ಬೆಂಗಳೂರು: ಸತತವಾಗಿ ಮೂರನೇ ದಿನವು ವಿಧಾನಸಭೆ ಕಲಾಪದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ತನ್ನ ಧರಣಿಯನ್ನು ಮುಂದುವರೆಸಿದೆ.
‘ಬ್ಲ್ಯೂ ಬಾಯ್ಸ್’ ಎಂದು ಘೋಷಣೆ ಕೂಗಿ ಕೈ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದರು. ಸದನದ ಬಾವಿಗಿಳಿದು ಆಡಳಿತ ಪಕ್ಷದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈ ವೇಳೆ ‘ಸಿಡಿ ಸರ್ಕಾರ, ಅಶ್ಲೀಲ ಸರ್ಕಾರಕ್ಕೆ ಧಿಕ್ಕಾರ.. ಅಯ್ಯಯ್ಯೋ ಅಯ್ಯಯ್ಯೋ ಅನ್ಯಾಯ ಅನ್ಯಾಯ.. ಮಹಿಳಾ ವಿರೋಧಿ ಸರ್ಕಾರಕ್ಕೆ ಧಿಕ್ಕಾರ.. ಬೇಕೇ ಬೇಕು ರಾಜೀನಾಮೆ ಬೇಕು’ ಎಂದು ಘೋಷಣೆ ಕೂಗಿದರು.
ಸಿಎಂ ಯಡಿಯೂರಪ್ಪ ಬಜೆಟ್ ಮೇಲಿನ ಚರ್ಚೆಗೆ ಲಿಖಿತ ಉತ್ತರ ಓದುವಾಗ, ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಕೈ ನಾಯಕರ ಗದ್ದಲದ ನಡುವೆಯೂ ಸಿಎಂ ಬಿಎಸ್ವೈ ತಮ್ಮ ಲಿಖಿತ ಉತ್ತರವನ್ನು ಕಲಾಪದಲ್ಲಿ ಓದಿ ಮುಗಿಸಿದರು.