ಬೆಂಗಳೂರು: ಕೆಲಸ ಖಾಯಂ ಮಾಡುವಂತೆ ಪಟ್ಟುಹಿಡಿದ ಬಿಎಂಟಿಸಿ, ಕೆಎಸ್ಆರ್‌ಟಿಸಿ ನೌಕರರು ಇಂದು ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ರು.
ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ: ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರ ಮನವಿ - kanandanews
ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರು ಮುಖ್ಯಮಂತ್ರಿಗಳಿಗೆ ಅಹವಾಲು ನೀಡಿದ್ರು.
ಪದ್ಮನಾಭನಗರದ ನಿವಾಸದ ಎದುರು ಅವರ ಬರುವಿಕೆಗಾಗಿ ಕಾದು ಕುಳಿತ ಪ್ರತಿಭಟನಾಕಾರರು, ಸಿಎಂ ಆಗಮಿಸುತ್ತಿದ್ದಂತೆ ಅವರ ಬಳಿ ಹೋಗಿ ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ ಅಂತ ಮನವಿ ಮಾಡಿದರು. ಇತ್ತೀಚೆಗಷ್ಟೆ ಪೊಲೀಸರ ವೇತನ ಹೆಚ್ಚಳ ಮಾಡಿದ ಸಿಎಂ ಕುಮಾರಸ್ವಾಮಿ ಅವರ ಮುಂದೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದು, ಸಿಎಂ ಕುಮಾರಸ್ವಾಮಿ ಕಾಲಿಗೆ ಬಿದ್ದು ನೌಕರರ ಅಳಲು ತೋಡಿಕೊಂಡರು.
ಜೊತೆಗೆ ಖಾಸಗಿ ಶಾಲೆಯ ಶಿಕ್ಷಕರು ಸಿಎಂಗೆ ಮನವಿ ಮಾಡಿ ಖಾಸಗಿ ಶಾಲೆಗಳನ್ನು ಅನುದಾನಿತ ಶಾಲೆಗಳಾಗಿ ಮಾಡುವಂತೆ ಗೋಗರೆದರು. ಈ ವೇಳೆ ಶಿಕ್ಷಕರೊಬ್ಬರು ನಡು ರಸ್ತೆಯಲ್ಲಿ ಸಿಎಂ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಕಂಡು ಬಂತು. ಇಬ್ಬರಿಂದಲೂ ಅಹವಾಲು ಸ್ವೀಕರಿಸಿ ಹೊರಟ ಸಿಎಂ ಹೆಚ್ ಡಿಕೆ, ನಿಮ್ಮ ಕೆಲಸ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿ ತೆರಳಿದ್ರು.