ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಟೀಕೆ ಮುಂದುವರೆಸಿದ್ದು, ಬಿಜೆಪಿಯ ಭ್ರಷ್ಟೋತ್ಸವ ಅಧ್ಯಾಯ ಅಂತಿಮ ಹಂತಕ್ಕೆ ಬಂದಂತಿದೆ ಎಂದಿದೆ.
'ನಷ್ಟ'ವಾಗುವುದು ಯಾರ ಮಾನ ಎಂದು ಗೊತ್ತಿದ್ದೂ ಈ ಭ್ರಷ್ಟ ಸರ್ಕಾರ ಕೇಸ್ ದಾಖಲಿಸುವ ಧೈರ್ಯ ತೋರುತ್ತಾ?. 'ಮನಿ'ರತ್ನ ಮಾನನಷ್ಟ ಮೊಕದ್ದಮೆ ಹೂಡುತ್ತಾರಾ?. ದಾಖಲೆ ಇದ್ದರೆ ಬಹಿರಂಗಪಡಿಸಲಿ ಎನ್ನುತ್ತಿದ್ದ ಸಿಎಂ ಬೊಮ್ಮಾಯಿ ಈಗ ಏನು ಹೇಳುತ್ತಾರೆ ಎಂದು ಕೈ ಪಕ್ಷ ಪ್ರಶ್ನಿಸಿದೆ.
ಬಿಎಸ್ವೈ ಮುಕ್ತ ಬಿಜೆಪಿ ಅಧ್ಯಾಯ ಮುಗಿದಿದೆ ಎಂದುಕೊಳ್ಳುತ್ತಿರುವಾಗಲೇ ಯಡಿಯೂರಪ್ಪ ಪುನಃ ದೆಹಲಿಗೆ ಹೊರಟಿದ್ದಾರೆ. ಯತ್ನಾಳ್ ಹೇಳಿದಂತೆ 'ತಿರುಪತಿ ಅಗ್ರಿಮೆಂಟ್' ನಂತರ ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ. ಬಿಎಸ್ವೈ ದೆಹಲಿ ಭೇಟಿಯ ಮರ್ಮವೇನು ಎಂದು ಕೇಳಿದೆ.