ಕರ್ನಾಟಕ

karnataka

By

Published : Jun 12, 2019, 10:28 AM IST

ETV Bharat / state

ವಾಣಿಜ್ಯ ಬ್ಯಾಂಕ್​​​ಗಳ ರೈತರ ಬೆಳೆ ಸಾಲ ಮನ್ನಾ: ಒಂದೇ ಕಂತಲ್ಲಿ ಬಾಕಿ ಮೊತ್ತ ಬಿಡುಗಡೆಗೆ ಸಿಎಂ ಆದೇಶ

ರೈತರು ವಾಣಿಜ್ಯ ಬ್ಯಾಂಕ್​​ಗಳಲ್ಲಿ ಪಡೆದ ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಬ್ಯಾಂಕ್​​ಗಳಿಗೆ ಬಿಡುಗಡೆಯಾದ ಹಣವನ್ನು ಕಡಿತಗೊಳಿಸಿ ಉಳಿದ ಬಾಕಿ ಮೊತ್ತವನ್ನು ಏಕ ಕಂತಿನಲ್ಲಿ ಪಾವತಿಸಲು ಅನುಮೋದನೆ ನೀಡಿ ಸರ್ಕಾರ ಆದೇಶ ಜಾರಿಮಾಡಿದೆ.

ಸಿಎಂ ಆದೇಶ

ಬೆಂಗಳೂರು:ವಾಣಿಜ್ಯ ಬ್ಯಾಂಕ್​​​ಗಳಿಂದ ರೈತರು ಪಡೆದ ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಅರ್ಹತೆ ಹೊಂದಿರುವ ಓವರ್ ಡ್ಯೂ ಸಾಲ, ಮರು ಸಾಲ ಮತ್ತು ಪ್ರೋತ್ಸಾಹ ಧನಕ್ಕೆ ಅರ್ಹತೆ ಹೊಂದಿರುವ ಸಾಲಗಳ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ಎಂದು ಸಿಎಂ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ವಾಣಿಜ್ಯ ಬ್ಯಾಂಕ್​​ಗಳಿಗೆ ಬಿಡುಗಡೆಯಾದ ಹಣವನ್ನು ಕಡಿತಗೊಳಿಸಿ ಉಳಿದ ಬಾಕಿ ಮೊತ್ತವನ್ನು ಏಕ ಕಂತಿನಲ್ಲಿ ಪಾವತಿಸಲು ಅನುಮೋದನೆ ನೀಡಿ ಸರ್ಕಾರ ಆದೇಶ ಜಾರಿಮಾಡಿದೆ. ರಿಸ್ಟ್ರಕ್ಚರ್ಡ್ ಸಾಲಗಳ ಸಾಲ ಮನ್ನಾದಡಿ ಅರ್ಹತೆ ಹೊಂದಿದ ರೈತರ 2,812 ಕೋಟಿ, ಓವರ್ ಡ್ಯೂ ಸಾಲದಡಿ 3,057 ಕೋಟಿ, ಪ್ರೋತ್ಸಾಹ ಧನ ಸಾಲ ಮನ್ನಾ ಯೋಜನೆಯಡಿ 720 ಕೋಟಿ ಹಣದಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ಹಣ ಕಡಿತಗೊಳಿಸಿ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.

ಸಿಎಂ ಆದೇಶ ಪತ್ರ

ಎನ್​ಪಿಎ ಸಾಲಗಳು ಮತ್ತು ಜನವರಿ 2018 ರಿಂದ ರೈತರ ಸಾಲದ ಮೇಲಿನ ಬಡ್ಡಿ ಪಾವತಿಸುವ ಬಗ್ಗೆ ಪ್ರತ್ಯೇಕ ನಿರ್ಧಾರ ತಗೆದುಕೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಬಾಕಿಹಣವನ್ನು ಭೂಮಾಪನ ಕಂದಾಯ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರ ಖಾತೆಯಲ್ಲಿರುವ ಹಣ ಬಳಸಿಕೊಳ್ಳಲು ಸೂಚಿಸಲಾಗಿದ್ದು, ಹಣದ ಕೊರತೆ ಉಂಟಾದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ.

For All Latest Updates

TAGGED:

ABOUT THE AUTHOR

...view details