ಕರ್ನಾಟಕ

karnataka

ETV Bharat / state

COVID ಸಂಕಷ್ಟಕ್ಕೊಳಗಾದವರಿಗೆ ಸರ್ಕಾರದಿಂದ 2,500 ಕೋಟಿ ರೂ. ಪರಿಹಾರ: ಸಿಎಂ - ಕೊರೊನಾ ವಾರಿಯರ್ಸ್​​ಗಳಿಗೆ ಪುಷ್ಪಾರ್ಚನೆ

ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲು-ರಾತ್ರಿ ಸೇವೆ ಸಲ್ಲಿಸಿರುವ ಕೊರೊನಾ ವಾರಿಯರ್ಸ್​ಗೆ ಸರ್ಕಾರದಿಂದ ಸನ್ಮಾನ ಹಾಗೂ ಕಿಟ್​ಗಳ ವಿತರಿಸಲಾಗಿದೆ. ಸಿಎಂ ಬಿ ಎಸ್​ವೈ ನೇತೃತ್ವದಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಸಮಾರಂಭದಲ್ಲಿ 10 ಮಂದಿಗೆ ಸನ್ಮಾನ, ಪರಿಹಾರಧನ ವಿತರಿಸಲಾಗಿದೆ.

CM BSY distributed compensation to covid warriors in Bangalore
ಕೊರೊನಾ ವಾರಿಯರ್ಸ್​ಗಳಿಗೆ ಸಿಎಂ ಬಿಎಸ್​​ವೈ ನೇತೃತ್ವದಲ್ಲಿ ಸನ್ಮಾನ

By

Published : Jul 3, 2021, 1:57 PM IST

ಬೆಂಗಳೂರು: ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರದ ವತಿಯಿಂದ 2,500 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್​​ಗೆ ಸನ್ಮಾನ, ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಕೊರೊನಾ ವಾರಿಯರ್ಸ್​​ಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರ ಕಿಟ್ ಹಾಗೂ ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸಿರುವುದು ಹೆಮ್ಮೆಯ ಸಂಗತಿ. ಸಂಕಷ್ಟಕ್ಕೆ ಒಳಗಾದವರಿಗೆ ನಾವು ನೇರವಾಗಿ ಖಾತೆಗೆ ಹಣನೀಡಿದ್ದೇವೆ. ರಾಜ್ಯದಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ. ಇನ್ನಷ್ಟು ಮಂದಿಗೆ ವಿತರಿಸುತ್ತೇವೆ. ಕೊರೊನಾ ಸೇನಾನಿಗಳು ಜೀವ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೆ ಪ್ರಧಾನಿ ‌ನರೇಂದ್ರ ಮೋದಿ ಅವರು ಗೌರವಿಸಿದ್ದಾರೆ. ನಾವು ಸಹ ಈಗ ಹೆಚ್ಚಿನವರಿಗೆ ಗೌರವಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಅವಧೂತ ವಿನಯ್ ಗುರೂಜಿ, ಕಂದಾಯ ಸಚಿವ ಆರ್​​.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಮಾಜಿ ಸದಸ್ಯ ಕೆ.ಸಿ ರಾಮಮೂರ್ತಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್​​.ಆರ್ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ಭೀಕರ ಅಪಘಾತ: ನಿರ್ದೇಶಕ ಸೂರ್ಯೋದಯ ಪುತ್ರ ವಿಧಿವಶ

ABOUT THE AUTHOR

...view details