ಬೆಂಗಳೂರು : ಕೋವಿಡ್ ವಿರುದ್ಧ ದೊಡ್ಡ ಯುದ್ದ ಮಾಡಬೇಕಿದೆ. ಕೋವಿಡ್ ಟೆಸ್ಟ್ ಮೂರು ಪಟ್ಟು ಹೆಚ್ಚಳ ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ದಿನದಲ್ಲಿ 94 ಸಾವಿರ ಟೆಸ್ಟ್ ಮಾಡುತ್ತಿದ್ದೇವೆ. 1.20 ಲಕ್ಷಕ್ಕೂ ಹೆಚ್ಚು ಟೆಸ್ಟ್ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ರಾಜ್ಯದಲ್ಲಿ 73,599 ಹಾಸಿಗೆಗಳು ಖಾಲಿ ಇವೆ. 11,892 ಆಕ್ಸಿಜನ್ ಹಾಸಿಗೆಗಳು ಲಭ್ಯ ಇವೆ. ಹಾಸಿಗೆಗಳ ಕೊರತೆ ಇಲ್ಲ. 15 ಜಿಲ್ಲೆಗಳಲ್ಲಿ ಶೇ. 10 ಪಾಸಿಟಿವ್ ರೇಟ್ ಹೆಚ್ಚಳವಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಪ್ರತಿದಿನ ಡೆತ್ ಅಡಿಟ್ ಕೂಡ ನಡೆಯುತ್ತಿದೆ. ಶೇ. 33 ರಷ್ಟು ಸಾವು ಪ್ರಕರಣಗಳು ಆಸ್ಪತ್ರೆಗೆ ದಾಖಲಾದ 72 ಗಂಟೆಯಲ್ಲಿ ಆಗುತ್ತಿದೆ. ಬಹಳ ನಿಧಾನವಾಗಿ ಹೋಗಿ ದಾಖಲಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.