಕ್ತಿಯ ಒಂದು ಸಂಘಟನೆ. ಸಿದ್ದರಾಮಯ್ಯರಂಥ ಮಜಾವಾದಿಗೆ ಆರ್​ಎಸ್​ಎಸ್ ಅರ್ಥ ಆಗಲು ಸಾಧ್ಯವೇ ಇಲ್ಲ. ಆರ್​ಎಸ್​ಎಸ್​ಗೆ ಬರುವವರು ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡುತ್ತಾರೆ. ಮಜಾವಾದಿ ಆಗಿರುವುದಿಲ್ಲ. ಮೇಲ್ವರ್ಗ, ಕೆಳವರ್ಗ ಎಂದು ಒಡೆದು ಆಳುವ ನೀತಿಯನ್ನು ಬ್ರಿಟೀಷರು ಕಲಿಸಿದ್ದು, ಅದನ್ನು ಸಿದ್ದರಾಮಯ್ಯ ಉಳಿಸಿಕೊಳ್ಳಲು ಬಯಸಿದ್ದಾರಾ? ಅಥವಾ ಒಡೆದು ಆಳುವುದು ಕಾಂಗ್ರೆಸ್ ನೀತಿಯೇ ಎಂದು ಪ್ರಶ್ನಿಸಿದರು.

ಭಾಷೆ ಹೆಸರಿನಲ್ಲಿ ಜನರನ್ನು ಒಡೆದಿದ್ದರು. ಈಗ ಜಾತಿ ಹೆಸರಿನಲ್ಲಿ ಒಡೆಯುವ ಸಂಚು ಇವರದೇ?. ಆರ್​ಎಸ್​ಎಸ್ ಜಾತಿಯ ವಿಚಾರದಲ್ಲಿ ನಂಬಿಕೆ ಇಟ್ಟಿರುವ ಸಂಘಟನೆ ಅಲ್ಲ. ರಾಷ್ಟ್ರಭಕ್ತಿಯ ಮೇಲೆ ನಂಬಿಕೆ ಹೊಂದಿದೆ. ಸೇವೆಯನ್ನೇ ವೃತವನ್ನಾಗಿ ಸ್ವೀಕರಿಸಿದ ಸಂಘಟನೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಸಣ್ಣ ಸಮುದಾಯಕ್ಕೆ ಸೇರಿದವರು.

ಅವರ ಯೋಗ್ಯತೆ ಮತ್ತು ಸಾಮರ್ಥ್ಯವನ್ನು ಪರಿಗಣಿಸಿಯೇ ದೇಶದ ಪ್ರಧಾನಿಯಾಗಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಲಕ್ಷಾಂತರ ಜನ ಕಾರ್ಯಕರ್ತರು ತಮ್ಮೆಲ್ಲ ಸಾಮರ್ಥ್ಯವನ್ನು ಧಾರೆ ಎರೆದರು. ಇದು ಮಜಾವಾದಿಗಳಿಗೆ ಅರ್ಥವಾಗಲು ಸಾಧ್ಯವಿಲ್ಲ. ಇವೆಲ್ಲ ಓಲೈಕೆ ರಾಜಕಾರಣ ಮಾಡುವವರಿಗೆ, ಭಯೋತ್ಪಾದಕರನ್ನು ಬೆಂಬಲಿಸುವ ಮತೀಯವಾದಿಗಳಿಗೆ ಅರ್ಥ ಆಗಲಾರದು ಎಂದು ಕಿಡಿ ಕಾರಿದರು.

ಇದನ್ನೂ ಓದಿ :ಈದ್ಗಾ ಮೈದಾನದ ಗೋಡೆ ಕೆಡವುದಾಗಿ ಹೇಳಿದ್ದ ಹಿಂದೂ ಕಾರ್ಯಕರ್ತನ ವಿರುದ್ಧ ಎಫ್ಐಆರ್

ABOUT THE AUTHOR

...view details