ಕರ್ನಾಟಕ

karnataka

ವಿಧಾನಸೌಧ ಪ್ರವೇಶಿಸುವ ಸಚಿವರು, ಶಾಸಕರ ಕೈಗೆ ಸ್ಯಾನಿಟೈಜರ್ ಬಳಕೆ

ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧದ ಎಲ್ಲಾ ದ್ವಾರಗಳಲ್ಲಿ ಸ್ಯಾನಿಟೈಜರ್ ಬಳಕೆ ಮಾಡಲಾಗುತ್ತಿದೆ.

By

Published : Mar 17, 2020, 1:06 PM IST

Published : Mar 17, 2020, 1:06 PM IST

ವಿಧಾನಸೌಧಕ್ಕೆ ಕೊರೊನಾ ವೈರಸ್ ಭೀತಿ  Sanitizer in Vidhanasoudha
ವಿಧಾನಸೌಧಕ್ಕೆ ಕೊರೊನಾ ವೈರಸ್ ಭೀತಿ

ಬೆಂಗಳೂರು: ವಿಧಾನಸೌಧಕ್ಕೂ ಕೊರೊನಾ ವೈರಸ್ ಭೀತಿ ತಟ್ಟಿದ್ದು, ಶಕ್ತಿಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ.

ಇಂದು ವಿಧಾನಸೌಧದ ಎಲ್ಲಾ ದ್ವಾರಗಳಲ್ಲಿಯೂ ಸಚಿವರುಗಳು, ಶಾಸಕರುಗಳ ಕೈಗೆ ಸ್ಯಾನಿಟೈಜರ್ ಹಾಕಲಾಗುತ್ತಿದೆ.

ಓದಿ:ರಾಜ್ಯದಲ್ಲಿ ಇದುವರೆಗೆ ಪತ್ತೆಯಾದ ಕೊರೊನಾ​ ಸೋಂಕಿತ ಪ್ರಕರಣಗಳ ವಿವರ ಇಲ್ಲಿದೆ..

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಶಿವರಾಂ ಹೆಬ್ಬಾರ್, ಆರ್.ಅಶೋಕ್, ರೇಣುಕಾಚಾರ್ಯ ಮುಂತಾದವರು ತಮ್ಮ ಕೈಗೆ ಸ್ಯಾನಿಟೈಸರ್ ಹಾಕಿಸಿಕೊಂಡು ಶುಚಿಗೊಳಿಸಿಕೊಂಡರು.

ವಿಧಾನಸೌಧದ ಎಲ್ಲಾ ದ್ವಾರಗಳಲ್ಲಿ ಮುನ್ನೆಚ್ಚರಿಕಾ ಕ್ರಮ

ಈಗಾಗಲೇ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ABOUT THE AUTHOR

...view details