ಕರ್ನಾಟಕ

karnataka

ರೇಖಾ ಕೆಮಿಕಲ್​ ಫ್ಯಾಕ್ಟರಿ ವಿರುದ್ಧ ಕ್ರಿಮಿನಲ್ ಕೇಸ್​​: ಬಿಬಿಎಂಪಿ ಕಮಿಷನರ್

By

Published : Nov 11, 2020, 2:28 PM IST

Updated : Nov 11, 2020, 3:18 PM IST

ಬೆಂಗಳೂರಿನ ಹೊಸಗುಡ್ಡದಹಳ್ಳಿ ಸಮೀಪದ ಕೆಮಿಕಲ್​​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಢ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಈ ಫ್ಯಾಕ್ಟರಿ ವಿರುದ್ಧ ಕ್ರಿಮಿನಲ್​ ಕೇಸ್​ ಹಾಕಿರುವುದಾಗಿ ಹೇಳಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

BBMP Commissioner
ಬಿಬಿಎಂಪಿ ಕಮಿಷನರ್

ಬೆಂಗಳೂರು: ಹೊಸಗುಡ್ಡದಹಳ್ಳಿಯಲ್ಲಿ ಇರುವ ಕೆಮಿಕಲ್ ಫ್ಯಾಕ್ಟರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಮೊದಲು ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಹಾನಿಗೊಳಗಾಗಿರುವ ಮನೆ ಆಸ್ತಿಪಾಸ್ತಿ ಸೇರಿದಂತೆ ಬೆಸ್ಕಾಂಗೆ ಆಗಿರುವ ನಷ್ಟವನ್ನು ಪರಿಶೀಲಿಸಿದ್ದಾರೆ. ಇದೀಗ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೂಡ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಆಯುಕ್ತರು

ಪರಿಶೀಲನೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ರೇಖಾ ಕೆಮಿಕಲ್ ಇಂಡಸ್ಟ್ರಿಗೆ ಆನೇಕಲ್, ಕುಂಬಳಗೋಡು ಬಳಿ ಫ್ಯಾಕ್ಟರಿ ನಡೆಸಲು ಲೈಸೆನ್ಸ್ ಕೊಟ್ಟಿರುವುದಾಗಿದೆ. ಆದರೆ ಇಲ್ಲಿ ಅಕ್ರಮವಾಗಿ ಕೆಮಿಕಲ್ ಸ್ಟೋರೇಜ್ ಮಾಡಿದ್ದಾರೆ. ಇಂತಹ ಸ್ಟೋರೇಜ್​​ಗಳಿಗೆ ಬಿಬಿಎಂಪಿ ಕಡೆಯಿಂದಲೂ ಸಹ ಯಾವ ಅನುಮತಿ ನೀಡಿಲ್ಲ. ಸದ್ಯ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದೇವೆ. ಹಾಗೆಯೇ ಜಂಟಿ ಸಮೀಕ್ಷೆ ಮಾಡಲು ಹೇಳಿದ್ದೇವೆ. ಮಾತ್ರವಲ್ಲದೆ, ಬೆಸ್ಕಾಂ ಕಡೆಯಿಂದಲೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಳೆದ 20 ವರ್ಷದಿಂದ ಅಕ್ರಮ ನಡೆದರೂ ಸಹ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇಲ್ಲಿ ಬಿಬಿಎಂಪಿ ಅಧಿಕಾರಿಗಳ ವೈಫಲ್ಯವು ಇದೆ. ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ಇರುವ ಇಂತಹ ಕಂಪನಿಗಳನ್ನ ಶಿಫ್ಟ್ ಮಾಡುತ್ತೇವೆ. ಹಾಗೆಯೇ ಇಂತಹ ಕಂಪನಿಗಳಿಗೆ ಬಾಡಿಗೆ ಕೊಡುವವರ ವಿರುದ್ಧವೂ ‌ಕ್ರಮ ಕೈಗೊಳ್ಳಬೇಕಾಗಿದೆ. ಮುಂದೆ ಈ ರೀತಿ ಆಗದಂತೆ ಜಾಯಿಂಟ್ ಸರ್ವೇ ಮಾಡುತ್ತೇವೆ ಎಂದು ಆಯುಕ್ತರು ಭರವಸೆ ನೀಡಿದರು.

Last Updated : Nov 11, 2020, 3:18 PM IST

ABOUT THE AUTHOR

...view details