ಕರ್ನಾಟಕ

karnataka

ETV Bharat / state

ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಜೊತೆಯಲ್ಲಿದೆ: ಮುಖ್ಯಮಂತ್ರಿ ಬೊಮ್ಮಾಯಿ - Jagadish Shettar Joins Congress

ಚುನಾವಣೆ ಪ್ರಚಾರ ಮತ್ತು ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ಸೇರ್ಪಡೆ ಕುರಿತು ಸಿಎಂ ಬೊಮ್ಮಾಯಿ ಪತ್ರಿಕ್ರಿಯೆ ಹೀಗಿದೆ ನೋಡಿ.

cm
ಮುಖ್ಯಮಂತ್ರಿ ಬೊಮ್ಮಾಯಿ

By

Published : Apr 17, 2023, 12:08 PM IST

Updated : Apr 17, 2023, 1:22 PM IST

ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್​ನವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಕರೆದುಕೊಂಡಿರಬಹುದು ಆದರೆ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಜೊತೆಯಲ್ಲಿದೆ. ಯಡಿಯೂರಪ್ಪ ಇರುವವರೆಗೂ ಆ ಸಮುದಾಯ ಬಿಜೆಪಿ ಜೊತೆಯಲ್ಲಿಯೇ ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವರುಣಾಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಕಡೆ ಪ್ರಚಾರಕ್ಕೆ ಹೋಗಿ ಬಂದಿದ್ದೇನೆ. ಗ್ರೌಂಡ್ ನಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್​ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು. ಆದರೆ ವೋಟ್ ಬ್ಯಾಂಕ್ ನಮ್ಮಿಂದ ದೂರ ಹೋಗಿಲ್ಲ. ಆದರೆ ಅವರ ವೋಟ್ ಬ್ಯಾಂಕ್ ಸಂಪೂರ್ಣ ಕುಸಿದಿದೆ. ಬಿಜೆಪಿ ಕಡೆ ಹೆಚ್ಚಿನ ಒಲವು ಇದೆ ಎಂದರು.

ಪಕ್ಷ ತೊರೆಯುವ ವೇಳೆ ಶೆಟ್ಟರ್ ಮಾಡಿರುವ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರೂ ಒಂದು ಕಾರಣ ಕೊಡಬೇಕು ಅಲ್ವಾ? ಕಳೆದ 25 ವರ್ಷದ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್​ಗೆ ಎಲ್ಲವನ್ನು ಕೊಟ್ಟಿದೆ. ಅವರನ್ನು ಕಡೆಗಣಿಸಿರಲಿಲ್ಲ. ಆದರೂ ಅವರು ಹೋಗಿದ್ದಾರೆ ಅದಕ್ಕೊಂದು ನೆಪ ಅಷ್ಟೇ. ಜಗದೀಶ್ ಶೆಟ್ಟರ್ ಕೋರ್ ಕಮಿಟಿಯಲ್ಲಿದ್ದವರು ತೀರ್ಮಾನ ತೆಗೆದುಕೊಳ್ಳುವ ಮಟ್ಟದಲ್ಲಿದ್ದವರು. ಈಗ ಒಂದು ಕಾರಣ ಬೇಕು, ಹಾಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಶೆಟ್ಟರ್ ಆರೋಪಗಳನ್ನೆಲ್ಲಾ ತಳ್ಳಿ ಹಾಕಿದರು.

