ಬೆಂಗಳೂರು: ಇನ್ನೇನು ಕೊರೊನಾ ಮೂರನೇ ಅಲೆ ಆರಂಭವಾಗುವ ಭೀತಿಯಿದ್ದು, ಸದ್ಯ ನಗರಗಳಿಗಿಂತ ಹಳ್ಳಿಗಳೇ ಈ ಅಲೆಯ ಟಾರ್ಗೆಟ್ ಆಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಗರಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಸೋಂಕು ಹರಡುವಿಕೆ ನಿಯಂತ್ರಣವಾಗುತ್ತಿಲ್ಲ. ಕಳೆದೆರಡು ವಾರಗಳಲ್ಲಿ ಸಿಟಿಗಿಂತ ಗ್ರಾಮಾಂತರ ಭಾಗಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮೂರನೇ ಅಲೆಯಲ್ಲಿ ಹೆಚ್ಚು ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಳ್ಳಲಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ಎರಡನೇ ಅಲೆಯಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚು ಸೋಂಕಿನ ಪ್ರಮಾಣ ಪತ್ತೆಯಾಗಿತ್ತು. ಸದ್ಯದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದ್ದು, ಮೆಲ್ಲನೆ ಹಳ್ಳಿಗಳತ್ತ ಸೋಂಕು ಹರಡುತ್ತಿದೆ. ರಾಜ್ಯದ ಹಲವು ಜಿಲ್ಲೆಗಳ ನಗರ ಪ್ರದೇಶಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿದೆ. 21 ಜಿಲ್ಲೆಗಳಲ್ಲಿ ಸಿಟಿ ಬಿಟ್ಟು, ಗ್ರಾಮಾಂತರ ಭಾಗದಲ್ಲಿಯೇ ಸೋಂಕು ಹೆಚ್ಚುತ್ತಿದೆ.
ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಬುಲೆಟಿನ್‌ನಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಕಳೆದ 14 ದಿನಗಳ ಕೊರೊನಾ ಪ್ರಕರಣಗಳನ್ನು ಆಧರಿಸಿ ಆರೋಗ್ಯ ಇಲಾಖೆ ಮಾಹಿತಿ ಕಲೆಹಾಕಿದೆ. ಸಿಟಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಸೋಂಕಿರುವ ರಾಜ್ಯದ ಪ್ರಮುಖ ಜಿಲ್ಲೆಗಳ ವಿವರವನ್ನ ಹೊರ ಹಾಕಿದೆ.
ಚಾಮರಾಜನಗರ
ನಗರ - 148
ಗ್ರಾಮಾಂತರ - 489
ಚಿಕ್ಕಮಗಳೂರು
ನಗರ - 439
ಗ್ರಾಮಾಂತರ - 917
ದಕ್ಷಿಣ ಕನ್ನಡ
ನಗರ - 1226
ಗ್ರಾಮಾಂತರ - 2081
ಹಾಸನ
ನಗರ - 805
ಗ್ರಾಮಾಂತರ - 2145
ಕೊಡಗು
ನಗರ - 189
ಗ್ರಾಮಾಂತರ - 1475
ಕೋಲಾರ
ನಗರ - 199
ಗ್ರಾಮಾಂತರ - 635
ಮಂಡ್ಯ