ಬೆಂಗಳೂರು: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವ ಆತಂಕ ಮತ್ತಷ್ಟು ಹೆಚ್ಚಾಗ್ತಿದೆ. ಈಗಾಗಲೇ ಸಿಲಿಕಾನ್ ಸಿಟಿಯ ಏರ್ಪೊರ್ಟ್ಗೆ ಬೇರೆ ಬೇರೆ ಕಡೆಯಿಂದ ಬಂದವರನ್ನ ತಪಾಸಣೆ ಮಾಡಿ ಕೋವಿಡ್ 19 ಇರುವವರನ್ನ ಹೋಂ ಕ್ವಾರಟೈಂನ್ ಮಾಡಲಾಗಿತ್ತು. ಶಂಕಿತರ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಇನ್ನೂ ಬೆಂಗಳೂರಿನಲ್ಲಿ 7 ಜನ ಹೋಂ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ನಗರದಲ್ಲಿ ಸಂಚಾರ ನಡೆಸಿರುವುದು ಪತ್ತೆಯಾಗಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊರೊನಾ ಭೀತಿ: ಕ್ವಾರಂಟೈನ್ ಅವಧಿ ಮುಗಿಯದೆ ಓಡಾಡುತ್ತಿದ್ದವರ ಮೇಲೆ ಕೇಸ್ - ಕೊರೊನಾ ವೈರಸ್ ಕರ್ನಾಟಕ ಲೆಟೆಸ್ಟ್ ನ್ಯೂಸ್
ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಮನೆ ಬಿಟ್ಟು ಹೊರಗಡೆ ಓಡಾಡಿದ 7ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ವೈರಸ್ ಹರಡುವ ಭೀತಿಯಿಂದ ಹೋಂ ಕ್ವಾರಂಟೈನ್ನಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿತ್ತು. ಆದರೆ 14 ದಿನಗಳ ಅವಧಿಗೂ ಮುನ್ನವೇ ಕ್ವಾರಂಟೈನ್ಗೆ ಒಳಗಾದವರು ನಗರದ ಹಲವೆಡೆ ಓಡಾಡಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ ಹೋಂ ಕ್ವಾರಂಟೈನ್ಗೆ ಒಳಗಾದವರು 14 ದಿನ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆ ನಿನ್ನೆ ಮತ್ತು ಇಂದು ಆರೋಗ್ಯ ಇಲಾಖಾಧಿಕಾರಿಗಳು, ನೂಡಲ್ ಆಫೀಸರ್ ಇಶಾಪಂಥ್ ಹಾಗೂ ಠಾಣಾ ವ್ಯಾಪ್ತಿಯ ಪೊಲೀಸರು ಮನೆ ಮನೆಗೆ ತೆರಳಿ ಕೋವಿಡ್-19 ಒಳಗಾಗಿರುವ ವ್ಯಕ್ತಿಗಳು ಹೋಂ ಕ್ವಾರಟೈಂನ್ನಲ್ಲಿದ್ದಾರಾ ಎಂಬ ತಪಾಸಣೆ ನಡೆಸಿಲಾಗಿದೆ. ಈ ವೇಳೆ ಸುಮಾರು 7ಕ್ಕೂ ಹೆಚ್ಚು ಜನ ಮನೆ ಬಿಟ್ಟು ಹೊರಗಡೆ ಓಡಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದಂತೆ ಹೋಂ ಕ್ವಾರಟೈಂನ್ಗೆ ಒಳಗಾದ ವ್ಯಕ್ತಿಗಳು ತಪ್ಪಿಸಿಕೊಂಡು ಹೋದರೆ ಅಥವಾ ಮನೆಯ ಹೊರಗಡೆ ಓಡಾಡಿ ಬೇರೆಯವರಿಗೆ ಸೋಂಕು ಹರಡಿಸಿದರೆ ಅಂತವರ ವಿರುದ್ಧ ಸೆಕ್ಷನ್ 269ರ ಅಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಸದ್ಯ ಸಿಲಿಕಾನ್ ಸಿಟಿಯಲ್ಲಿ 7 ಜನ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದ ವ್ಯಕ್ತಿಗಳು ನಗರದ ಹಲವೆಡೆ ಓಡಾಟ ನಡೆಸಿದ್ದು ಅವರ ವಿರುದ್ಧ ಕೇಸ್ ದಾಖಲಾಗಿದೆ.