ಕರ್ನಾಟಕ

karnataka

By

Published : Dec 14, 2019, 3:50 PM IST

ETV Bharat / state

ಹೋಟೆಲ್​ನಲ್ಲಿ ಭೋಜನ ಸವಿದು ಸಿಬ್ಬಂದಿ ಜತೆ ಸೆಲ್ಫಿಗೆ ಪೋಸ್​ ಕೊಟ್ಟ ಸಿಎಂ..

ತಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಸಿಎಂ ಯಡಿಯೂರಪ್ಪ ಹೋಟೆಲೊಂದಕ್ಕೆ ಭೇಟಿ ನೀಡಿ ಊಟ ಸವಿದರು. ಜೊತೆಗೆ ಹೋಟೆಲ್ ಸಿಬ್ಬಂದಿ ಜೊತೆ ಸೆಲ್ಫಿಗೆ ಪೋಸ್​ ಕೊಟ್ಟರು.

ಎಂಟಿಆರ್​ ಹೋಟೆಲ್​ನಲ್ಲಿ ಭೋಜನ ಸವಿದ ಸಿಎಂ, Cm yadiyurappa eat lunch in MTR hotel
ಭೋಜನ ಸವಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಬಸವನಗುಡಿಯಲ್ಲಿ ರಾಷ್ಟ್ರೀಯ ಮೀನುಗಾರರ ಸಮಾವೇಶ ಮುಗಿಸಿದ ಬಳಿಕ ಸಿಎಂ ಯಡಿಯೂರಪ್ಪ ಲಾಲ್‌ಬಾಗ್ ರಸ್ತೆಯಲ್ಲಿರುವ ಪ್ರಸಿದ್ಧ ಎಂಟಿಆರ್‌ ಹೋಟೆಲ್​ನಲ್ಲಿ ಊಟ ಮಾಡಿದರು.‌

ಭೋಜನ ಸವಿದ ಸಿಎಂ ಯಡಿಯೂರಪ್ಪ..

ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಹೋಟೆಲ್‌ನಲ್ಲಿ ಇದ್ದ ಸಿಎಂ ಯಡಿಯೂರಪ್ಪಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು. ಪೂರಿ ಊಟ ಸವಿದ ಸಿಎಂ ಯಡಿಯೂರಪ್ಪ ಆ ಸಮಯದಲ್ಲೇ ಹೋಟೆಲ್ ಸಿಬ್ಬಂದಿ ಜತೆ ಸೆಲ್ಫಿಗೂ ಪೋಸ್ ಕೊಟ್ಟರು.

ಹೋಟೆಲ್​ಗೆ ಬಂದಿದ್ದ ಕೆಲ ಗ್ರಾಹಕರೂ ಸಿಎಂ ನೋಡಿ ಅಚ್ಚರಿಗೊಂಡರು. ಸಿಎಂ ಜೊತೆ ಕೆಲ ಗ್ರಾಹಕರು ನಿಂತು ಸೆಲ್ಫಿ ತೆಗೆಸಿಕೊಂಡರು.

For All Latest Updates

TAGGED:

ABOUT THE AUTHOR

...view details