ಮತ್ತೆ ಬಿಜೆಪಿಗೆ ಶೆಟ್ಟರ್ ವಾಪಸ್ ಬಂದರೆ ಸ್ವಾಗತ ಮಾಡುತ್ತೀರ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಾನು ಅವರು ಮತ್ತೆ ಬಿಜೆಪಿಗೆ ವಾಪಸ್ ಬರ್ತಾರೆ ಅನ್ನೋ ನಿರೀಕ್ಷೆ ಮಾಡಲ್ಲ ಎಂದರು. ಕಾಂಗ್ರೆಸ್‌ ಹಿರಿಯ ನಾಯಕರನ್ನು ಬಳಸಿಕೊಂಡು ಬಿಸಾಡಿ, ಹೊರಗಡೆ ಹಾಕಿದೆ. ವಿರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸರನ್ನು ಹೊರಹಾಕಿದ್ದರು. ಅಂತಹ ಪಕ್ಷಕ್ಕೆ ಈಗ ಹೋಗಿದ್ದಾರೆ, ಜಗದೀಶ ಶೆಟ್ಟರ್ ಅವರನ್ನು ಬಳಸಿಕೊಂಡು ಹೊರಗೆ ಹಾಕುತ್ತಾರೆ. ಮೊದಲು ಸನ್ಮಾನ ಚುನಾವಣಾ ಬಳಿಕ ಅವಮಾನ ಮಾಡ್ತಾರೆ ಎಂದು ಕಾಂಗ್ರೆಸ್​ ವಿರುದ್ಧ ಆರೋಪಿಸಿದ ಸಿಎಂ, ಬಿಎಸ್ ವೈ ಇರೋತನಕ ಲಿಂಗಾಯತರು ನಮ್ಮ ಜೊತೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ ಬಿಟ್ಟಿರುವುದು ನಷ್ಟವಿಲ್ಲ: ಜಗದೀಶ್​ ಶೆಟ್ಟರ್​ ಅವರ ರಾಜೀನಾಮೆ ಕುರಿತಾಗಿಯೇ ನಿನ್ನೆ ಕೂಡ ಮುಖ್ಯಮಂತ್ರಿ ಬೊಮ್ಮಾಯಿ ಹೊಸಪೇಟೆಯಲ್ಲಿ ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು. ಜಗದೀಶ್​​ ಶೆಟ್ಟರ್​ ಪಕ್ಷ ಬಿಟ್ಟಿರುವುದರಿಂದ ನಷ್ಟವಿಲ್ಲ, ಪಕ್ಷಕ್ಕೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದಿದ್ದರು. ಅಲ್ಲದೆ, ಬಿಜೆಪಿಯಲ್ಲಿ ಮೋದಿಯವರು ಕಾಲ ಕಾಲಕ್ಕೆ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಶಾಸಕರು, ಸಚಿವರು, ಸಿಎಂ ಬದಲಾವಣೆ ಮಾಡುವ ಧೈರ್ಯ ಮೋದಿ ಮತ್ತು ಬಿಜೆಪಿಗೆ ಮಾತ್ರ ಇದೆ ಎಂದರು.

ಈ ಬಾರಿಯ ಬದಲಾವಣೆ ಹಲವಾರು ಸರ್ವೇ ಹಾಗು ಬೇರೆ ಬೇರೆ ಕಾರಣಗಳಿಂದ ಆಗಿದೆ. ಇದೆಲ್ಲವನ್ನು ಪಕ್ಷಕ್ಕೆ ನಿಭಾಯಿಸುವ ಶಕ್ತಿ ಇದೆ. ಕೆಲವು ಹಿರಿಯ ಬಿಜೆಪಿ ನಾಯಕರು ಅವರೇ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಮೂಲಕ ಹೊಸಬರಿಗೆ ಯುವಕರಿಗೆ ಅವಕಾಶ ಮಾಡಿಕೊಟ್ಟರು. ಜಗದೀಶ್​ ಶೆಟ್ಟರ್​ ಕೂಡ ಯುವಕರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು ಎಂದು ಶೆಟ್ಟರ್​ ವಿರುದ್ಧ ಸಿಎಂ ಹರಿಹಾಯ್ದಿದ್ದರು.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರ ತವರಿನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ; ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಹಿಂದೂ ಮುಖಂಡನ ಸ್ಪರ್ಧೆ

Last Updated : Apr 17, 2023, 1:22 PM IST

ABOUT THE AUTHOR

...view details