ಕರ್ನಾಟಕ

karnataka

ETV Bharat / state

ಸ್ಮಶಾನದ ಸಿಬ್ಬಂದಿಗೆ ಕೊರೊನಾ ಭಯ : ಮೃತದೇಹಗಳನ್ನ ಮಣ್ಣು ಮಾಡಲ್ಲ ಎಂದು ಹಠ ಹಿಡಿದ ನೌಕರರು

ಹೊಸೂರು ರಸ್ತೆಯಲ್ಲಿರುವ ಸ್ಮಶಾನಕ್ಕೆ, ಪ್ಯಾಕ್ ಮಾಡದೆ ಕೋವಿಡ್ ಮೃತದೇಹ ರವಾನೆಯಾಗಿದ್ದು, ಪ್ಯಾಕ್ ಆಗದ ಮೃತದೇಹ ಕಂಡು ಸ್ಮಶಾನ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ.

By

Published : Apr 22, 2021, 5:23 PM IST

Updated : Apr 22, 2021, 5:42 PM IST

cemetery-staff-facing-fear-of-infection-in-bengalore
ಸ್ಮಶಾನದ ಸಿಬ್ಬಂದಿಗೆ ಜೀವ ಭಯ

ಬೆಂಗಳೂರು:ಸ್ಮಶಾನದಲ್ಲಿರೋ ಸಿಬ್ಬಂದಿಗೆ ಕೋವಿಡ್​ ಭಯ ಶುರುವಾಗಿದ್ದು, ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಲ್ಲವೆಂದು ಹಠ ಹಿಡಿದು ಕುಳಿತಿರುವ ಘಟನೆ ನಗರದಲ್ಲಿ ನಡೆದಿದೆ.

ಸರ್ಕಾರದ ನಿಯಮಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಎಂದು ಸ್ಮಶಾನದ ಸಿಬ್ಬಂದಿ ವಾರ್ನ್ ಮಾಡಿದ್ದು, ಕೋವಿಡ್​ನಿಂದ ಮೃತಪಟ್ಟ ಶವಗಳನ್ನು ಪ್ಯಾಕ್ ಮಾಡಿ ಮಾಡಿ ಸಿಬ್ಬಂದಿ ಸುಸ್ತಾಗಿದ್ದಾರೆ.

ಸ್ಮಶಾನದ ಸಿಬ್ಬಂದಿಗೆ ಕೊರೊನಾ ಭಯ

ಕೋವಿಡ್ ಸೋಂಕಿತರ ಮೃತದೇಹಗಳಿಂದ ವ್ಯಾಪಕವಾಗಿ ಸೋಂಕು ಹರಡುವ ಆತಂಕದ ಕಾರಣ, ಪೂರ್ತಿಯಾಗಿ ಪ್ಯಾಕ್ ಮಾಡಿ ಸ್ಮಶಾನಕ್ಕೆ ಕಳುಹಿಸಲಾಗುತ್ತದೆ. ಆದರೆ, ಇತ್ತೀಚೆಗೆ ಸೋಂಕಿತರ ಮೃತದೇಹಗಳನ್ನು ಪ್ಯಾಕ್ ಮಾಡದೆ ರವಾನಿಸಲಾಗುತ್ತಿದೆಯಂತೆ.

ಹೊಸೂರು ರಸ್ತೆಯಲ್ಲಿರುವ ಸ್ಮಶಾನಕ್ಕೆ, ಪ್ಯಾಕ್ ಮಾಡದೆ ಕೋವಿಡ್ ಮೃತದೇಹ ರವಾನೆಯಾಗಿದ್ದು, ಪ್ಯಾಕ್ ಆಗದ ಮೃತದೇಹ ಕಂಡು ಸ್ಮಶಾನ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.

ಓದಿ:ಆಸ್ಪತ್ರೆಯಲ್ಲಿನ ಹೊರಾವರಣದಲ್ಲೇ ರೋಗಿಗೆ ಚಿಕಿತ್ಸೆ: ಬೀದಿಪಾಲಾಗುತ್ತಿದ್ದಾರಾ ರೋಗಿಗಳು?

Last Updated : Apr 22, 2021, 5:42 PM IST

ABOUT THE AUTHOR

...view details