ಕರ್ನಾಟಕ

karnataka

ETV Bharat / state

ವಿವಿಧ ಹುದ್ದೆಗಳ ಪಟ್ಟಿ ಅಂತಿಮಗೊಳಿಸಲು ದಿಲ್ಲಿಗೆ ತೆರಳಿದ ರಾಜ್ಯ ನಾಯಕರು

ಎಐಸಿಸಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಸೋನಿಯಾ ಗಾಂಧಿ ನಡೆಸುತ್ತಿರುವ ಮೊದಲ ಮಹತ್ವದ ಸಭೆ ಇದಾಗಿದ್ದು, ಎಲ್ಲಾ ರಾಜ್ಯದ ಸಿಡಬ್ಲ್ಯುಸಿ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ ರಾಜ್ಯದ ಕಾಂಗ್ರೆಸ್ ಶಾಸಕಾಂಗ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಿದ್ದಾರೆ.

By

Published : Sep 11, 2019, 11:27 PM IST

Congress leaders

ಬೆಂಗಳೂರು: ರಾಜ್ಯ ನಾಯಕರು ಇಂದು ಸಾಲು ಸಾಲಾಗಿ ದೆಹಲಿಗೆ ತೆರಳಿದ್ದು, ನಾಳೆ ಮಹತ್ವದ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಎಐಸಿಸಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಸೋನಿಯಾ ಗಾಂಧಿ ನಡೆಸುತ್ತಿರುವ ಮೊದಲ ಮಹತ್ವದ ಸಭೆ ಇದಾಗಿದ್ದು, ಎಲ್ಲಾ ರಾಜ್ಯದ ಸಿಡಬ್ಲ್ಯುಸಿ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ ರಾಜ್ಯದ ಕಾಂಗ್ರೆಸ್ ಶಾಸಕಾಂಗ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಿದ್ದಾರೆ.

ಈಶ್ವರ್ ಖಂಡ್ರೆ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ತಮ್ಮ ಕ್ಷೇತ್ರವಾದ ಬಾಲ್ಕಿಗೆ ತೆರಳಿದ್ದು, ಅಲ್ಲಿಂದಲೇ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸಂಜೆ ಮಾಜಿ ಸಚಿವ ಜಮೀರ್ ಅಹಮ್ಮದ್ ಅವರೊಂದಿಗೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ದಿನೇಶ್ ಗುಂಡೂರಾವ್ ಕೂಡ ಹಿಂದೆ ಪ್ರತ್ಯೇಕವಾಗಿ ದಿಲ್ಲಿಗೆ ತೆರಳಿದ್ದಾರೆ.

ಈ ಮೂವರು ನಾಯಕರು ನಾಳೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲಿದ್ದು, ಪ್ರತಿಪಕ್ಷದ ನಾಯಕ ಸ್ಥಾನ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರ ಸ್ಥಾನ ಸೇರಿದಂತೆ ವಿವಿಧ ಸ್ಥಾನಗಳ ನಾಯಕರ ಆಯ್ಕೆಯ ಅಂತಿಮ ಹಂತದ ಚರ್ಚೆ ನಡೆಸಲಿದ್ದಾರೆ. ಬಹುಶಃ ನಾಳೆಯ ಸಭೆಯಲ್ಲಿ ರಾಜ್ಯದಲ್ಲಿ ಯಾವ್ಯಾವ ನಾಯಕರ ಸ್ಥಾನ ಬದಲಾಗಲಿದೆ ಯಾರು ಹೊಸದಾಗಿ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವುದು ಅಂತಿಮವಾಗಲಿದೆ.

ಪ್ರತಿಪಕ್ಷದ ನಾಯಕ ಯಾರು?
ಈಗಾಗಲೇ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ ಇದರಿಂದ ಕಾಂಗ್ರೆಸ್ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಸಚಿವ ಎಚ್ .ಕೆ .ಪಾಟೀಲ್ ಅವರನ್ನು ಪರಿಗಣಿಸಬೇಕೆಂದು ಹಲವರು ಒತ್ತಡ ಹೇರುತ್ತಿದ್ದು, ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಿದ್ದರೂ ಮತಬ್ಯಾಂಕ್ ಸೆಳೆಯುವಲ್ಲಿ ವಿಫಲವಾಗಿದ್ದೇವೆ. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ನೀಡಿ ಮತಗಳನ್ನಾದರೂ ಉಳಿಸಿಕೊಳ್ಳೋಣ ಎನ್ನುವ ಮಾತನ್ನು ಕೂಡ ಅವರು ಆಡಿದ್ದಾರೆ. ಇದರಿಂದ ನಾಳಿನ ಸಭೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷದ ನಾಯಕರ ಆಯ್ಕೆ ಅತ್ಯಂತ ಪ್ರಮುಖ ವಿಚಾರವಾಗಿ ಬಿಂಬಿತವಾಗಿದ್ದು, ಸಂಜೆಯ ಹೊತ್ತಿಗೆ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ABOUT THE AUTHOR

...view details