ಬೆಂಗಳೂರು:ನಗರದ ಮಲ್ಲೇಶ್ವರಂ 6ನೇ ಕ್ರಾಸ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಶಾಖೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಸಿಬ್ಬಂದಿಗೆ ಕೊರೊನಾ: ಮಲ್ಲೇಶ್ವರಂನ ಪಿಎನ್ಬಿ ಶಾಖೆ ಸೀಲ್ ಡೌನ್
ಮಲ್ಲೇಶ್ವರಂ 6ನೇ ಕ್ರಾಸ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಬನಶಂಕರಿಯ ಕಾವೇರಿ ನಗರದ ನಿವಾಸಿ 46 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬ್ಯಾಂಕ್ ಶಾಖೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿಗೆ ಕೊರೊನಾ
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಬನಶಂಕರಿಯ ಕಾವೇರಿ ನಗರದ ನಿವಾಸಿ 46 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ವಿಕ್ರಮ್ ಆಸ್ಪತ್ರೆಗೆ ಗರ್ಭಕೋಶದ ಆಪರೇಷನ್ಗಾಗಿ ದಾಖಲಾದಾಗ ಸೋಂಕು ತಗುಲಿರುವುದು ಗೊತ್ತಾಗಿದೆ.
ಮಹಿಳೆಗೆ ಸೋಂಕು ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕ್ ಶಾಖೆಯನ್ನು ಸೀಲ್ ಡೌನ್ ಮಾಡಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.