ಕರ್ನಾಟಕ

karnataka

ಬೇಸರದಿಂದ ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಕಾಂಗ್ರೆಸ್​​ ಅಭ್ಯರ್ಥಿ ನಾರಾಯಣಸ್ವಾಮಿ

ಕೆ.ಆರ್.ಪುರಂ ಉಪ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಬೇಸರದಿಂದ ಹೊರ ನಡೆದರು.

By

Published : Dec 9, 2019, 12:15 PM IST

Published : Dec 9, 2019, 12:15 PM IST

ಎಂ.ನಾರಾಯಣಸ್ವಾಮಿ
ಎಂ.ನಾರಾಯಣಸ್ವಾಮಿ

ಬೆಂಗಳೂರು:‌ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶದ 6ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.

ಇಂದು ಬೆಳಗ್ಗೆ ಗೆಲ್ಲುವ ವಿಶ್ವಾಸದಿಂದ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೊಸೇಫ್ ಹೈಸ್ಕೂಲ್​ನ‌ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಸುಮಾರು 11 ಗಂಟೆವರೆಗೂ ಮತ ಎಣಿಕೆ ಕೇಂದ್ರದಲ್ಲಿದ್ದ ಅವರು, ತಮಗೆ ಹಿನ್ನಡೆಯಾಗುತ್ತಿದ್ದಂತೆ ಬೇಸರದಿಂದ ಹೊರ ನಡೆದಿದ್ದಾರೆ.

ಬೇಸರದಿಂದ ಹೊರ ನಡೆದ ಎಂ.ನಾರಾಯಣಸ್ವಾಮಿ

ಇನ್ನು ಏಳನೇ ಸುತ್ತು ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ 36,954, ಕಾಂಗ್ರೆಸ್ ಎಂ.ನಾರಾಯಣಸ್ವಾಮಿ 14,312 ಹಾಗೂ ಜೆಡಿಎಸ್ ಅಭ್ಯರ್ಥಿಗೆ 430 ಮತಗಳು ಸಿಕ್ಕಿವೆ.

For All Latest Updates

ABOUT THE AUTHOR

...view details